Asianet Suvarna News Asianet Suvarna News

ಆತ್ಮಹತ್ಯೆ ತಡೆಗೆ ಕ್ರಮ: ಬ್ರಿಟನ್‌ನಲ್ಲಿ ಪ್ಯಾರಾಸಿಟಮಲ್‌ ಮಾತ್ರೆ ಮಾರಾಟಕ್ಕೆ ಕಡಿವಾಣ

ಆತ್ಮಹತ್ಯೆ ಪ್ರಕರಣವನ್ನು ಇನ್ನಷ್ಟು ಇಳಿಸಲು ಮುಂದಾಗಿರುವ ಬ್ರಿಟನ್‌ ಸರ್ಕಾರ, ಈ ನಿಟ್ಟಿನಲ್ಲಿ ಮೆಡಿಕಲ್‌ ಶಾಪ್‌ಗಳಲ್ಲಿ ಪ್ಯಾರಸಿಟಮಲ್‌ ಒಳಗೊಂಡಿರುವ ಮಾತ್ರೆಗಳ ಮಾರಾಟಕ್ಕೆ ಮತ್ತಷ್ಟು ಕಡಿವಾಣ ಹಾಕಲು ಚಿಂತಿಸಿದೆ.

To prevent suicide in Britain govt limites Sale of paracetamol pill akb
Author
First Published Sep 12, 2023, 11:40 AM IST

ಲಂಡನ್‌: ಆತ್ಮಹತ್ಯೆ ಪ್ರಕರಣವನ್ನು ಇನ್ನಷ್ಟು ಇಳಿಸಲು ಮುಂದಾಗಿರುವ ಬ್ರಿಟನ್‌ ಸರ್ಕಾರ, ಈ ನಿಟ್ಟಿನಲ್ಲಿ ಮೆಡಿಕಲ್‌ ಶಾಪ್‌ಗಳಲ್ಲಿ ಪ್ಯಾರಸಿಟಮಲ್‌ ಒಳಗೊಂಡಿರುವ ಮಾತ್ರೆಗಳ ಮಾರಾಟಕ್ಕೆ ಮತ್ತಷ್ಟು ಕಡಿವಾಣ ಹಾಕಲು ಚಿಂತಿಸಿದೆ.  ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಪ್ರಮಾಣದಲ್ಲಿ ಅಧಿಕ ಪ್ರಮಾಣದಲ್ಲಿ ಪ್ಯಾರಸಿಟಮಲ್‌ ಮಾತ್ರೆ (paracetamol pills) ತಿನ್ನುವವರ ಪ್ರಮಾಣ ಹೆಚ್ಚಿದೆ. ಹೀಗಾಗಿ 2018ರಿಂದಲೇ ಒಬ್ಬ ವ್ಯಕ್ತಿಗೆ ಮೆಡಿಕಲ್‌ ಶಾಪ್‌ಗಳಲ್ಲಿ ಗರಿಷ್ಠ 2 ಶೀಟ್‌ (500 ಎಂಜಿಯ 16 ಮಾತ್ರೆ) ಮಾರಾಟ ಮಾಡಲು ಅವಕಾಶವಿದೆ. ಈ ಕಡಿವಾಣ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ, ಮಾರಾಟಕ್ಕೆ ಮತ್ತಷ್ಟು ಕಡಿವಾಣ ಹೇರುವ ಬಗ್ಗೆ ಇತ್ತೀಚೆಗೆ ಪ್ರಕಟವಾದ ಕಾರ್ಯತಂತ್ರ ವರದಿಯೊಂದರಲ್ಲಿ ಶಿಫಾರಸು ಮಾಡಲಾಗಿದೆ. ಜೊತೆಗೆ ವೈದ್ಯರಿಗೂ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಮಾತ್ರೆಗಳನ್ನು ಬರೆದುಕೊಡದಂತೆ ಸೂಚಿಸಬೇಕೆಂದು ಹೇಳಲಾಗಿದೆ.

ಪ್ಯಾರಾಸಿಟಮಲ್‌ ಮೇಲೆ ಏಕೆ ಕಣ್ಣು?:

2018ರಲ್ಲಿ ಕೇಂಬ್ರಿಡ್ಜ್‌ ವಿವಿ ಬಿಡುಗಡೆ ಮಾಡಿದ್ದ ವರದಿಯೊಂದರ ಪ್ರಕಾರ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಅತಿ ಹೆಚ್ಚು ಪಾಲು ಪ್ಯಾರಸಿಟಮಲ್‌ ಮಾತ್ರೆಯದ್ದೇ (Cambridge University) ಆಗಿತ್ತು. ಅತಿಯಾದ ಪ್ಯಾರಾಸಿಟಮಲ್‌ ಸೇವನೆಯಿಂದ ಯಕೃತ್ತಿಗೆ ಹಾನಿ ಆಗುತ್ತದೆ ಎಂದೂ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಮಾತ್ರೆಗಳ ಮಾರಾಟಕ್ಕೆ ಕಡಿವಾಣ ಹಾಕಿತ್ತು. ಬ್ರಿಟನ್‌ನಲ್ಲಿ ಪ್ರತಿ ವರ್ಷ 5000ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಕೊಲೆ ರಹಸ್ಯ ಬಯಲು: ಮಾತ್ರೆ ನುಂಗಿಸಿ, ವೇಲ್‌ ಬಿಗಿದು ತಾಯಿ ಕೊಂದ ಪುತ್ರಿ..!

