ಮಕ್ಕಳ ಪೌಷ್ಠಿಕಾಂಶ ಆಹಾರ ಮಾರುಕಟ್ಟೆಯಲ್ಲಿ ವಿಶ್ವದ ಮುಂಚೂಣಿ ಕಂಪನಿಗಳ ಪೈಕಿ ಒಂದಾದ ನೆಸ್ಲೆಯ ಕೆಲ ಮಕ್ಕಳ ಆಹಾರ ಉತ್ಪನ್ನದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ 25 ದೇಶಗಳಲ್ಲಿ ಮಾರುಕಟ್ಟೆಗೆ ವಿತರಣೆ ಮಾಡಿದ್ದ ಉತ್ಪನ್ನಗಳನ್ನು ಹಿಂದಕ್ಕೆ ಪಡೆಯಲು ಕಂಪನಿ ನಿರ್ಧರಿಸಿದೆ.

ಲಂಡನ್‌: ಮಕ್ಕಳ ಪೌಷ್ಠಿಕಾಂಶ ಆಹಾರ ಮಾರುಕಟ್ಟೆಯಲ್ಲಿ ವಿಶ್ವದ ಮುಂಚೂಣಿ ಕಂಪನಿಗಳ ಪೈಕಿ ಒಂದಾದ ನೆಸ್ಲೆಯ ಕೆಲ ಮಕ್ಕಳ ಆಹಾರ ಉತ್ಪನ್ನದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ 25 ದೇಶಗಳಲ್ಲಿ ಮಾರುಕಟ್ಟೆಗೆ ವಿತರಣೆ ಮಾಡಿದ್ದ ಉತ್ಪನ್ನಗಳನ್ನು ಹಿಂದಕ್ಕೆ ಪಡೆಯಲು ಕಂಪನಿ ನಿರ್ಧರಿಸಿದೆ. ಈ ದೇಶಗಳ ಪಟ್ಟಿಯಲ್ಲಿ ಭಾರತ ಇದೆಯೇ ಎಂಬುದರ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾಕರಿಕೆ ಮತ್ತು ವಾಂತಿಗೆ ಕಾರಣವಾಗಬುಹುದಾದ ಅಂಶ

ಮಕ್ಕಳಿಗೆ ಕೊಡುವ ಉತ್ಪನ್ನಗಳಲ್ಲಿ ವಾಕರಿಕೆ ಮತ್ತು ವಾಂತಿಗೆ ಕಾರಣವಾಗಬುಹುದಾದ ಅಂಶಗಳು ಮಿಶ್ರಣವಾಗಿವೆ ಎಂಬುದು ಪತ್ತೆಯಾದ ಹಿನ್ನೆಲೆಯಲ್ಲಿ ಕಂಪನಿ ಈ ಕ್ರಮಕ್ಕೆ ಮುಂದಾಗಿದೆ.

ನೆಸ್ಲೆ ಹೇಳಿಕೆ ಬಿಡುಗಡೆ

ಈ ಕುರಿತು ನೆಸ್ಲೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ಅರಾಚಿನೋಡಿಕ್‌ ಆ್ಯಸಿಡ್ ಆಯಿಲ್‌ ಮತ್ತು ಇತರೆ ತೈಲ ಮಿಶ್ರಣಗಳನ್ನು ಪರೀಕ್ಷೆ ನಡೆಸಿದಾಗ, ಅನಾರೋಗ್ಯಕರ ಅಂಶ ಪತ್ತೆಯಾಗಿದೆ. ನೆದರ್ಲೆಂಡ್ಸ್‌ನಲ್ಲಿನ ಕಾರ್ಖಾನೆಯಲ್ಲಿ ಕಂಡು ಬಂದಿದ್ದು, ಉತ್ಪನ್ನಗಳನ್ನು ಹಿಂಪಡೆದುಕೊಳ್ಳಲಾಗಿದೆ’ ಎಂದು ತಿಳಿಸಿದೆ.