ಇಲ್ಲಿದೆ 100 ಬೋಗಿಗಳ ವಿಶ್ವದ ಅತಿ ಉದ್ದದ ರೈಲು... ದಾಖಲೆ ಬರೆದ ಸ್ವಿಸ್ ಸಂಸ್ಥೆ
ಜಗತ್ತಿನ ಅತಿ ಉದ್ದದ ಪ್ರಯಾಣಿಕ ರೈಲಿನ ಖ್ಯಾತಿ ಸ್ವಿಜರ್‌ಲೆಂಡಿನ ರೇಟಿಯನ್ ಕಂಪನಿಯ ಮುಡಿಗೇರಿದೆ. ರೇಟಿಯನ್ ಕಂಪನಿಯ ರೈಲು 1.9 ಕಿ.ಮೀ ಉದ್ದವಾಗಿದ್ದು, 100 ಬೋಗಿ, 4,550 ಸೀಟುಗಳನ್ನು ಹೊಂದಿದೆ. ಇದು ಶನಿವಾರ ಯಶಸ್ವಿಯಾಗಿ ಆಲ್‌ಫ ಪರ್ವತ ಶ್ರೇಣಿಯ ಮಾರ್ಗದಲ್ಲಿ ಪ್ರೇಡಾದಿಂದ ಬರ್ಗುಯೆನ್‌ಗೆ ಸಂಚರಿಸಿದ್ದು ವಿಶ್ವದಾಖಲೆ ಎಂದು ಕಂಪನಿ ಹೇಳಿಕೊಂಡಿದೆ.
ಜಿನೇವಾ: ಜಗತ್ತಿನ ಅತಿ ಉದ್ದದ ಪ್ರಯಾಣಿಕ ರೈಲಿನ ಖ್ಯಾತಿ ಸ್ವಿಜರ್‌ಲೆಂಡಿನ ರೇಟಿಯನ್ ಕಂಪನಿಯ ಮುಡಿಗೇರಿದೆ. ರೇಟಿಯನ್ ಕಂಪನಿಯ ರೈಲು 1.9 ಕಿ.ಮೀ ಉದ್ದವಾಗಿದ್ದು, 100 ಬೋಗಿ, 4,550 ಸೀಟುಗಳನ್ನು ಹೊಂದಿದೆ. ಇದು ಶನಿವಾರ ಯಶಸ್ವಿಯಾಗಿ ಆಲ್‌ಫ ಪರ್ವತ ಶ್ರೇಣಿಯ ಮಾರ್ಗದಲ್ಲಿ ಪ್ರೇಡಾದಿಂದ ಬರ್ಗುಯೆನ್‌ಗೆ ಸಂಚರಿಸಿದ್ದು ವಿಶ್ವದಾಖಲೆ ಎಂದು ಕಂಪನಿ ಹೇಳಿಕೊಂಡಿದೆ.
ಈವರೆಗೆ 1.7 ಮೀ. ಉದ್ದದ 70 ಬೋಗಿಗಳಿದ್ದ ಬೆಲ್ಜಿಯಂ (Belziam) ರೈಲು ಅತಿ ಉದ್ದದ ಪ್ರಯಾಣಿಕ ರೈಲು ಎನಿಸಿಕೊಂಡಿತ್ತು. ಈ ದಾಖಲೆಯನ್ನು ಮುರಿದು ಸ್ವಿಜರ್‌ಲೆಂಡ್ (Switzerland) ಹೊಸ ದಾಖಲೆ ಸ್ಥಾಪಿಸಿದೆ. ಅಲ್ಬುಲಾ (Albula) ಅಥವಾ ಬರ್ನಿನಾ (Bernina) ಮಾರ್ಗವಾಗಿ ಸಂಚರಿಸುವ ರೇಟಿಯನ್ ರೈಲು ಈ ಹಿಂದೆ 2008ರಲ್ಲಿ ಯುನೆಸ್ಕೋ (UNESCO) ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿತ್ತು. ಈಗ ಇದು ಸುಮಾರು 25 ಕಿ.ಮೀನಷ್ಟು ಜನಪ್ರಿಯ ಆಲ್‌ಫ ಪರ್ವತದ ಮಾರ್ಗವಾಗಿಯೂ ಸಂಚರಿಸುತ್ತಿದೆ.
ಈಗ ಪ್ರಯಾಣಿಸಿ, ನಂತರ ಪಾವತಿಸಿ;ಟಿಕೆಟ್ ಗೆ ಹಣ ನೀಡದೆ ರೈಲು ಪ್ರಯಾಣ ಸಾಧ್ಯ!
ಈ ರೈಲು 22 ಸುರಂಗಗಳು ಹಾಗೂ 48 ಸೇತುವೆಗಳ ಮೂಲಕ ಸಾಗುತ್ತದೆ. ಇಡೀ ಪ್ರಯಾಣಕ್ಕೆ 1 ಗಂಟೆಯ ಅವಧಿ ತೆಗೆದುಕೊಳ್ಳುತ್ತದೆ. ಸ್ವಿಸ್ ರೇಲ್ವೆ ಕಂಪನಿ 175 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸ್ವಿಜರ್‌ಲೆಂಡಿನ ಎಂಜಿನಿಯರಿಂಗ್ ಸಾಧನೆಯನ್ನು ಪ್ರದರ್ಶಿಸಲು ಈ ರೈಲು ನಿರ್ಮಾಣ ಮಾಡಿದ್ದು, ಹೊಸ ದಾಖಲೆಯಾಗಿದೆ ಎಂದು ರೇಟಿಯನ್ ರೇಲ್ವೆ ನಿರ್ದೇಶಕ ರೆನಾಟೊ ಫಾಸ್ಕೈಟಿ (Renato Fascaiti) ಹೇಳಿದ್ದಾರೆ.
ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ರಿಯಾಯಿತಿ ಟಿಕೆಟ್ ಪುನರ್ ಆರಂಭ!