Asianet Suvarna News Asianet Suvarna News

10 ಕೋಟಿ ಮೌಲ್ಯದ 15000 ಎಲ್‌ಎಸ್‌ಡಿ ಮಾತ್ರೆಗಳು ವಶ: ಇತಿಹಾಸದಲ್ಲೇ ಬೃಹತ್‌ ಮೊತ್ತದ ಡ್ರಗ್ಸ್ ಜಪ್ತಿ

ಅತ್ಯಂತ ತೀಕ್ಷ್ಣ ಹಾಗೂ ಮಾರಕ ಡ್ರಗ್ಸ್‌ ಎಂದು ಪರಿಗಣಿತವಾಗುವ ಎಲ್‌ಎಸ್‌ಡಿಯನ್ನು ಡಾರ್ಕ್ನೆಟ್‌ನಲ್ಲಿ ಕ್ರಿಪ್ಟೋಕರೆನ್ಸಿ ಮೂಲಕ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿರುವ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ), 15000 ಎಲ್‌ಎಸ್‌ಡಿ ಮಾತ್ರೆಗಳನ್ನು ವಶಪಡಿಸಿಕೊಂಡಿದೆ.

huge amount of drug stock Seized in the history of the country Selling drugs using cryptocurrency on the darknet akb
Author
First Published Jun 7, 2023, 8:02 AM IST

ನವದೆಹಲಿ: ಅತ್ಯಂತ ತೀಕ್ಷ್ಣ ಹಾಗೂ ಮಾರಕ ಡ್ರಗ್ಸ್‌ ಎಂದು ಪರಿಗಣಿತವಾಗುವ ಎಲ್‌ಎಸ್‌ಡಿಯನ್ನು ಡಾರ್ಕ್ನೆಟ್‌ನಲ್ಲಿ ಕ್ರಿಪ್ಟೋಕರೆನ್ಸಿ ಮೂಲಕ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿರುವ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ), 15000 ಎಲ್‌ಎಸ್‌ಡಿ ಮಾತ್ರೆಗಳನ್ನು ವಶಪಡಿಸಿಕೊಂಡಿದೆ. ಇದು ದೇಶದಲ್ಲಿ ಈವರೆಗೆ ಒಂದೇ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಅತ್ಯಂತ ಬೃಹತ್‌ ಎಲ್‌ಎಸ್‌ಡಿ ದಾಸ್ತಾನು. ಇವು​ಗಳ ಮೌಲ್ಯ ಸುಮಾರು 10 ಕೋಟಿ ರು. ಎನ್ನಲಾಗಿದೆ. ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ.

ಪೋಲೆಂಡ್‌ (Poland), ನೆದರ್‌ಲೆಂಡ್‌ (Netherland), ಅಮೆರಿಕ (America) ಹಾಗೂ ಭಾರತದ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಜಾಲ ಇದಾಗಿದೆ. ಇದರ ಮಾಸ್ಟರ್‌ ಮೈಂಡ್‌ನನ್ನು (mastermind) ಜೈಪುರದಲ್ಲಿ ಬಂಧಿಸಲಾಗಿದೆ. ಆತನ ಜೊತೆ ವ್ಯವಹರಿಸುತ್ತಿದ್ದ ಇನ್ನೂ ಐದು ಮಂದಿಯನ್ನು ಬಂಧಿಸಲಾಗಿದ್ದು, ಅವರೆಲ್ಲರೂ ವಿದ್ಯಾರ್ಥಿಗಳು ಹಾಗೂ ಯುವಕರು ಎಂದು ಎನ್‌ಸಿಬಿ ತಿಳಿಸಿದೆ.

ಶಾರುಖ್‌ ಮಗನ ಬಂಧಿಸಿದ್ದ ಸಮೀರ್‌ ವಾಂಖೇಡೆಗೆ ಸಿಬಿಐ ಬಿಸಿ

ಈವರೆಗೆ ಕರ್ನಾಟಕ ಪೊಲೀಸರು (Karntaka Police) 2021ರಲ್ಲಿ ವಶಪಡಿಸಿಕೊಂಡ 5000 ಎಲ್‌ಎಸ್‌ಡಿ ಮಾತ್ರೆಗಳೇ ಅತಿದೊಡ್ಡ ಎಲ್‌ಎಸ್‌ಡಿ ಬೇಟೆಯಾಗಿತ್ತು. ಆ ದಾಖಲೆಯನ್ನು ಈಗ 15000 ಎಲ್‌ಎಸ್‌ಡಿ (LSD) ಮಾತ್ರೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಎನ್‌ಸಿಬಿ ಮುರಿದಿದೆ. ಇದರ ಮೊತ್ತ 10.5 ಕೋಟಿ ರು. ಎಂದು ಹೇಳಲಾಗಿದೆ.

ಇನ್‌ಸ್ಟಾದಲ್ಲಿ ಗಾಳ 

ಭ್ರಮೆ ಉಂಟುಮಾಡುವ ನಿಷೇಧಿತ ಎಲ್‌ಎಸ್‌ಡಿ ರಾಸಾಯನಿಕ ಡ್ರಗ್ಸ್ (chemical drug) ಅನ್ನು ಈ ಜಾಲವು ಡಾರ್ಕ್ನೆಟ್‌ (darknet)  ಮೂಲಕ ಮಾರಾಟ ಮಾಡುತ್ತಿತ್ತು. ಮೊದಲಿಗೆ ಇನ್‌ಸ್ಟಾಗ್ರಾಂನಲ್ಲಿ (Instagram) ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಎಲ್‌ಎಸ್‌ಡಿ ಬೇಕೇ ಎಂದು ಕೇಳಿ, ಅವರು ಆಸಕ್ತಿ ತೋರಿದರೆ ‘ವಿಕರ್‌ ಮಿ’ (Vicker Me) ಖಾಸಗಿ ಮೆಸೇಜಿಂಗ್‌ ಆ್ಯಪ್‌ಗೆ ಕರೆದೊಯ್ಯುತಿತ್ತು. ಅಲ್ಲಿ ಕ್ರಿಪ್ಟೋಕರೆನ್ಸಿ (cryptocurrency) ಮೂಲಕ ಹಣ ಪಡೆದು ನೆದರ್‌ಲೆಂಡ್‌ ಮತ್ತು ಪೋಲೆಂಡ್‌ನಿಂದ ಕಳ್ಳಸಾಗಣೆ ಮಾಡಿ ತರಲಾದ ಎಲ್‌ಎಸ್‌ಡಿಯನ್ನು ಮಾರುತ್ತಿತ್ತು.

ಡ್ರಗ್‌ ಕಿಕ್ಕಲ್ಲಿ 22 ವರ್ಷದ ಕಾರು ಚಾಲಕನ ಕಿತಾಪತಿ: ಈಗ ಪೊಲೀಸರ ಅತಿಥಿ

Follow Us:
Download App:
  • android
  • ios