Ronaldo tests positive: ಬ್ರೆಜಿಲ್ ದಿಗ್ಗಜ ಫುಟ್ಬಾಲಿಗ ರೊನಾಲ್ಡೋಗೆ ಕೋವಿಡ್ ಪಾಸಿಟಿವ್..!

* ಬ್ರೆಜಿಲ್ ಫುಟ್ಬಾಲ್ ದಂತಕಥೆ ರೊನಾಲ್ಡೊಗೆ ಕೋವಿಡ್ ಪಾಸಿಟಿವ್

* ಸಣ್ಣ ಸೋಂಕಿನ ಲಕ್ಷಣ ಹೊಂದಿರುವ ರೊನಾಲ್ಡೋ ಐಸೋಲೇಷನ್‌ಗೆ ಒಳಗಾಗಿದ್ದಾರೆ

* ಇತ್ತೀಚೆಗಷ್ಟೇ ತಮ್ಮ ಬಾಲ್ಯದ ಕ್ಲಬ್‌ ಕ್ರುಜಿಯಿರೋ ತಂಡದ ‍ಷೇರುಗಳನ್ನು ಖರೀದಿಸಿದ್ದ ರೊನಾಲ್ಡೊ

Brazil Football great Ronaldo tests positive for Covid 19 kvn

ರಿಯೊ ಡಿ ಜನೈರೊ(ಜ.03): ಬ್ರೆಜಿಲ್ ಫುಟ್ಬಾಲ್ ದಂತಕಥೆ ರೊನಾಲ್ಡೋ (Ronaldo) ಅವರಿಗೆ ಕೋವಿಡ್ 19 (COVID 19) ಸೋಂಕು ತಗುಲಿರುವುದು ದೃಢಪಟ್ಟಿದೆ. ರೊನಾಲ್ಡೋ ಅವರು ಬಾಲ್ಯದಲ್ಲಿ ಪ್ರತಿನಿಧಿಸಿದ್ದ ಕ್ರುಜಿಯಿರೋ (Cruzeiro Club) ಈ ವಿಚಾರವನ್ನು ಖಚಿತಪಡಿಸಿದೆ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಕ್ರುಜಿಯಿರೋ ಕ್ಲಬ್‌ನ ಬಹುತೇಕ ಷೇರುಗಳನ್ನು ಖರೀದಿಸುವ ಮೂಲಕ ತನ್ನ ಬಾಲ್ಯದಲ್ಲಿ ಅವಕಾಶ ನೀಡಿದ್ದ ಕ್ಲಬ್‌ಗೆ ಆಸರೆಯಾಗಿದ್ದರು. ಇದೀಗ ಕೋವಿಡ್‌ ಪಾಸಿಟಿವ್‌ ಹಿನ್ನೆಲೆಯಲ್ಲಿ ಕ್ರುಜಿಯಿರೋ ಕ್ಲಬ್‌ನ 101ನೇ ವರ್ಷಾಚರಣೆಗೆ ಮಾಜಿ ರಿಯಲ್ ಮ್ಯಾಡ್ರಿಡ್ ಆಟಗಾರ ಪಾಲ್ಗೊಳ್ಳುತ್ತಿಲ್ಲ ಎಂದು ಕ್ಲಬ್ ತಿಳಿಸಿದೆ.
 
45 ವರ್ಷದ ಮಾಜಿ ಫುಟ್ಬಾಲಿಗ, ಸಣ್ಣ ಪ್ರಮಾಣದ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರು ಆರೋಗ್ಯವಾಗಿದ್ದಾರೆ. ಈಗವರು ವೈದ್ಯರ ಸಲಹೆಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಐಸೋಲೇಷನ್‌ನಲ್ಲಿದ್ದಾರೆ ಎಂದು ಕ್ರುಜಿಯಿರೋ ಕ್ಲಬ್‌ ಟ್ವೀಟ್‌ ಮೂಲಕ ಈ ವಿಚಾರವನ್ನು ತಿಳಿಸಿದೆ. ರೊನಾಲ್ಡೋ 1993 ಮತ್ತು 1994ರಲ್ಲಿ ಕ್ರುಜಿಯಿರೋ ತಂಡದ ಪರ ಆಡಿದ್ದರು. 45 ವರ್ಷದ ರೊನಾಲ್ಡೋ 2 ಬಾರಿ ಫಿಫಾ ವಿಶ್ವಕಪ್‌ ಗೆದ್ದ ಬ್ರೆಜಿಲ್‌ ತಂಡದಲ್ಲಿದ್ದರು. ಕಳೆದ ತಿಂಗಳಷ್ಟೇ ರೊನಾಲ್ಡೋ ಕ್ರುಜಿಯಿರೋ ಕ್ಲಬ್‌ ಖರೀದಿಸಿದ್ದಾಗಿ ಘೋಷಿಸಿದ್ದರು. ಬ್ರೆಜಿಲ್‌ನ (Brazil) ರೊನಾಲ್ಡೋ ತಾವು ವೃತ್ತಿಪರ ಫುಟ್ಬಾಲ್‌ಗೆ ಪಾದಾರ್ಪಣೆ ಮಾಡಿದ್ದ ತಂಡವನ್ನೇ ಖರೀದಿಸಿ ತಂಡಕ್ಕೆ ನೆರವಾಗಿದ್ದಾರೆ.

