ಭಾರತದಲ್ಲಿ ಆಪಲ್‌, ಮುಂಬೈ ಹಾಗೂ ದೆಹಲಿಯಲ್ಲಿ ತನ್ನ ಅಧಿಕೃತ ಸ್ಟೋರ್‌ಅನ್ನು ಆರಂಭ ಮಾಡಿರುವ ಹೊತ್ತಿನಲ್ಲಿಯೇ, ಅಮೆರಿಕದ ಆಪಲ್‌ ಸ್ಟೋರ್‌ನಲ್ಲಿ ಅನಾಹುತವಾಗಿದೆ. ಖದೀಮರು ಆಪಲ್‌ ಸ್ಟೋರ್‌ನ ಬಾತ್‌ರೂಮ್‌ಗೆ ಸುರಂಗ ಕೊರೆದು 4.16 ಕೋಟಿ ರೂಪಾಯಿ ಮೌಲ್ಯದ ಆಪಲ್‌ ಫೋನ್‌ಅನ್ನು ಕಳ್ಳತನ ಮಾಡಿದ್ದಾರೆ.

ನವದೆಹಲಿ (ಏ.20): ನೆಟ್‌ಫ್ಲಿಕ್ಸ್‌ ವೆಬ್‌ ಸಿರೀಸ್‌ ಮನಿಹೇಸ್ಟ್‌ನಿಂದ ಪ್ರೇರತವಾಗಿ ಸಾಕಷ್ಟು ಕಳ್ಳತನಗಳು ನಡೆದಿವೆ. ಹೆಚ್ಚಿನವು ವಿಫಲವಾಗಿದ್ದರೆ, ಕೆಲವು ಯಶಸ್ವಿ ಕೂಡ ಆಗಿವೆ. ಇದೇ ರೀತಿಯ ಘಟನೆ ಅಮೆರಿಕದ ಆಪಲ್‌ ಸ್ಟೋರ್‌ನಲ್ಲಿ ನಡೆದಿದ್ದು, ಖತರ್ನಾಕ್‌ ಕಳ್ಳರ ಐಡಿಯಾ ಕಂಡು ಪೊಲೀಸರೇ ಅಚ್ಚರಿ ಪಟ್ಟಿದ್ದಾರೆ. ಹಾಲಿವುಡ್‌ನ ಪ್ರಖ್ಯಾತ ಚಿತ್ರ ಓಶಿಯನ್ಸ್‌ ಇಲೆವೆನ್‌ನಿಂದ ಪ್ರೇರಿತರಾದಂತೆ ಕಂಡುಬರುವ ಘಟನೆಯಲ್ಲಿ, ಆಪಲ್‌ ಸ್ಟೋರ್‌ಗೆ ತಾಗಿಕೊಂಡೇ ಇದ್ದ ಸುರಂಗ ಕೊರೆದ ಖತರ್ನಾಕ್‌ ಕಳ್ಳರು ಒಂದೆರಡಲ್ಲ ಬರೋಬ್ಬರು 436 ಐಫೋನ್‌ಗಳನ್ನು ಕದ್ದೊಯ್ದಿದ್ದಾರೆ. ಇದರ ಒಟ್ಟು ಮೌಲ್ಯ 4.10 ಕೋಟಿ ರೂಪಾಯಿ ಎನ್ನಲಾಗಿದೆ. ಈ ಕುರಿತಾಗಿ ಸೀಟ್ಟಲ್‌ನ ಸುದ್ದಿವಾಹಿನಿ ಕಿಂಗ್‌-5 ನ್ಯೂಸ್‌ ವರದಿ ಮಾಡಿದೆ. ಕಳ್ಳರು ಸಿಯಾಟಲ್ ಕಾಫಿ ಗೇರ್‌ನ ಬಾತ್‌ರೂಮ್‌ಗೆ ಸುರಂಗ ಕೊರೆಯುವ ಮೂಲಕ ಅದಕ್ಕೆ ತಾಕಿಕೊಂಡೇ ಇದ್ದ, ಆಪಲ್‌ ಸ್ಟೋರ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಕಳ್ಳರು ಆಪಲ್ ಸ್ಟೋರ್‌ನ ಭದ್ರತಾ ವ್ಯವಸ್ಥೆಯನ್ನು ಪಕ್ಕದ ಕಾಫಿ ಶಾಪ್ ಬಳಸಿ ಬೈಪಾಸ್ ಮಾಡಿದ್ದಾರೆ ಮತ್ತು ಸುಮಾರು 500,000 ಅಮೆರಿಕನ್‌ ಡಾಲರ್‌ ಅಂದರೆ ಸುಮಾರು 4.10 ಕೋಟಿ ಮೌಲ್ಯದ 436 ಐಫೋನ್‌ಗಳನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.

