Asianet Suvarna News Asianet Suvarna News

ಕದ್ದ ಆಂಡ್ರಾಯ್ಡ್ ಫೋನ್ ವಾಪಸ್ ನೀಡಿದ್ಯಾಕೆ ಈ ಕಳ್ಳ?

ಅಮೆರಿಕಾದಲ್ಲಿ ಕಳ್ಳತನ ಹೆಚ್ಚಾಗ್ತಿದೆ. ಶ್ರೀಮಂತರನ್ನು ಗುರಿಯಾಗಿಸಿಕೊಂಡು ಲೂಟಿ ನಡೆಯುತ್ತಿದೆ. ಈಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಅಲ್ಲಿ ಕಳ್ಳನ ವರ್ತನೆ ಗಮನ ಸೆಳೆದಿದೆ. ಇನ್ನು ಚೀನಾದಲ್ಲೂ ವಿಚಿತ್ರ ಘಟನೆ ಸುದ್ದಿ ಮಾಡಿದೆ.

Thieves Return Stolen Android Phone To Us Couple Taunted Wanted An  I Phone roo
Author
First Published Dec 8, 2023, 1:12 PM IST

ಕಳ್ಳರು ತಾವು ಕಳ್ಳತನ ಮಾಡಿದ ವಸ್ತುಗಳನ್ನು ಇಟ್ಕೊಳ್ಳೋದಿಲ್ಲ. ಅದನ್ನು ಮಾರಾಟ ಮಾಡಿ ಬಂದ ಹಣವನ್ನು ಬಳಸಿಕೊಳ್ತಾರೆ. ಕೆಲವೊಮ್ಮೆ ದೊಡ್ಡ ನಿರೀಕ್ಷೆಯಲ್ಲಿ ಕಳ್ಳತನ ಮಾಡುವ ಕಳ್ಳರಿಗೆ ನಿರಾಸೆಯಾಗೋದಿದೆ. ಬಂಗಾರ ಎಂದುಕೊಂಡು ಕದ್ದಿದ್ದ ಮಾಲು ಕಬ್ಬಿಣ ಎಂಬುದು ಗೊತ್ತಾದಾಗ ಅವರೇ ಹಿಂದಿರುಗಿಸಿ ಹೋದ ಕೆಲ ಘಟನೆಗಳು ಈ ಹಿಂದೆ ವರದಿಯಾಗಿದ್ದವು. ಈಗ ಅಮೆರಿಕಾದ ವಾಷಿಂಟನ್ ನಲ್ಲಿ ಕಳ್ಳರ ವರ್ತನೆ ನೋಡಿ ದಂಪತಿ ಅಚ್ಚರಿಗೊಳಗಾಗಿದ್ದಾರೆ.

ಆಂಡ್ರಾಯ್ಡ್ ಫೋನ್ (Android Phone) ವಾಪಸ್ ಮಾಡಿದ ದರೋಡೆಕೋರ : 
ಮಹಿಳೆ ಪ್ರಕಾರ, ಆಕೆ ಪತಿ ಸಾರ್ವಜನಿಕ (Public) ಸ್ಥಳದಲ್ಲಿ ಬಿಎಂಡಬ್ಲ್ಯು (BMW) ಕಾರನ್ನು ಪಾರ್ಕ್ ಮಾಡಿ ಬರ್ತಿರುವ ವೇಳೆ ಬಂದೂಕು ಹಿಡಿದಿದ್ದ ಇಬ್ಬರು ಮುಸುಕುಧಾರಿ ದರೋಡೆಕೋರರು ಆತನನ್ನು ಅಡ್ಡಗಟ್ಟಿದ್ದಾರೆ. ಬಿಎಂಡಬ್ಲ್ಯು ಕಾರ್ ಕೀ ಸೇರಿದಂತೆ ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡಿದ್ದಾರೆ. ದಂಪತಿ ಏನಾಗ್ತಿದೆ ಎಂಬುದನ್ನು ಅರಿಯುವ ಮೊದಲೇ ಬಿಎಂಡಬ್ಲ್ಯು ಕಾರ್ ಹತ್ತಿದ ದರೋಡೆಕೋರರಲ್ಲಿ ಒಬ್ಬನು, ದಂಪತಿ ಕೈನಿಂದ ಕಸಿದುಕೊಂಡಿದ್ದ ಮೊಬೈಲ್ ವಾಪಸ್ ಮಾಡಿದ್ದಾನೆ. ಅಷ್ಟೇ ಅಲ್ಲ ಅಚ್ಚರಿ ವಿಷ್ಯವೊಂದನ್ನು ಹೇಳಿದ್ದಾನೆ. ಇದು ಆಂಡ್ರಾಯ್ಡ್ ಫೋನ್. ಇದು ನಮಗೆ ಬೇಡ. ನಾವು ಐಫೋನ್ ಎಂದುಕೊಂಡಿದ್ದೆವು ಎಂದು ಹೇಳಿದ್ದಾನೆ. 

