Asianet Suvarna News Asianet Suvarna News

Mandya: ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಗುದ್ದಿ ಇಬ್ಬರು ಮಹಿಳೆಯರ ಸಾವು: ರೈಲ್ವೆ ನಿಲ್ದಾಣದಲ್ಲಿ ದುರ್ಘಟನೆ

ಮಂಡ್ಯ ನಗರದಲ್ಲಿ ರೈಲ್ವೆ ಹಳಿ ದಾಟುವಾಗ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಇಂದು ಬೆಳಗ್ಗೆ ನಡೆದಿದೆ. ಬೆಳಗಿನ ಜಾವ ಮೈಸೂರಿಂದ- ಬೆಂಗಳೂರಿಗೆ ಹೊರಟಿದ್ದ ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಗಾಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

Malgudi express Train Accident at Mandya railway station two women death sat
Author
First Published Jan 25, 2023, 11:40 AM IST

ಮಂಡ್ಯ (ಜ.25): ಮಂಡ್ಯ ನಗರದಲ್ಲಿ ರೈಲ್ವೆ ಹಳಿ ದಾಟುವಾಗ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಇಂದು ಬೆಳಗ್ಗೆ ನಡೆದಿದೆ. ಬೆಳಗಿನ ಜಾವ ಮೈಸೂರಿಂದ- ಬೆಂಗಳೂರಿಗೆ ಹೊರಟಿದ್ದ ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಗಾಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮಂಡ್ಯ ತಾಲೂಕಿನ ಬಸರಾಳು ಸಮೀಪದ ಹುರುಳಿ ಜವರನಕೊಪ್ಪಲು ಮೂಲದ ಶಶಿ ಮೃತ ಮಹಿಳೆ ಆಗಿದ್ದಾಳೆ. ಆದರೆ, ಮತ್ತೊಬ್ಬ ಮಹಿಳೆಯ ಮುಖ ರೈಲು ಗುದ್ದಿದ ರಭಸಕ್ಕೆ ನಜ್ಜು ಗುಜ್ಜಾಗಿದ್ದು, ಗುರುತಿಸಲು ಸಾಧ್ಯವಾಗದಂತೆ ಆಗಿದೆ. ಮಾಲ್ಗುಡಿ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ದುರ್ಮರಣ ಆಗಿದೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಕಾಚಿಗುಡ ಎಕ್ಸ್ ಪ್ರೆಸ್ ರೈಲಿನಿಂದ ಪ್ರಯಾಣಿಕರು ಇಳಿದಿದ್ದಾರೆ. ನಂತರ, ತಾವು ಪ್ಲಾಟ್‌ಫಾರಂನಲ್ಲಿ ಹತ್ತಿಕೊಂಡು ಹೋಗಲಾಗದೇ ರೈಲು ಹಳಿಯ ಮೇಲೆ ಇಳಿದು ಮತ್ತೊಂದು ಪ್ಲಾಟ್‌ಫಾರಂಗೆ ಹೋಗಲು ಮುಂದಾಗಿದ್ದಾರೆ. ಈ ವೇಳೆ ಹಳಿ ದಾಟುವಾಗ ವೇಗವಾಗಿ ಬಂದ ಮೈಸೂರಿನಿಂದ- ಬೆಂಗಳೂರಿಗೆ ಹೊರಟಿದ್ದ ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಮಹಿಳೆಯರಿಗೆ ಗುದ್ದಿದೆ.

Mandya: ಸರ್ಕಾರಿ ಕಚೇರಿಯಲ್ಲಿಯೇ ಉಪ ವಿಭಾಗಾಧಿಕಾರಿಗೆ ಸೀಮಂತ ಶಾಸ್ತ್ರ: ಜನರ ಪ್ರೀತಿಗೆ ಮನಸೋತ ಅಧಿಕಾರಿ

