Asianet Suvarna News Asianet Suvarna News

ದೇಶದ್ರೋಹದ ಕೇಸ್‌ನಲ್ಲಿ ಮುಷರಫ್‌ಗೆ ಗಲ್ಲುಶಿಕ್ಷೆ ಎತ್ತಿಹಿಡಿದ ಪಾಕ್‌ ಸುಪ್ರೀಂ ಕೋರ್ಟ್‌, ಶಿಕ್ಷೆ ತಗೆದುಕೊಳ್ಳಲು ಅವರೇ ಇಲ್ಲ!


ದೇಶದ್ರೋಹ ಪ್ರಕರಣದಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್‌, ಪಾಕಿಸ್ತಾನದ ಮಾಜಿ ಅಧ್ಯಕ್ಷ ದಿವಂಗತ ಪರ್ವೇಜ್‌ ಮುಷರಫ್‌ ಅವರ ಗಲ್ಲು ಶಿಕ್ಷೆ ತೀರ್ಪನ್ನು ಎತ್ತಿಹಿಡಿದಿದೆ. ಆದರೆ, ಶಿಕ್ಷೆ ತೆಗೆದುಕೊಳ್ಳಲು ಅವರೇ ಜೀವಂತವಾಗಿಲ್ಲ.
 

treason case Pakistan Supreme Court upholds Pervez Musharraf death sentence san
Author
First Published Jan 10, 2024, 7:01 PM IST | Last Updated Jan 10, 2024, 7:01 PM IST

ಇಸ್ಲಾಮಾಬಾದ್‌ (ಜ.10): ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಬುಧವಾರ ದೇಶದ ಮಾಜಿ ಸೇನಾ ಮುಖ್ಯಸ್ಥ ಹಾಗೂ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರಫ್‌ ಅವರಿಗೆ ನೀಡಿದ್ದ ಗಲ್ಲು ಶಿಕ್ಷೆ ತೀರ್ಪನ್ನು ಎತ್ತಿ ಹಿಡಿದಿದೆ. ಆದರೆ, ಶಿಕ್ಷೆ ತೆಗೆದುಕೊಳ್ಳಲು ಮುಷರಫ್‌ ಅವರೇ ಜೀವಂತವಾಗಿಲ್ಲ. ಕಳೆದ ವರ್ಷ ಅವರು ನಿಧನರಾಗಿದ್ದಾರೆ. 2019ರಲ್ಲಿ ದೇಶದ್ರೋಹದ ಪ್ರಕರಣದಲ್ಲಿ ವಿಶೇಷ ಕೋರ್ಟ್‌ ಪರ್ವೇಜ್‌ ಮುಷರಫ್‌ ಅವರಿಗೆ ಗಲ್ಲು ಶಿಕ್ಷೆ ನೀಡಿತ್ತು. 1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದ ರೂವಾರಿಯಾಗಿದ್ದ ಮುಷರಫ್‌, ಪಾಕಿಸ್ತಾನವನ್ನು ಆಳಿದ ಕೊನೆಯ ಸೇನಾ ನಾಯಕರಾಗಿದ್ದರು. 2023ರ ಫೆಬ್ರವರಿ 5 ರಂದು ದೀರ್ಘಕಾಲದ ಅನಾರೋಗ್ಯದಿಂದಾಗಿ ಅವರು ದುಬೈನಲ್ಲಿ ನಿಧನರಾಗಿದ್ದರು. 79 ವರ್ಷದ ಮಾಜಿ ಅಧ್ಯಕ್ಷ ದುಬೈನಲ್ಲಿ ಅಮಿಲಾಯ್ಡೋಸಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಕ್ರಿಮಿನಲ್ ಆರೋಪಗಳನ್ನು ತಪ್ಪಿಸಲು ಅವರು 2016 ರಿಂದ ಯುಎಇಯಲ್ಲಿ ಸ್ವಯಂ ಗಡಿಪಾರು ಆಗಿದ್ದರು.

ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಖಾಜಿ ಫೇಜ್ ಇಸಾ ಅವರ ನೇತೃತ್ವದ ನ್ಯಾಯಮೂರ್ತಿ ಮನ್ಸೂರ್ ಅಲಿ ಶಾ, ನ್ಯಾಯಮೂರ್ತಿ ಅಮಿನುದ್ದೀನ್ ಖಾನ್ ಮತ್ತು ನ್ಯಾಯಮೂರ್ತಿ ಅಥರ್ ಮಿನಲ್ಲಾ ಅವರನ್ನೊಳಗೊಂಡ ನಾಲ್ಕು ಸದಸ್ಯರ ಪೀಠವು ಪ್ರಕರಣದ ವಿಚಾರಣೆ ನಡೆಸಿತು. 2019ರ ಡಿಸೆಂಬರ್ 17 ರಂದು, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷದ ಅಧಿಕಾರಾವಧಿಯಲ್ಲಿ ನವೆಂಬರ್ 2007 ರಲ್ಲಿ ದೇಶದ ಮೇಲೆ ಅಸಂವಿಧಾನಿಕವಾಗಿ ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡಲಾಗಿತ್ತು. ಆ ಬಳಿಕ ವಿಶೇಷ ನ್ಯಾಯಾಲಯವು ಮಾಜಿ ಸೇನಾಧ್ಯಕ್ಷನಿಗೆ ಮರಣದಂಡನೆ ಶಿಕ್ಷೆ ವಿಧಿಸಿತು.

Pervez Musharraf : ನಡೆಯೋದಿರಲಿ ಬಾಯಿ ತೆರೆಯೋಕೆ ಸಾಧ್ಯವಾಗದ ರೋಗಕ್ಕೆ ಬಲಿಯಾದ ಖಾಯಿಲೆ ಯಾವುದು ಗೊತ್ತಾ?

ತನಗೆ ವಿಧಿಸಲಾದ ಮರಣದಂಡನೆ ಶಿಕ್ಷೆಯ ವಿರುದ್ಧ ಮಾಜಿ ಆಡಳಿತಗಾರ ಸಲ್ಲಿಸಿದ ಮೇಲ್ಮನವಿಯ ಮೇಲೆ ಸುಪ್ರೀಂ ಕೋರ್ಟ್ ಕಾಯ್ದಿರಿಸಿದ ತೀರ್ಪನ್ನು ಪ್ರಕಟಿಸಿತು. ಆದರೆ, ವ್ಯಕ್ತಿ ಜೀವಂತವಾಗಿರದ ಕಾರಣಕ್ಕೆ ಈ ಆದೇಶ ನಿಷ್ಪರಿಣಾಮಕಾರಿ ಎಂದೂ ಘೋಷಣೆ ಮಾಡಿದೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ನಿಧನ

 

Latest Videos
Follow Us:
Download App:
  • android
  • ios