ಕಾಫಿ ಶಾಪ್‌ನ ಪ್ರಾದೇಶಿಕ ರಿಟೇಲ್‌ ಮ್ಯಾನೇಜರ್‌ ಆಗಿರುವ ಎರಿಕ್‌ ಮಾರ್ಕ್ಸ್‌ ಈ ವಿಚಾರವನ್ನು ತಿಳಿಸಿದ್ದು, ಮುಂಜಾನೆ ನನಗೆ ದೂರವಾಣಿ ಕರೆ ಬಂದಿತ್ತು. ಈ ವೇಳೆ ಕಳ್ಳತನದ ವಿಚಾರ ತಿಳಿಸಲಾಗಿತ್ತು. ಈ ಹಂತದಲ್ಲಿ ನನಗೆ ಏನು ಹೇಳಬೇಕು ಅನ್ನೋದೆ ಗೊತ್ತಾಗಲಿಲ್ಲ. ಆಪಲ್‌ ಸ್ಟೋರ್‌ಗೆ ಪ್ರವೇಶ ಪಡೆಯಲು ಕಳ್ಳಲು ನನ್ನ ಶಾಪ್‌ ಅನ್ನು ಬಳಸಿದ್ದನ್ನು ಪೊಲೀಸರು ಕೂಡ ಖಚಿತಪಡಿಸಿದ್ದರು. 'ಇದೇ ವೇಳೆ ನಮ್ಮ ಪಕ್ಕದಲ್ಲಿ ಆಪಲ್‌ ಸ್ಟೋರ್‌ ಇತ್ತೇ? ಎನ್ನುವ ಅನುಮಾನವ ಕಾಡಿತ್ತು. ಇದನ್ನೆಲ್ಲಾ ಕಳ್ಳರು ಹೇಗೆ ಮಾಡಲು ಸಾಧ್ಯ' ಎಂದು ಮಾರ್ಕ್ಸ್‌ ತಿಳಿಸಿದ್ದಾರೆ. 

ಆಪಲ್ ಸ್ಟೋರ್‌ನ ಬಾತ್ರೂಮ್‌ನಲ್ಲಿ ಕಳ್ಳರು ಸೃಷ್ಟಿಸಿದ ಸುರಂಗದ ಚಿತ್ರದೊಂದಿಗೆ ಕಾಫಿ ಶಾಪ್‌ನ ಸಿಇಒ-ಮೈಕ್ ಅಟ್ಕಿನ್ಸನ್ ಟ್ವಿಟರ್‌ನಲ್ಲಿ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ "ಇಬ್ಬರು ನಮ್ಮ ರಿಟೇಲ್‌ ಮಳಿಗೆಗೆ ನುಗ್ಗಿದ್ದರು. ಯಾಕಾಗಿ ಗೊತ್ತೇ, ನಮ್ಮ ಬಾತ್‌ರೂಮ್‌ ಗೋಡೆಗೆ ಸುರಂಗವನ್ನು ಕೊರೆದು ಆಪಲ್‌ ಸ್ಟೋರ್‌ಗೆ ನುಗ್ಗಲು. ಇದರಿಂದ ಅವರು 500000 ಯುಎಸ್‌ ಡಾಲರ್ ಮೌಲ್ಯದ ಐಫೋನ್‌ಗಳನ್ನು ಕದ್ದಿದ್ದಾರೆ' ಎಂದು ಟ್ವೀಟ್‌ ಮಾಡಿದ್ದಾರೆ.

ಆಗ ತಾನೆ ಹುಟ್ಟಿದ ಶಿಶುವನ್ನು ಬಾತ್‌ರೂಮ್‌ ಕಿಟಕಿಯಿಂದ ಎಸೆದು ಸಾಯಿಸಿದ ಮಹಿಳೆ!