ಮರಿಗಳ ಹೊಟ್ಟೆ ತುಂಬಿಸಲು ಈ ಬೀದಿನಾಯಿ ಏನ್ ಮಾಡ್ತಿದೆ ನೋಡಿ: ಭಾವುಕ ವೀಡಿಯೋ ವೈರಲ್

ದರೋಡೆಕೋರರು ಯಾವ ಫೋನನ್ನು ಅಗ್ಗವೆಂದು ವಾಪಸ್ ನೀಡಿದ್ರೋ ಅದು ನನಗೆ ಅಮೂಲ್ಯವಾದದ್ದು ಎಂದು ಮಹಿಳೆ ಹೇಳಿದ್ದಾಳೆ. ಇದು ಬರೀ ಆಂಡ್ರಾಯ್ಡ್ ಅಲ್ಲ. ಇದು ಜೀವನೋಪಾಯದ ಪ್ರಮುಖ ಭಾಗ. ಉಬರ್ ಈಟ್ಸ್ ಮತ್ತು ಇನ್‌ಸ್ಟಾಕಾರ್ಟ್‌ನಂತಹ ಸ್ಥಳಗಳಲ್ಲಿ ಕೆಲಸ ಮಾಡಿ ಗಳಿಸಿದ ಹಣದಿಂದ ನಾನು ಅದನ್ನು ಖರೀದಿಸಿದ್ದೆ ಎಂದು ಮಹಿಳೆ ಹೇಳಿದ್ದಾಳೆ.

ಅಮೆರಿಕಾಲ್ಲಿ ಹೆಚ್ಚಾಗ್ತಿದೆ ಕಳ್ಳತನ : ವಾಸ್ತವವಾಗಿ ಅಮೆರಿಕಾದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಅದ್ರಲ್ಲಿ ಇದು ಒಂದು. ಈ ಹಿಂದೆ ಕ್ಯಾಲಿಫೋರ್ನಿಯಾದ ಗುಸ್ಸಿ ಅಂಗಡಿಯಿಂದ 50,000 ಡಾಲರ್ ಮೌಲ್ಯದ ಸರಕುಗಳನ್ನು ಕಳವು ಮಾಡಿರುವ ಸುದ್ದಿ ಬಂದಿತ್ತು. ಸಿಸಿಟಿವಿಯಲ್ಲಿ ರೆಕಾರ್ಡ್ ಆದ ದೃಶ್ಯದಲ್ಲಿ ದರೋಡೆಕೋರರು ಅರೆ ಕ್ಷಣದಲ್ಲಿ ಅಂಗಡಿ ಖಾಲಿ ಮಾಡಿದ್ದರು. ಸ್ಥಳೀಯ ಪೊಲೀಸರು ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚನೆ ನೀಡಿದ್ದಲ್ಲದೆ ಅಪರಾಧಿಗಳನ್ನು ಪತ್ತೆ ಹಚ್ಚುವ ಕೆಲಸ ಮುಂದುವರೆಸಿದ್ದಾರೆ.

