ಜಗತ್ತಿನಲ್ಲಿ ಇದುವರೆಗೆ ಪತ್ತೆಯಾದ ವಜ್ರಗಳ ಪೈಕಿ 3ನೇ ಅತಿದೊಡ್ಡ ವಜ್ರ ಪತ್ತೆ  ವಜ್ರದ ಹರಳೊಂದನ್ನು ಆಫ್ರಿಕಾ ಖಂಡದ ಬೋಟ್ಸ್ವಾನಾ ದೇಶದಲ್ಲಿ ಪತ್ತೆ

ಗ್ಯಾಬೊರೋನ್‌ (ಜೂ.18): ಜಗತ್ತಿನಲ್ಲಿ ಇದುವರೆಗೆ ಪತ್ತೆಯಾದ ವಜ್ರಗಳ ಪೈಕಿ 3ನೇ ಅತಿದೊಡ್ಡ ವಜ್ರದ ಹರಳೊಂದನ್ನು ಆಫ್ರಿಕಾ ಖಂಡದ ಬೋಟ್ಸ್ವಾನಾ ದೇಶದಲ್ಲಿ ಇತ್ತೀಚೆಗೆ ಪತ್ತೆಹಚ್ಚಲಾಗಿದೆ. ಆಂಗ್ಲೋ ಅಮೆರಿಕದ ಡೀ ಬೀರ್ಸ್‌ ಸಂಶೋಧನಾ ತಂಡ ಮತ್ತು ಬೋಟ್ಸ್ವಾನಾ ಸರ್ಕಾರ ಜಂಟಿಯಾಗಿ ಗಣಿಗಾರಿಕೆ ನಡೆಸಿ 1098 ಕ್ಯಾರೇಟ್‌ನ ವಜ್ರವನ್ನು ಪತ್ತೆ ಮಾಡಿದೆ.

ಲಾಕ್‌ಡೌನ್ ವೇಳೆ ಊರಿಗೆ ಮರಳಿದ್ದ ಕಾರ್ಮಿಕನಿಗೆ ಒಲಿದ ಅದೃಷ್ಟ, ಕ್ಷಣಾರ್ಧದಲ್ಲಿ ಲಕ್ಷಾಧಿಪತಿ! .

ಈ ವಜ್ರದ ಹರಳು 73 ಮಿಲಿ ಮೀಟರ್‌ ಉದ್ದ, 52 ಮಿಲಿಮೀಟರ್‌ ಅಗಲ ಮತ್ತು 27 ಮಿಲಿ ಮೀಟರ್‌ ದಪ್ಪವಾಗಿದೆ. ಇದು 2015ರಲ್ಲಿ ಬೋಟ್ಸ್ವಾನಾದಲ್ಲಿಯೇ ಪತ್ತೆ ಆದ 2ನೇ ಅತಿದೊಡ್ಡ ‘ಲೆಸೆಡಿ ಲಾ ರೋನಾ’ವಜ್ರಕ್ಕಿಂತ ಸ್ವಲ್ವ ಚಿಕ್ಕದಾಗಿದೆ. 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಆದ 3106 ಕ್ಯಾರೆಟ್‌ನ ವಜ್ರ ಇದುವರೆಗಿನ ಅತ್ಯಂತ ದೊಡ್ಡ ವಜ್ರದ ಹರಳು ಎನಿಸಿಕೊಂಡಿದೆ.

ಈಗ ಪತ್ತೆ ಆಗಿರವ ವಜ್ರದ ನಿಖರವಾದ ಬೆಲೆ ತಿಳಿದುಬಂದಿಲ್ಲ. ಆದರೆ, ‘ಲೆಸೆಡಿ ಲಾ ರೋನಾ’ ವಜ್ರವನ್ನು 2017ರಲ್ಲಿ 386 ಕೋಟಿ ರು.ಗೆ ಮಾರಾಟ ಮಾಡಲಾಗಿತ್ತು. ಹೀಗಾಗಿ ಅದಕ್ಕಿಂತಲೂ ಹೆಚ್ಚಿನ ದರಕ್ಕೆ ವಜ್ರ ಮಾರಾಟ ಆಗುವ ನಿರೀಕ್ಷೆ ಇದೆ.