ಗ್ರೀಕ್‌ ದೇಶದ ಅಥೆನ್ಸ್‌ ಹಾಗೂ ಥೆಸ್ಸಲೋನಿಕಿ ನಡುವೆ ಸಂಚರಿಸುತ್ತಿದ್ದ ಪ್ಯಾಸೆಂಜರ್‌ ರೈಲು ಹಾಗೂ ಗೂಡ್ಸ್ ರೈಲಿನ ಮಧ್ಯೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ 36 ಮಂದಿ ಅಸುನೀಗಿದ್ದು, 85 ಮಂದಿ ಗಾಯಗೊಂಡಿದ್ದಾರೆ.


ಅಥೆನ್ಸ್‌: ಗ್ರೀಕ್‌ ದೇಶದ ಅಥೆನ್ಸ್‌ ಹಾಗೂ ಥೆಸ್ಸಲೋನಿಕಿ ನಡುವೆ ಸಂಚರಿಸುತ್ತಿದ್ದ ಪ್ಯಾಸೆಂಜರ್‌ ರೈಲು ಹಾಗೂ ಗೂಡ್ಸ್ ರೈಲಿನ ಮಧ್ಯೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ 36 ಮಂದಿ ಅಸುನೀಗಿದ್ದು, 85 ಮಂದಿ ಗಾಯಗೊಂಡಿದ್ದಾರೆ.

ಮಂಗಳವಾರ ಮಧ್ಯರಾತ್ರಿ ನಡೆದ ಇಲ್ಲಿನ ಟೆಂಪೆ( Tempe) ಪ್ರಾಂತ್ಯದಲ್ಲಿ ನಡೆದ ಈ ಅಪಘಾತದಲ್ಲಿ ಪ್ಯಾಸೆಂಜರ್‌ ರೈಲಿನ ಮುಂದಿನ ಮೂರು ಬೋಗಿಗಳು ನಾಶವಾಗಿದ್ದು ಮಿಕ್ಕ ಬೋಗಿಗಳು ಹಳಿ ತಪ್ಪಿದೆ. ಈ ಅಪಘಾತ ನಡೆವ ಸಂದರ್ಭದಲ್ಲಿ ರೈಲುಗಳು ಗರಿಷ್ಠ ವೇಗದಲ್ಲಿ ಪ್ರಯಾಣಿಸುತ್ತಿದ್ದವು. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲಿ ಭೂಕಂಪದ ಅನುಭವವಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಆದರೆ ರೈಲ್ವೆ ಅಧಿಕಾರಿಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ರೈಲಿನಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳಿದ್ದು ಅವರೆಲ್ಲರೂ ರಜೆ ಮುಗಿಸಿ ಹಿಂತಿರುಗುತ್ತಿದ್ದರು.

Mandya: ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಗುದ್ದಿ ಇಬ್ಬರು ಮಹಿಳೆಯರ ಸಾವು: ರೈಲ್ವೆ ನಿಲ್ದಾಣದಲ್ಲಿ ದುರ್ಘಟನೆ

ಕಿರಿದಾದ ಕಾಲುವೆಯಲ್ಲಿ ಬೃಹತ್ ಹಡಗು: ನೋಡೊಮ್ಮೆ ಮಾನವನ ಬುದ್ಧಿಮತ್ತೆಯ ಸೊಬಗು!