ಮೊಬೈಲ್ ಫೋನ್ ಕದ್ದು ಓಡುತ್ತಿದ್ದಾಗ ದುರಂತ: ಕಾರಡಿಗೆ ಬಿದ್ದು ಸತ್ತ ಕಳ್ಳ: ವೀಡಿಯೋ ವೈರಲ್
ಮಹಿಳೆಯ ಮೊಬೈಲ್ ಕದ್ದು ಓಡುವ ವೇಳೆ ಕಳ್ಳನೋರ್ವ ಕಾರಿನ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದ್ದು, ಈ ಭಯಾನಕ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯ ಮೊಬೈಲ್ ಕದ್ದು ಓಡುವ ವೇಳೆ ಕಳ್ಳನೋರ್ವ ಕಾರಿನ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದ್ದು, ಈ ಭಯಾನಕ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. @Desam_officialz ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ.
ಈ ವೀಡಿಯೋ ಪೋಸ್ಟ್ ಮಾಡಿದವರು ಹೇಳುವಂತೆ ಕಳ್ಳನೋರ್ವ ಮಹಿಳೆಯ ಕೈಯಲ್ಲಿದ್ದ ಮೊಬೈಲ್ ಫೋನ್ ಕಿತ್ತುಕೊಂಡು ವೇಗವಾಗಿ ಓಡುತ್ತಾ ರಸ್ತೆ ದಾಟಲು ಮುಂದಾಗಿದ್ದು, ಈ ವೇಳೆ ಅಷ್ಟೇ ವೇಗವಾಗಿ ಬಂದ ಕಾರೊಂದು ಆತನಿಗೆ ಡಿಕ್ಕಿಯಾಗಿ ಆತನ ಮೇಲೆರಿದೆ. ಪರಿಣಾಮ ಮೊಬೈಲ್ ಕಳ್ಳ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ಯಾವಾಗ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಕಾರು ಡಿಕ್ಕಿಯಾದ ರಭಸಕ್ಕೆ ಆತ ಗಾಳಿಯಲ್ಲಿ ಎತ್ತರಕ್ಕೆ ಹಾರಿ ಡಾಮರು ರಸ್ತೆ ಮೇಲೆ ಬೀಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಕಳ್ಳತನಕ್ಕೆ ಬಂದೋನು ಹಾಸಿಗೆ ಮೇಲಿದ್ದ ಪತಿ ಪತ್ನಿ ವಿಡಿಯೋ ಮಾಡ್ದ! ವಾಟ್ಸಪ್ ಮೆಸೇಜ್ ನೋಡಿ ದಂಪತಿ ಕಂಗಾಲು!
ಆತನಿಗೆ ಕಾರು ಗುದ್ದಿದ್ದಲ್ಲದೇ ಕೆಳಗೆ ಬಿದ್ದ ಆತನ ಮೇಲೆಯೇ ಕಾರು ಸಾಗಿ ಸ್ವಲ್ಪ ಮುಂದೆ ಹೋಗಿ ನಿಂತಿದೆ. ಆದರೆ ವೀಡಿಯೋ ನೋಡಿದ ನೆಟ್ಟಿಗರು ಹಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕೆಲವರು ಇದು ಕರ್ಮಕ್ಕೆ ತಕ್ಕ ಫಲ ಎಂದರೆ ಮತ್ತೆ ಕೆಲವರು ಡಿಕ್ಕಿ ಹೊಡೆದ ಮೇಲೂ ಕಾರು ಚಾಲಕ ಕಾರು ನಿಲ್ಲಿಸದೇ ಆತನ ಮೇಲೆ ಸಾಗಿ ಹೋಗಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೆ ಕೆಲವರು ಇದು ದೇವರು ತುರ್ತಾಗಿ ನೀಡಿದ ನ್ಯಾಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಏಕೆ ದೇವರು ಬಡವರ ಮೇಲೆ ಮಾತ್ರ ತುರ್ತಾಗಿ ನ್ಯಾಯ ನೀಡುತ್ತಾನೆ. ಶ್ರೀಮಂತರ ಮೇಲೆ ಏಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಮಹಿಳೆಯ ಮೊಬೈಲ್ ಸಿಕ್ತಾ ಎಂದು ಪ್ರಶ್ನೆ ಮಾಡಿದ್ದರೆ, ಮತ್ತೆ ಕೆಲವರು ಈ ಅವಘಡದಲ್ಲಿ ಮೊಬೈಲ್‌ಗೇನಾದರೂ ಹಾನಿಯಾಗಿದೆಯೋ ಎಂದು ಪ್ರಶ್ನೆ ಮಾಡಿದ್ದಾರೆ.
ಅಜ್ಜನ 90 ಲಕ್ಷ ಕದ್ದು, ದೇವರ ಹುಂಡಿಗೆ 1 ಲಕ್ಷ ಹಾಕಿ ಎಂಜಾಯ್ ಮಾಡಲು ಮನಾಲಿಗೆ ಹೋದಳು!