ಚೀನಾದಲ್ಲಿ ಭಯೋತ್ಪಾದಕ ದಾಳಿಗಳು ಬಹಳ ವಿರಳ. ಬಲಿಷ್ಠ ಭದ್ರತಾ ವ್ಯವಸ್ಥೆ, ಕಠಿಣ ಗಡಿ ನಿಯಂತ್ರಣ, ಮತ್ತು ಆರ್ಥಿಕ ಬೆಳವಣಿಗೆಯಿಂದಾಗಿ ಚೀನಾದಲ್ಲಿ ಭಯೋತ್ಪಾದನೆ ಕಡಿಮೆ.
ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯಲ್ಲಿ 26 ಅಮಾಯಕರು ಪ್ರಾಣ ಕಳೆದುಕೊಂಡಿದ್ದು, ಭಾರತೀಯರು ಪ್ರತೀಕಾರಕ್ಕಾಗಿ ಕಾಯುತ್ತಿದ್ದಾರೆ.ಈ ದಾಳಿಯಲ್ಲಿ ನೆರೆಯ ಕುತಂತ್ರಿ ಪಾಕಿಸ್ತಾನದ ಕೈವಾಡವಿರೋದು ಬೆಳಕಿಗೆ ಬಂದಿದ್ದು, ಕೇಂದ್ರ ಸರ್ಕಾರ ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಪಾಕಿಗಳಿಗೆ ಬಿಗ್ ಶಾಕ್ ನೀಡದೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ವಿದೇಶಗಳು ತೀವ್ರವಾಗಿ ಖಂಡಿಸಿವೆ. ಭಾರತದ ನೆರೆಯ ದೇಶವಾದ ಚೀನಾದಲ್ಲಿ ಉಗ್ರರ ದಾಳಿಗಳು ಬಹುತೇಕ ನಗಣ್ಯ. ಚೀನಾದ ಕೆಲವು ವರ್ಷಗಳ ಇತಿಹಾಸ ಗಮನಿಸಿದ್ರೆ, ಇಲ್ಲಿ ಭಯೋತ್ಪಾದಕ ದಾಳಿಗಳು ಅತಿ ವಿರಳವಾಗಿದೆ. ಉಗ್ರರ ನೆಲೆಯಾಗಿರುವ ಪಾಕಿಸ್ತಾನ ದೇಶ ಚೀನಾದೊಂದಿಗೂ ಸಹ ಗಡಿಯನ್ನು ಹಂಚಿಕೊಂಡಿದೆ. ಆದ್ರೂ ಚೀನಾದ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಪಾಕಿಸ್ತಾನ ಧೈರ್ಯ ಮಾಡಲ್ಲ.
ಭಯೋತ್ಪಾದಕರು ಚೀನಾ ದೇಶವನ್ನು ಗುರಿಯಾಗಿ ಮಾಡಿಕೊಳ್ಳದಿರಲು ಹಲವು ಕಾರಣಗಳಿವೆ. ಆ ಕಾರಣಗಳು ಏನು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಚೀನಾ ಮತ್ತು ಪಾಕಿಸ್ತಾನದ ಸ್ನೇಹ
ವಿಶ್ವದಲ್ಲಿ ಎಲ್ಲೇ ಭಯೋತ್ಪಾದಕ ದಾಳಿ ನಡೆದ್ರೂ ಅದರಲ್ಲಿ ಪಾಕಿಸ್ತಾನದ ಪಿತೂರಿ ಕೇಳಿ ಬರುತ್ತದೆ. ಪಾಕಿಸ್ತಾನ ಉಗ್ರರಿಗೆ ಹಣಕಾಸಿನ ನೆರವು ನೀಡೋದನ್ನು ಹಲವು ಬಾರಿ ಬೆಳಕಿಗೆ ಬಂದಿದೆ. ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ಉಗಮ ಸ್ಥಾನವಾಗಿದೆ. ಚೀನಾದ ಮೇಲೆ ಪಾಕಿಸ್ತಾನ ಭಯೋತ್ಪಾದಕ ದಾಳಿ ನಡೆಸದಿರಲು ಈ ದೇಶದ ಜೊತೆಗಿನ ಸ್ನೇಹವಾಗಿದೆ. ರಕ್ಷಣಾ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಚೀನಾದ ಮೇಲೆಯೇ ಪಾಕಿಸ್ತಾನ ಸಂಪೂರ್ಣವಾಗಿ ಅವಲಂಬಿತವಾಗಿದೆ.
ಪಾಕಿಸ್ತಾನಕ್ಕೆ ಚೀನಾ ಅಪಾರ ಪ್ರಮಾಣದ ರಕ್ಷಣಾ ಉಪಕರಣ ಮತ್ತು ಆರ್ಥಿಕ ನೆರವು ನೀಡುತ್ತದೆ. ಹೀಗಾಗಿ ಚೀನಾದ ಗಡಿಯಲ್ಲಿ ಭಯೋತ್ಪಾದಕ ದಾಳಿ ನಡೆಸಿ ತನ್ನ ಕಾಲಿನ ಮೇಲೆ ಕಲ್ಲು ಹಾಕಿಕೊಳ್ಳಲ್ಲ. ಹೀಗಾಗಿ ಚೀನಾದ ಮುಂದೆ ಪಾಕಿಸ್ತಾನ ಬಾಲ ಮುದುರಿಕೊಂಡು ಬಿದ್ದಿರುತ್ತದೆ. ಭಾರತ ಭಯೋತ್ಪಾದನೆ ವಿರುದ್ಧ ಕಠಿಣ ನಿಲುವುಗಳನ್ನು ತೆಗೆದುಕೊಳ್ಳುವ ಕಾರಣ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುತ್ತದೆ.
