ಈ ಶ್ವಾನಕ್ಕಿದೆ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗೂ ಹೆಚ್ಚು ಫಾಲೋವರ್
ಇಲ್ಲೊಂದು ಶ್ವಾನ ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌ಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹೊಂದಿದೆ.
ಸೋಶಿಯಲ್ ಮೀಡಿಯಾಗಳ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಮಿಲಿಯನ್‌ಗೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವವರು ಬಹುತೇಕ ಸೆಲೆಬ್ರಿಟಿಗಳಾಗಿರುತ್ತಾರೆ. ಸಿನಿಮಾರಂಗ ಹಾಲಿವುಡ್ ಬಾಲಿವುಡ್ ಕ್ರೀಡಾಕ್ಷೇತ್ರ ಕ್ರಿಕೆಟರ್ ಹೀಗೆ ಯಾವುದಾದರೂ ಕ್ಷೇತ್ರದಲ್ಲಿ ಮಿಂಚುವವರಾಗಿರ್ತಾರೆ ಎಂದೇ ನಾವೆಲ್ಲಾ ಭಾವಿಸಿರ್ತೇವೆ. ಆದರೆ ಇಲ್ಲೊಂದು ಸೋಶಿಯಲ್ ಮೀಡಿಯಾ ಸ್ಟಾರ್ ಅಕೌಂಟ್ ನೋಡಿದ್ರೆ ನೀವು ಪಕ್ಕಾ ಅಶ್ಚರ್ಯ ಪಡ್ತೀರಾ? ಜೊತೆಗೆ ನೀವು ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್‌ಗಳನ್ನು ಹೆಚ್ಚಿಸಬೇಕು ಏನು ಮಾಡಿದರು ಹೆಚ್ಚಾಗುತ್ತಿಲ್ಲ ಎಂದು ಬೇಸರಿಸುವವರಾದರೆ ಈ ಸುದ್ದಿ ಓದಿ ನಿಮಗೆ ಖಂಡಿತ ಬೇಸರವಾಗಬಹುದು. ಏಕೆಂದರೆ ಇಲ್ಲೊಂದು ಶ್ವಾನ ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌ಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹೊಂದಿದೆ.
ಅಂದಹಾಗೆ ಈ ಶ್ವಾನ ಇನ್ಸ್ಟಾಗ್ರಾಮ್‌ನಲ್ಲಿ thepuggysmalls ಎಂಬ ಹೆಸರನ್ನಿಟ್ಟುಕೊಂಡಿದೆ. ಬ್ರಿಟನ್‌ನ ಕೇಂಟ್ ( Kent) ಮೂಲದ ಈ ಪಗ್ ಡಾಗ್ ಈಗ ಸೋಶಿಯಲ್ ಮೀಡಿಯಾದಲ್ಲಿ ತನ್ನ ಸ್ಟೈಲ್ ಹಾವಭಾವದಿಂದ ಜನರಿಗೆ ಸಂಚಲನ ಮೂಡಿಸುತ್ತಿದೆ. ಯುಕೆಯ ಈ ಕೇಂಟ್ ಪ್ರದೇಶವೂ ಅತೀಹೆಚ್ಚು ಡಾಗ್ ಇನ್‌ಫ್ಲುಯೆನ್ಸರ್‌ಗಳಿಂದ ಖ್ಯಾತಿ ಗಳಿಸಿದೆ.
ಕೊಲೆ ಪ್ರಕರಣವನ್ನು ಕ್ಷಣದಲ್ಲಿ ಭೇದಿಸಿದ ಶ್ವಾನಕ್ಕೆ 'ಬೆಸ್ಟ್ ಕಾಪ್ ಅವಾರ್ಡ್'
ದಿ ಮೆಟ್ರೋ ನಿಯತಕಾಲಿಕೆ ವರದಿಯ ಪ್ರಕಾರ, 8 ವರ್ಷದ ಈ ಪಗ್ ಮಾಲೀಕರಾದ ನಿಕ್ ಎಟ್ರಿಡ್ಜ್ ಮತ್ತು ಚಾರ್ಲಿ ಓಸ್ಮಾನ್ ಹೇಳುವಂತೆ 2014ರಲ್ಲಿ ಇವರು ಈ ಪಗ್‌ನ ಸಾಮಾಜಿಕ ಜಾಲತಾಣ ಖಾತೆ ತೆರೆದಿದ್ದಾರೆ. ಪಗ್‌ಗಾಗಿಯೇ ನಾನು ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಅದರ ಮಾಲೀಕ ನಿಕ್ ಹೇಳಿದರು. ನಾನು ಅದನ್ನು ನೆನಪಿಗಾಗಿ ಸದಾ ಕಾಲ ಇರಿಸಲು ಕೇವಲ ಫೋಟೋ ಅಲ್ಬಮ್‌ಗಾಗಿ ಬಳಸಬೇಕೆಂದು ಬಯಸಿದ್ದೆ. ಅದರಿಂದ ಬೇರೆನೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮುಂದೆ ಇದರ ಫೋಟೋಗಳನ್ನು ಜನ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೆಚ್ಚು ಇಷ್ಟಪಡಲು ಆರಂಭಿಸಿದರು. ಜೊತೆಗೆ ಅದರ ಸೋಶಿಯಲ್ ಮೀಡಿಯಾ ಅಕೌಂಟ್‌ಗಳನ್ನು ಫಾಲೋ ಮಾಡಲು ಶುರು ಮಾಡಿ ಅದರ ಅಪ್‌ಡೇಟ್‌ಗಾಗಿ ಕಾಯಲು ಶುರು ಮಾಡಿದರು. ಇಂದು ಈ ಫಗ್‌ನ ಹಲವು ವಿಡಿಯೋಗಳನ್ನು ಸಾವಿರಾರು ಜನ ಲೈಕ್ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಶ್ವಾನ ಸ್ಟಾರ್ ಎನಿಸಿದೆ.
Viral Video : ಕಾರಲ್ಲಿ ಬಂದ ವರ.. ಮೆರವಣಿಗೆಯಲ್ಲಿ ವಧು.. ಅಲ್ಲಿ ನಡೆದಿದ್ದು ಮಾತ್ರ ನಾಯಿ ಮದ್ವೆ!