ರೊನಾಲ್ಡೋ 2002ರ ಫಿಫಾ ವಿಶ್ವಕಪ್‌ (FIFA World Cup) ಟೂರ್ನಿಯಲ್ಲಿ ಬ್ರೆಜಿಲ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಷ್ಟೇ ಅಲ್ಲದೇ ರೊನಾಲ್ಡೋ ಒಟ್ಟು ಮೂರು ಬಾರಿ ಫಿಫಾ ವರ್ಷದ ಫುಟ್ಬಾಲಿಗ (FIFA World Player of the Year) ಗೌರವಕ್ಕೂ ಭಾಜನರಾಗಿದ್ದಾರೆ. ರೊನಾಲ್ಡೋ 1993ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಕ್ರುಜಿಯಿರೋ ಕ್ಲಬ್‌ ಮೂಲಕ ವೃತ್ತಿಪರ ಫುಟ್ಬಾಲ್‌ಗೆ ಪಾದಾರ್ಪಣೆ ಮಾಡಿದ್ದರು. ಕಳೆದ ಡಿಸೆಂಬರ್ 18ರಂದು ಕ್ರುಜಿಯಿರೋ ಕ್ಲಬ್‌ ಬಹುತೇಕ ಷೇರುಗಳನ್ನು ಖರೀದಿಸಿದ್ದಾಗಿ ರೊನಾಲ್ಡೋ ಟ್ವೀಟ್ ಮೂಲಕ ಘೋಷಿಸಿದ್ದರು. ಕ್ರುಜಿಯಿರೋ ಕ್ಲಬ್‌ ಪರ 58 ಪಂದ್ಯಗಳನ್ನಾಡಿ ರೊನಾಲ್ಡೊ 56 ಗೋಲುಗಳನ್ನು ಬಾರಿಸಿದ್ದರು. ಇನ್ನು ರೊನಾಲ್ಡೋ 1997 ಹಾಗೂ 2002ರಲ್ಲಿ ಬಾಲನ್ ಡಿ ಒರ್ ಪ್ರಶಸ್ತಿಯನ್ನು ಜಯಿಸಿದ್ದರು.

Cristiano Ronaldo Statue In Goa : ವಿವಾದಕ್ಕೆ ಕಾರಣವಾದ ಫುಟ್ ಬಾಲ್ ದಿಗ್ಗಜನ ಪ್ರತಿಮೆ!

ಕೋವಿಡ್ ಸೋಂಕಿಗೆ ಒಳಗಾದ ಜಗತ್ತಿನ ಪ್ರತಿಷ್ಠಿತ ಫುಟ್ಬಾಲ್‌ ಆಟಗಾರರ ಪೈಕಿ ರೊನಾಲ್ಡೋ ಕೂಡಾ ಒಬ್ಬರೆನಿಸಿಕೊಂಡಿದ್ದಾರೆ. ಈ ಮೊದಲು ಅರ್ಜಿಂಟೀನಾ ಫುಟ್ಬಾಲ್ ತಂಡದ ನಾಯಕ ಹಾಗೂ ಪಿಎಸ್‌ಜಿ ತಾರಾ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ಸೇರಿದಂತೆ ಫ್ರೆಂಚ್‌ ಫುಟ್ಬಾಲ್ ಕ್ಲಬ್‌ನ ನಾಲ್ವರು ಆಟಗಾರರಿಗೆ ಕೊರೋನಾ ಸೋಂಕು ತಗುಲಿದ್ದು, ಭಾನುವಾರವಷ್ಟೇ ದೃಢಪಟ್ಟಿತ್ತು. ಕೊರೋನಾ ಛಾಯೆ ಇದೀಗ ಯೂರೋಪ್‌ ಹಾಗೂ ಪ್ರೀಮಿಯರ್ ಲೀಗ್‌ ಮೇಲೆ ಆವರಿಸಿದೆ.

ISL 2021-22: ಎಫ್‌ಸಿ ಗೋವಾ ಹಾಗೂ ಕೇರಳ ಬ್ಲಾಸ್ಟರ್ಸ್‌ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ

ಗೋವಾ: ಅಡ್ರಿನಾ ಲೂನಾ ಬಾರಿಸಿದ ಮಿಂಚಿನ ಗೋಲಿನ ನೆರವಿನಿಂದ ಇಂಡಿಯನ್ ಸೂಪರ್‌ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಎಫ್‌ಸಿ ಗೋವಾ ಹಾಗೂ ಕೇರಳ ಬ್ಲಾಸ್ಟರ್ಸ್‌ ನಡುವಿನ ಪಂದ್ಯ 2-2 ಗೋಲುಗಳ ಅಂತರದಲ್ಲಿ ರೋಚಕ ಡ್ರಾನಲ್ಲಿ ಅಂತ್ಯವಾಗಿದೆ. ಈ ಡ್ರಾನೊಂದಿಗೆ ಕೇರಳ ಬ್ಲಾಸ್ಟರ್ಸ್‌ ತಂಡವು 14 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರೆ, ಎಫ್‌ಸಿ ಗೋವಾ ತಂಡವು 9 ಅಂಕಗಳೊಂದಿಗೆ 9ನೇ ಸ್ಥಾನವನ್ನು ಪಡೆದಿದೆ.

Latest Videos
Follow Us:
Download App:
  • android
  • ios