4 ವರ್ಷದ ಪುಟ್ಟ ಅಭಿಮಾನಿಯತ್ತ ಕೈ ಬೀಸಿದ ಟೊಟೆನ್‌ಹ್ಯಾಮ್ ಫುಟ್‌ಬಾಲ್ ಪ್ಲೇಯರ್‌.. ಬಾಲಕಿಯ ಖುಷಿ ನೋಡಿ

  • ಪುಟ್ಟ ಅಭಿಮಾನಿಯತ್ತ ಕೈ ಬೀಸಿದ ಫುಟ್‌ಬಾಲ್‌ ಫ್ಲೇಯರ್
  • ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ವಿಡಿಯೋ
Tottenham player waves back at 4 yearold fan,watch her happiness akb

ಲಂಡನ್‌(ಜ.7) ತನ್ನತ್ತ ನೋಡಿ ಮತ್ತೆ ಮತ್ತೆ ಐ ಲವ್‌ ಯೂ  ಐ ಲವ್‌ ಯೂ ಎನ್ನುತ್ತಿದ್ದ ಪುಟ್ಟ ಬಾಲಕಿಯತ್ತ ಫುಟ್ಬಾಲ್‌ ಆಟಗಾರನೊಬ್ಬ ಕೈ ಬೀಸಿ ಹಾಯ್‌ ಮಾಡಿದ್ದು, ಇದನ್ನು ನೋಡಿದ ಬಾಲಕಿಗೆ ಊಹೆಗೂ ನಿಲುಕದಷ್ಟು ಖುಷಿ ಆಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪುಟ್ಬಾಲ್‌ ಆಟಗಾರ ಬಾಲಕಿಯತ್ತ ಕೈ ಬೀಸಿದ ನಂತರ ಆಕೆಯ ಮುಗ್ಧ ನಗುವಿನ ಖುಷಿಯ ಪ್ರತಿಕ್ರಿಯೆ ಎಲ್ಲರನ್ನು ಸೆಳೆಯುತ್ತಿದೆ. ದಯೆ ಹಾಗೂ ಕರುಣೆಯನ್ನು ತೋರಿದರೆ ಹೆಚ್ಚೇನು ವೆಚ್ಚವಾಗುವುದಿಲ್ಲ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅದು ಈ ವಿಡಿಯೋದಿಂದ ಸಾಬೀತಾಗಿದೆ. 

ಪ್ರೀಮಿಯರ್ ಲೀಗ್ ಕ್ಲಬ್(Premier League club) ಟೊಟೆನ್‌ಹ್ಯಾಮ್ ಹಾಟ್ಸ್‌ಪುರ್‌ (ottenham Hotspur)ಗೆ ಫಾರ್ವರ್ಡ್ ಆಟಗಾರನಾಗಿ ಆಡುತ್ತಿರುವ ದಕ್ಷಿಣ ಕೊರಿಯಾದ ವೃತ್ತಿಪರ ಫುಟ್‌ಬಾಲ್ ಆಟಗಾರ ಸೋನ್ ಹೆಯುಂಗ್-ಮಿನ್ (Son Heung-min), ಟೊಟೆನ್‌ಹ್ಯಾಮ್ ಹಾಟ್ಸ್‌ಪುರ್ ಸ್ಟೇಡಿಯಂನಲ್ಲಿ 2021 ರ ತಮ್ಮ ಕೊನೆಯ ಪಂದ್ಯವನ್ನು ಆಡುತ್ತಿದ್ದರು. ಈ ವೇಳೆ ಅವರ ಪುಟ್ಟ ಹಾಗೂ ಕಟ್ಟಾ ಅಭಿಮಾನಿ 4 ವರ್ಷದ ಡೆಲಿಲಾ ಥೋರ್ಪ್(Delilah Thorpe) ಈ ಪಂದ್ಯ ನೋಡಲು ಸ್ಟೇಡಿಯಂಗೆ ಆಗಮಿಸಿದ್ದರು. 