ಭಾರತದ ಅತೀ ಶ್ರೀಮಂತ ಡಾಕ್ಟರ್‌; ಸಾವಿರಾರು ರೋಗಿಗಳ ಜೀವ ಉಳಿಸಿದಾತ 8400 ಕೋಟಿ ಆಸ್ತಿಯ ಒಡೆಯ!

ಫೋನ್ ವಾಪಸ್ ನೀಡಲು ಕಳ್ಳನ ಧಮಕಿ : ಇತ್ತ ಚೀನಾದಲ್ಲಿ ಮತ್ತೊಂದು ಕಳ್ಳತನ ಚರ್ಚೆಗೆ ಬಂದಿದೆ. ಜಾಂಗ್ ಎಂಬ ಮಹಿಳೆ ಖರೀದಿಸಿದ್ದ 70 ಸಾವಿರ ರೂಪಾಯಿ ಮೌಲ್ಯದ ಐಫೋನ್ 13ರನ್ನು ರೆಸ್ಟೋರೆಂಟ್‌ನಲ್ಲಿ ಕಳೆದುಕೊಂಡಿದ್ದಾಳೆ. ಈ ಬಗ್ಗೆ ಜಾಂಗ್ ಪೊಲೀಸರಿಗೆ ದೂರು ನೀಡಿದ್ದಾಳೆ. ಜೊತೆಗೆ ಸಿಸಿಟಿವಿ ದೃಶ್ಯವನ್ನು ವೀಕ್ಷಣೆ ಮಾಡಿದ್ದಾಳೆ. ಅದ್ರಲ್ಲಿ ವ್ಯಕ್ತಿಯೊಬ್ಬ ಪ್ಲೇಟ್ ಜೊತೆ ಫೋನ್ ತೆಗೆದುಕೊಂಡಿರೋದು ಕಾಣುತ್ತದೆ. ಜಾಂಗ್ ಆತ ಫೋನ್ ಹಿಂದಿರುಗಿಸುತ್ತಾನೆ ಎನ್ನುವ ಭರವಸೆಯಲ್ಲಿ ಆತನನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾಳೆ. ಆದ್ರೆ ಆತ ಶಾಕ್ ನೀಡಿದ್ದಾನೆ. ಜಾಂಗ್ ಫೋನ್ ಹಿಂದಿರುಗಿಸಲು ಜಾಂಗ್ ತನಗೆ 2,000 ಯುವಾನ್ ಅಂದ್ರೆ 23 ಸಾವಿರ ರೂಪಾಯಿ ನೀಡಬೇಕೆಂದು ಷರತ್ತು ವಿಧಿಸಿದ್ದಾನೆ. ನಾನು ವಿದ್ಯಾರ್ಥಿ ನನ್ನ ಬಳಿ ಹಣವಿಲ್ಲ ಎಂದಾಗ ವ್ಯಕ್ತಿ ಮೊತ್ತವನ್ನು 1,500 ಯುವಾನ್ ಗೆ ಇಳಿಸಿದ್ದಾನೆ. ಹಣ ನೀಡದೆ ಹೋದ್ರೆ ಫೋನ್ ಡೇಟಾ ಡಿಲಿಟ್ ಮಾಡೋದಾಗಿ ಹೆದರಿಸಿದ್ದಾನೆ. ಜಾಂಗ್ ಪ್ರಕಾರ, ಆಕೆಗೆ ಫೋನ್ ಬಹಳ ಮುಖ್ಯ. ಅದ್ರಲ್ಲಿ ಆಕೆಯ ಕುಟುಂಬದ ಮೃತ ಸದಸ್ಯರ ಫೋಟೋ ಹಾಗೂ ಅಮೂಲ್ಯ ದಾಖಲೆ ಇದೆಯಂತೆ. ಹಣವನ್ನು ಕಂತಿನಲ್ಲಿ ನೀಡೋದಾಗಿ ಹೇಳಿದ್ರೂ ವ್ಯಕ್ತಿ ಇದನ್ನು ಒಪ್ಪುತ್ತಿಲ್ಲ. 

Follow Us:
Download App:
  • android
  • ios