ಸಿಯಾಟಲ್ ಕಾಫಿ ಗೇರ್ ತಮ್ಮ ಲಾಕ್‌ ಸಿಸ್ಟಮ್‌ ಬದಲಿಸಲು ಸುಮಾರು 900 ಯುಎಸ್‌ ಡಾಲರ್‌ ಖರ್ಚು ಮಾಡಿದೆ. ಬಾತ್ರೂಮ್ ರಿಪೇರಿಗಾಗಿ 600 ರಿಂದ 800 ಡಾಲರ್‌ ನಡುವೆ ಖರ್ಚು ಮಾಡಬೇಕಾಗಿದೆ ಎಂದು ತಿಳಿಸಿದೆ. ಪೊಲೀಸರು ಈಗಾಗಲೇ ಅಪರಾಧದ ತನಿಖೆ ನಡೆಸುತ್ತಿದೆ. ಇನ್ನು ಅಲ್ಡರ್‌ವುಡ್‌ ಮಾಲ್‌ನಲ್ಲಿರುವ ನಮ್ಮ ಕಾಫಿ ಶಾಪ್‌ ಪೊಲೀಸರಿಗೆ ಸಹಾಯ ಮಾಡುತ್ತಿದೆ ಎಂದು ಸಿಯಾಟಲ್‌ ಕಾಫಿ ಗೇರ್‌ ತಿಳಿಸಿದೆ. ಕಳ್ಳರ ಚಾಕಚಕ್ಯತೆ ಹಾಗೂ ಅವರ ವೇಗವನ್ನು ನೋಡಿದರೆ, ಇದು ಯಾರೋ ಗೊತ್ತಿರುವವರು ಮಾಡಿರುವ ಕೆಲಸ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಅಟ್ಕಿನ್ಸನ್‌ ಕೂಡ ಇದೇ ಅನುಮಾನ ಹೊಂದಿದ್ದಾರೆ.

ಹೈಕೋರ್ಟ್‌ ಮೆಟ್ಟಿಲೇರಿದ ಐಶ್ವರ್ಯಾ ರೈ ಪುತ್ರಿ 11 ವರ್ಷದ ಆರಾಧ್ಯ ಬಚ್ಛನ್‌, ಏನ್‌ ವಿಷ್ಯ?

ಸಾಮಾನ್ಯವಾಗಿ ಕಳ್ಳರು ಬ್ಯಾಂಕ್‌ಗಳು, ಆಭರಣ ಮಳಿಗೆಗಳು ಹಾಗೂ ಮೌಲ್ಯಾಧಾರಿತ ವಸ್ತುಗಳು ಸಿಗುವ ಪ್ರದೇಶವನ್ನು ದೋಚುವ ಪ್ಲ್ಯಾನ್‌ ಮಾಡುತ್ತಾರೆ. ಆದರೆ, ಐಫೋನ್‌ನ್‌ಗೆ ಇರುವ ಮೌಲ್ಯವನ್ನು ಗಮನಿಸಿ ಈ ಕಳ್ಳಲು ಆಪಲ್‌ ಸ್ಟೋರ್‌ಅನ್ನು ದೋಚಲು ಪ್ಲ್ಯಾನ್‌ ನಡೆಸಿದ್ದಾರೆ. ಐಫೋನ್‌ 14ಗೆ ಮಾರುಕಟ್ಟೆಯಲ್ಲಿ 699 ಯುಎಸ್‌ ಡಾಲರ್‌ ಬೆಲೆಯಿದ್ದು, ಬ್ಲ್ಯಾಕ್‌ ಮಾರ್ಕೆಟ್‌ನಲ್ಲಿ ಚಿನ್ನಕ್ಕಿಂತ ಹೆಚ್ಚಿನ ಮೌಲ್ಯ ಐಫೋನ್‌ಗೆ ಇದೆ ಎಂದು ಹೇಳಲಾಗುತ್ತದೆ. ಈ ನಡುವೆ, ಆಪಲ್ ಕಳ್ಳತನದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಮತ್ತು ಸಾಮಾನ್ಯವಾಗಿ ಸ್ಟೋರ್‌ ಕಳ್ಳತನದ ಬಗ್ಗೆ ಕಂಪನಿ ಪ್ರತಿಕ್ರಿಯೆ ನೀಡುವುದಿಲ್ಲ.