ಇಂಡಿಯಾ ಹೆಸರು ಭಾರತ ಎಂದು ಬದಲಿಸುವುದಕ್ಕೆ ರಾಹುಲ್‌ ಆಕ್ಷೇಪ

ಪ್ಯಾರಿಸ್‌: ಇಂಡಿಯಾ ಹೆಸರು ಅಳಿಸಿಹಾಕಿ ದೇಶಕ್ಕೆ ಭಾರತ ಎಂದು ಮರುನಾಮಕರಣ ಮಾಡುವ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಯತ್ನವನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (Congress leader Rahul Gandhi) ಪ್ರಶ್ನಿಸಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಸಂವಿಧಾನವು ವಾಸ್ತವವಾಗಿ ಇಂಡಿಯಾ ಹಾಗೂ ಭಾರತ ಎರಡೂ ಹೆಸರುಗಳನ್ನು ಬಳಸುತ್ತದೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಎರಡೂ ಸಂಪೂರ್ಣವಾಗಿ ಸ್ವೀಕಾರಾರ್ಹವಾಗಿವೆ ಎಂದರು. ಆದರೆ, ನಾವು ನಮ್ಮ ವಿಪಕ್ಷ ಒಕ್ಕೂಟಕ್ಕೆ ಭಾರತ ಎಂದು ಹೆಸರಿಸಿದ್ದರಿಂದ ಸರ್ಕಾರ ಸ್ವಲ್ಪ ಕೆರಳಿದಂತಿದೆ ಮತ್ತು ಅದು ಅವರೆಲ್ಲರಿಗೂ ಇದರಿಂದ ತಲೆಬಿಸಿ ಆಗಿರಬಹುದು. ಹೀಗಾಗಿ ಕೇಂದ್ರ ಸರ್ಕಾರವು ಹೆಸರನ್ನು ಬದಲಾಯಿಸಲು ನಿರ್ಧರಿಸಿದಂತಿದೆ ಎಂದು ಹೇಳಿದರು.

9/11 ನ್ಯೂಯಾರ್ಕ್ ಭೀಕರ ಉಗ್ರ ದಾಳಿಗೆ 22 ವರ್ಷ

ನ್ಯೂಯಾರ್ಕ್: ಸುಮಾರು 3,000 ಜನರನ್ನು ಬಲಿಪಡೆದಿದ್ದ 2001ರಲ್ಲಿ ಅಮೆರಿಕದಲ್ಲಿ ನಡೆದ 9/11 ರ ಭೀಕರ  (2001 9/11 terrorist attack) ದಾಳಿಯ 22ನೇ ವರ್ಷಾಚರಣೆಯನ್ನು  ಹಲವೆಡೆ ನಡೆಸಲಾಯಿತು. ಇನ್ನು ಭಾರತ ಮತ್ತು ವಿಯೆಟ್ನಾಂ ಪ್ರವಾಸ ಮುಗಿಸಿ ವಾಷಿಂಗ್ಟನ್‌ಗೆ ತೆರಳುತ್ತಿದ್ದ ಅಧ್ಯಕ್ಷ ಜೋ ಬೈಡೆನ್‌ (President Joe Biden) ಅವರು ಆ್ಯಂಕೊರೇಜ್‌ನಲ್ಲಿರುವ ಸೇನಾನೆಲೆಯಲ್ಲಿನ ವರ್ಷಾಚರಣೆಯಲ್ಲಿ ಪಾಲ್ಗೊಂಡರು. ಇನ್ನು ನ್ಯೂಯಾರ್ಕ್, ಪೆನ್ಸಿಲ್ವೇನಿಯಾ (Pennsylvania)ಮತ್ತು ಅಲಾಸ್ಕಾ ಸೇರಿದಂತೆ ಅನೇಕ ಕಡೆ ಜನರು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸ್ಮರಿಸಿದರು. 2001ರ ಸೆ.11 ರಂದು ಅಮೆರಿಕದ ಅವಳಿ ಗೋಪುರಕ್ಕೆ ವಿಮಾನ ಡಿಕ್ಕಿ ಹೊಡೆಸಿದ್ದಉಗ್ರರು ಭಾರೀ ವಿನಾಶ ಸೃಷ್ಟಿಸಿದ್ದರು. ಇದು ಅಮೆರಿಕದ ವಿದೇಶಾಂಗ ನೀತಿಯ ಭಾರಿ ಬದಲಾವಣೆಗೆ ನಾಂದಿ ಹಾಡಿತ್ತು

10 ಕೋಟಿ ಮೌಲ್ಯದ 15000 ಎಲ್‌ಎಸ್‌ಡಿ ಮಾತ್ರೆಗಳು ವಶ: ಇತಿಹಾಸದಲ್ಲೇ ಬೃಹತ್‌ ಮೊತ್ತದ ಡ್ರಗ್ಸ್ ಜಪ್ತಿ

 

Follow Us:
Download App:
  • android
  • ios