ಸಂಬಂಧಿಕರ ಗೋಳಾಟ: ಇನ್ನು ಘಟನೆ ಸಂಬಂಧ ಮೃತ ಮಹಿಳೆಯ ಸಂಬಂಧಿಕರ ಗೋಳಾಟ ಶುರುವಾಗಿದೆ. ಮೃತ ಮಹಿಳೆಯ ಶವದ ಮುಂದೆ ಸಂಬಂಧಿ ಅಳುತ್ತಾ ಕುಳಿತಿದ್ದಾರೆ. ಮೃತ ಮಹಿಳೆಯ ಒಬ್ಬರು ಬಸರಾಳು ಸಮೀಪದ ಹುರುಳಿಜವರನಕೊಪ್ಪಲು ಮೂಲದ ಶಶಿ ಆಗಿದ್ದು, ತನ್ನ ಅಣ್ಣನ ಮಗಳನ್ನ ಕಳೆದುಕೊಂಡು ಮಹಿಳೆಯ ಸೌಭಾಗ್ಯಳ ಗೋಳಾಡುತ್ತಿದ್ದಳು. ಮತ್ತೊಬ್ಬರ ಗುರುತು ಪತ್ತೆಗಾಗಿ ಪ್ರಯತ್ನ ಮಾಡಲಾಗುತ್ತಿದೆ. ಗುರುತು ಸಿಗದಷ್ಟು ಮುಖ ಜಜ್ಜಿ ಹೋಗಿದ್ದು, ಆಕೆ ವೃದ್ಧೆಯ ಆಗಿದ್ದಾರೆ. ಮಂಡ್ಯ ರೈಲು ನಿಲ್ದಾಣದ ಬಳಿ ಘಟನೆ ನಡೆದಿದ್ದು, ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಳಕ್ಕೆ ರೈಲ್ವೇ ಪೊಲೀಸರು, ಸ್ಥಳೀಯ ಪೊಲೀಸರ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.

ಅಕ್ರಮ ಸಂಬಂಧ ಶಂಕೆ- ಕುಡುಗೋಲಿನಿಂದ ಪತ್ನೆ ಕೊಲೆ: ಪಾಂಡವಪುರ: ಹೆಂಡತಿಯ ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ಗಂಡನೇ ತನ್ನ ಹೆಂಡತಿಯ ಕತ್ತನ್ನು ಕುಡುಗೋಲಿನಿಂದ ಕೊಯ್ದು ಕೊಲೆ ಮಾಡಿ ಪರಾರಿ ಆಗಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ. ಗಂಡನಿಂದ ಹೆಂಡತಿಯ ಕೊಲೆ ಆಗಿದ್ದು, ಕುಡುಗೋಲಿನಿಂದ ಹೆಂಡಿತಿಯನ್ನು ಕೊಲೆ ಮಾಡಿ ಗಂಡ ಪರಾರಿ ಆಗಿದ್ದಾನೆ. ಶೋಭಾ (40) ಗಂಡನಿಂದ ಕೊಲೆಯಾದ ಪತ್ನಿ ಆಗಿದ್ದಾಳೆ. ಮನೋಹರ್ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಹೆಂಡತಿಯ ಅಕ್ರಮ ಸಂಬಂಧ ಶಂಕಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Mandya Crime: ತಾಲೂಕು ಕಚೇರಿಯಲ್ಲೇ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ: ಬೆಚ್ಚಿಬಿದ್ದ ಜನತೆ

 

ಅಕ್ರಮ ಸಂಬಂಧ ವಿಚಾರಕ್ಕೆ ಗಲಾಟೆ: ಇನ್ನು ಹೆಂಡತಿಯು ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ವಿಚಾರಕ್ಕೆ ಮನೆಯಲ್ಲಿ ಪ್ರತಿನಿತ್ಯ ಗಲಾಟೆ ನಡೆಯುತ್ತಿತ್ತು. ನಿನ್ನೆ ರಾತ್ರಿಯೂ ಗಲಾಟೆ ನಡೆದಿದೆ. ಗಲಾಟೆ ಮಿತಿಮೀರಿದ ಹಿನ್ನೆಲೆ ಕುಡುಗೋಲಿನಿಂದ ಹೆಂಡತಿ ಕೊಲೆ ಮಾಡಿದ್ದಾನೆ. ಕಾಲು ಕತ್ತರಿಸಿ, ಬಳಿಕ ಕುತ್ತಿಗೆ ಭಾಗಕ್ಕೆ ಕುಡುಗೋಲಿನಿಂದ‌ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಶೋಭಾ ಸಾವನ್ನಪ್ಪಿದ್ದಾರೆ. ಶೋಭಾ ಸಾವಿನ ಬಳಿಕ ಗಂಡ ಪರಾರಿ ಆಗಿದ್ದಾನೆ. ಇನ್ನು ಈ ಘಟನೆ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios