ಸೋಲು ಖಚಿತವಾಗ್ತಿದ್ದಂತೆ ಗಾಲ್ಫ್‌ ಸ್ಟಿಕ್ ಹಿಡಿದು ಗ್ರೌಂಡ್‌ನತ್ತ ಟ್ರಂಪ್

ಅಮೆರಿಕದ ಮಾಧ್ಯಮಗಳು ಜಾಯ್ ಬೈಡನ್ ಗೆಲುವಿನ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಲ್ಫ್‌ ಸ್ಟಿಕ್ ಹಿಡಿದು ಗ್ರೌಂಡ್‌ನತ್ತ ತೆರಳಿದ್ದಾರೆ.

Trump Goes Golfing As US Media Declares Victory For Joe Biden dpl

ಸ್ಟೆರ್ಲಿಂಗ್(ನ.08): ಜಗತ್ತೇ ನೋಡುತ್ತಿರುವಾಗ ತಾನು ಸೋತೆ ಎಂದು ಗೊತ್ತಾದಾಗ ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಯಾಕ್ಷನ್ ಹೇಗಿತ್ತು ಗೊತ್ತಾ..? ಭಾರೀ ಕುತೂಹಲಕ್ಕೆ ಕಾರಣವಾದ ಅಮೆರಿಕ ಅಧ್ಯಕ್ಷೀಯ ಚುನಾವಣೆ, ಗೆಲುವಿನ ಗೊಂದಲಕ್ಕೆ ತೆರೆ ಬಿದ್ದು ಜಾಯ್ ಬೈಡನ್ ಗೆದ್ದಿದ್ದಾಯ್ತು. ಟ್ರಂಪ್ ಕಥೆ ಏನು..?

ಶನಿವಾರ ಬೆಳಗ್ಗೆಯೇ ಟ್ರಂಪ್ ಶ್ವೇತಭವನ ಬಿಟ್ಟು ಹೊರಗೆ ಬಂದಿದ್ದರು. ಕೊನೆಯ ನಿರ್ಣಾಯಕ ಮತ ಎಣಿಕೆಗಳು ಪೆನ್ಸಿಲ್ವೇನಿಯಾ ಮತ್ತು ಇತರ ಕೆಲವು ಪ್ರಮುಖ ರಾಜ್ಯಗಳಿಂದ ಬರುವುದರಲ್ಲಿತ್ತು. ಅಷ್ಟೊತ್ತಿಗಾಗಲೇ ಟ್ರಂಪ್ ವೈಟ್‌ಹೌಸ್ ಬಿಟ್ಟಿದ್ದಾರೆ.

"

124 ವರ್ಷ ಹಳೆ ಸಂಪ್ರದಾಯಕ್ಕೆ ಬೀಳುತ್ತಾ ಬ್ರೇಕ್? ಕುತೂಹಲ ಮೂಡಿಸಿದೆ ಟ್ರಂಪ್ ನಡೆ!

ಅದಾಗಲೇ ಜಾಯ್‌ಬೈಡನ್ ಗೆಲ್ಲುವುದು ಬಹುತೇಕ ನಿಶ್ಚಿತವಾಗಿತ್ತು, ಇದನ್ನು ತಳ್ಳಿ ಹಾಕಲಾಗದು ಎಂಬುದು ಟ್ರಂಪ್‌ಗೂ ಗೊತ್ತಿತ್ತು. ಆಗಲೇ ಟ್ರಂಪ್ ವರ್ಜಿನಿಯಾದ ಸ್ಟೆರ್ಲಿಂಗ್‌ನಲ್ಲಿರುವ  ಪೊಟೋಮ್ಯಾಕ್ ನದಿಯತ್ತ ತೆರಳಿ ಟ್ರಂಪ್ ಗಾಲ್ಫ್‌ ಕೋರ್ಸ್‌ಗೆ ಲಗ್ಗೆ ಇಟ್ಟಿದ್ದಾರೆ.

ಅಮೆರಿಕದ ಪ್ರಮುಖ ಟೆಲಿವಿಷನ್ ನೆಟ್‌ವರ್ಕ್‌ಗಳಾದ ಸಿಎನ್ಎನ್ ನಂತರ ಎನ್‌ಬಿಸಿ, ಸಿಬಿಎಸ್, ಎಬಿಸಿ ಮತ್ತು ಫಾಕ್ಸ್ - ಪೆನ್ಸಿಲ್ವೇನಿಯಾದ ಹೊಸ ಫಲಿತಾಂಶದ ಪ್ರಕಾರ ಬೈಡನ್ ಗೆಲುವು ಎಂದು ಘೋಷಿಸಿ ಶ್ವೇತಭವನಕ್ಕೆ ಜನವರಿಯಲ್ಲಿ ಬರಲಿದ್ದಾರೆ ಎಂದಾಗಲೂ ಟ್ರಂಪ್ ಅಲ್ಲೇ ಇದ್ದರು.

ಅಮೆರಿಕ ಉಪಾಧ್ಯಕ್ಷ ಹುದ್ದೆಗೇರಿದ ಮೊದಲ ಮಹಿಳೆ ಕಮಲಾ ಹ್ಯಾರಿಸ್‌!

ನವ ದಂಪತಿಗಳು ಕ್ಲಬ್‌ಹೌಸ್‌ನ ಹೊರಗೆ ಫೋಟೋಗಳಿಗೆ ಪೋಸ್ ನೀಡುತ್ತಿರುವುದನ್ನು ನೋಡಿ ಟ್ರಂಪ್ ಅವರೊಂದಿಗೆ ಸೇರಲು ಮುಂದಾಗಿದ್ದಾರೆ. ಇದರ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ.

ಬೂದು ಬಣ್ಣದ ಸ್ಲ್ಯಾಕ್ಸ್, ಬೂದು ಬಣ್ಣದ ಜಾಕೆಟ್ ಮತ್ತು ಬಿಳಿ "ಮೇಕ್ ಅಮೇರಿಕಾ ಗ್ರೇಟ್ ಎಗೇನ್" ಎಂಬ ಟೋಪಿ ಧರಿಸಿದ್ದರು.
ಅವನು ಹೊರನಡೆದಾಗ ಬಹಳಷ್ಟು ಜನ ಅವರನ್ನು ಕೂಗಿ ವಿ ಲವ್‌ ಯೂ ಎಂದಿದ್ದಾರೆ.

Latest Videos
Follow Us:
Download App:
  • android
  • ios