ಫುಟ್ಬಾಲ್‌ ಆಟಗಾರ ಸೋನ್ ಹೆಯುಂಗ್-ಮಿನ್ ಅವರನ್ನು ತುಂಬಾ ಆರಾಧಿಸುವ ಡೆಲಿಲಾ, ತನ್ನ ಹೀರೋನನ್ನು ಹತ್ತಿರದಿಂದ ನೋಡಲು ಉತ್ಸುಕಳಾಗಿದ್ದಳು ಮತ್ತು 29 ವರ್ಷದ ಸ್ಟ್ರೈಕರ್‌ನ ಮೇಲಿನ ತನ್ನ ಪ್ರೀತಿಯನ್ನು ತಿಳಿಸುತ್ತಾ ಜೋರಾಗಿ ಸೋನಿ ಐ ಲವ್ ಯೂ ಎಂದು ಕಿರುಚಿದ್ದಾಳೆ. ಅಲ್ಲದೇ ನನ್ನ ಧ್ವನಿ ಆತನಿಗೆ ಕೇಳಿಸುತ್ತಿಲ್ಲ ಎನ್ನುತ್ತಾಳೆ. ಈ ವೇಳೆ ತಾಯಿ ಇರು ಆತ ಬ್ಯುಸಿಯಾಗಿದ್ದಾನೆ. ಆತ ಹಾಯ್‌ ಮಾಡುತ್ತಾನೆ ಎಂದು ಹೇಳುತ್ತಾಳೆ. ಆದರೂ ಬಾಲಕಿ ಮತ್ತೆ ಮತ್ತೆ ಸೋನಿ ಐ ಲವ್‌ ಯೂ ಎಂದು ಕಿರುಚುತ್ತಾಳೆ. ಈ ವೇಳೆ ಅಚ್ಚರಿ ಎಂಬಂತೆ  ಸೋನ್ ಹೆಯುಂಗ್ ಈ ಬಾಲಕಿಯತ್ತ ತಿರುಗಿ ಹಾಯ್‌ ಮಾಡಿದ್ದಾನೆ. 

 

ಇದರಿಂದ ಬಾಲಕಿ ತುಂಬಾ ಖುಷಿ ಆಗಿದ್ದು, ಅವರು ನನ್ನತ್ತ ಕೈ ಬೀಸಿದರು ಎಂದು ಹೇಳುತ್ತಿರುವುದು ವಿಡಿಯೋದಲ್ಲಿದೆ. ವೆಸ್ಟ್ ಸಸೆಕ್ಸ್‌ (West Sussex)ನಲ್ಲಿ ಡೆಲಿಲ್ಲಾ ಕುಟುಂಬ ವಾಸಿಸುತ್ತಿದೆ. ಸೋನ್ ಹೆಯುಂಗ್ ನನ್ನ ಮಗಳ ನೆಚ್ಚಿನ ಆಟಗಾರ. ಅವನು ಯಾವಾಗಲೂ ಉತ್ತಮವಾಗಿ ಆಡುತ್ತಾನೆ. ಅವನು ಸ್ಕೋರ್ ಮಾಡುವುದನ್ನು ನೋಡುವುದನ್ನು ಅವಳು ಇಷ್ಟಪಡುತ್ತಾಳೆ ಎಂದು ಡೆಲಿಲ್ಲಾ ತಾಯಿ ಡೆಮಿ(Demiee) ಹೇಳಿದ್ದಾರೆ.

Ronaldo tests positive: ಬ್ರೆಜಿಲ್ ದಿಗ್ಗಜ ಫುಟ್ಬಾಲಿಗ ರೊನಾಲ್ಡೋಗೆ ಕೋವಿಡ್ ಪಾಸಿಟಿವ್..!

ತಾಯಿ-ಮಗಳು ಇಬ್ಬರೂ ಸೋನ್ ಹೆಯುಂಗ್‌ನನ್ನು ಸ್ಮೈಲಿಸ್ಟ್ ಬಾಯ್ ಎಂದು ಕರೆಯುತ್ತಾರಂತೆ, ಏಕೆಂದರೆ  ಅವನು ಯಾವಾಗಲೂ ನಗುತ್ತಿರುತ್ತಾನೆ ಎಂದು ಅವರು ಹೇಳಿದರು. ದುರದೃಷ್ಟವಶಾತ್, ಅವಳು ಅವನನ್ನು ಎಂದಿಗೂ ಭೇಟಿಯಾಗಲಿಲ್ಲ, ಆದರೆ ಅವನನ್ನು ಭೇಟಿಯಾಗುವುದು ಒಂದು ಕನಸು ಎಂದು ತಾಯಿ ಡೆಮಿ ಹೇಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗಮನ ಸೆಳೆದಿದ್ದು, ಫುಟ್‌ಬಾಲ್ ಕ್ಲಬ್‌ ಕೂಡ ಈ ವಿಡಿಯೋವನ್ನು ಶೇರ್‌ ಮಾಡಿದೆ. ಅಲ್ಲದೇ ಪುಟ್ಟ ಬಾಲಕಿಯ ಮೊಗದಲ್ಲಿ ನಗು ತರಿಸಿದ್ದಕ್ಕೆ ನೆಟ್ಟಿಗರು ಸೋನ್ ಹೆಯುಂಗ್‌ಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ.

Cristiano Ronaldo Statue In Goa : ವಿವಾದಕ್ಕೆ ಕಾರಣವಾದ ಫುಟ್ ಬಾಲ್ ದಿಗ್ಗಜನ ಪ್ರತಿಮೆ!

Latest Videos
Follow Us:
Download App:
  • android
  • ios