ಚೀನಾದ ಭದ್ರತಾ ವ್ಯವಸ್ಥೆ
ಚೀನಾದ ಭದ್ರತಾ ವ್ಯವಸ್ಥೆ ಬಲಿಷ್ಠವಾಗಿದ್ದು, ಇಲ್ಲಿನ ಸರ್ಕಾರ ಭಯೋತ್ಪಾದನೆಯ ವಿರುದ್ಧ 'ಶೂನ್ಯ ಸಹಿಷ್ಣುತೆ ನೀತಿ'ಯನ್ನು ಅಳವಡಿಸಿಕೊಂಡಿದೆ. ದೇಶದಲ್ಲಿ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಲು ವಿಶೇಷ ಭದ್ರತಾ ಪಡೆಗಳನ್ನು ಚೀನಾ ಸರ್ಕಾರ ಹೊಂದಿದೆ. ಚೀನಾ ಸರ್ಕಾರ ತನ್ನ ದೇಶವಾಸಿಗಳ ರಕ್ಷಣೆಗಾಗಿ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಹಿನ್ನೆಲೆ ಜನರು ಸರ್ಕಾರದ ಆದೇಶಗಳ ವಿರುದ್ಧ ಮಾತನಾಡಲು ಹೆದರುತ್ತಾರೆ. ಭಯೋತ್ಪಾದನೆ ವಿರುದ್ಧ ಚೀನಾದ ರಕ್ಷಣಾ ವಲಯ ಸದಾ ಜಾಗೃತವಾಗಿರುತ್ತದೆ.
ಇದನ್ನೂ ಓದಿ: ಬೀಸೋ ದೊಣ್ಣೆಯಿಂದ ಪಾರಾಗಲು ಕಳ್ಳಾಟ: ಪಾಕಿಸ್ತಾನ ಹೊಸ ನಾಟಕ
ಗಡಿಯಲ್ಲಿ ತೀವ್ರ ಭದ್ರತೆ
ಭಾರತ ಮತ್ತು ಪಾಕಿಸ್ತಾನದಂತಹ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಭಾರತ ಎಂದಿಗೂ ಭಯೋತ್ಪಾದನೆಯನ್ನು ಎಂದಿಗೂ ಬೆಂಬಲಿಸಲ್ಲ. ಹಾಗಾಗಿ ಭಾರತದ ಗಡಿಯಲ್ಲಿ ಚೀನಾಗೆ ಯಾವುದೇ ಆತಂಕವಿಲ್ಲ. ಇನ್ನು ಭಯೋತ್ಪಾದಕ ಸಂಘಗಳ ತವರೂರು ಆಗಿರುವ ಪಾಕಿಸ್ತಾನಕ್ಕೆ ಒಂದಿಷ್ಟು ಆರ್ಥಿಕ ನೆರವು ನೀಡುವ ಮೂಲಕ ಬಾಲ ಕಟ್ಟಿದೆ. ಚೀನಾದೊಂದಿಗೆ ಸ್ನೇಹದಿಂದಾಗಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಗಡಿಯಲ್ಲಿ ಯಾವುದೇ ಉಗ್ರ ಚಟುವಟಿಕೆಯನ್ನು ನಡೆಸಲ್ಲ. ಇದು ಚೀನಾದಲ್ಲಿ ಭಯೋತ್ಪಾದಕ ಒಳನುಸುಳುವಿಕೆ ಇಲ್ಲದಿರುವುದಕ್ಕೆ ಇದು ಒಂದು ದೊಡ್ಡ ಕಾರಣವಾಗಿದೆ. ಇಷ್ಟು ಮಾತ್ರವಲ್ಲ ಚೀನಾ ತನ್ನ ಗಡಿಯುದ್ದಕ್ಕೂ ಕಟ್ಟುನಿಟ್ಟಿನ ಕಣ್ಗಾವಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚು ಉದ್ಯೋಗವಕಾಶ
ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ರೂ ಕಳೆದ ಕೆಲವು ದಶಕಗಳಲ್ಲಿ ಚೀನಾದ ಆರ್ಥಿಕತೆ ತ್ವರಿತಗತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಜನಸಂಖ್ಯೆ ಹೆಚ್ಚಿದ್ರೂ ಇಲ್ಲಿ ಹೆಚ್ಚು ಉದ್ಯೋಗವಕಾಶಗಳ ಸೃಷ್ಟಿಯಾಗುತ್ತದೆ. ಹಾಗಾಗಿ ಚೀನಾದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಯಾವುದೇ ಬೆಂಬಲ ಸಿಗಲ್ಲ. ಇದರೊಂದಿಗೆ ಚೀನಾ ತನ್ನ ದೇಶದ ಜನತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವದರೊಂದಿಗೆ ಜಾಗೃತಿ ಮೇಲೆಯೂ ಹೆಚ್ಚು ಗಮನ ಹರಿಸುತ್ತದೆ. ಈ ಕಾರಣಗಳಿಂದ ಇಲ್ಲಿನ ಜನರು ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ.
ಇದನ್ನೂ ಓದಿ: ಪಾಕ್‌ನ 10 ದೊಡ್ಡ ದೌರ್ಬಲ್ಯಗಳು ಬಹಿರಂಗ; ಭಾರತ ಎದುರು ಮಂಡಿಯೂರೋದು ಗ್ಯಾರಂಟಿ!
