Asianet Suvarna News Asianet Suvarna News

ಈಗ ಪ್ರಯಾಣಿಸಿ, ನಂತರ ಪಾವತಿಸಿ;ಟಿಕೆಟ್ ಗೆ ಹಣ ನೀಡದೆ ರೈಲು ಪ್ರಯಾಣ ಸಾಧ್ಯ!

*ಕ್ಯಾಷ್ ಇ ಪಾವತಿ ಆಯ್ಕೆ ಬಳಸಿ ಐಆರ್ ಟಿಸಿ ಆ್ಯಪ್ ನಲ್ಲಿ ಟಿಕೆಟ್ ಕಾಯ್ದಿರಿಸಿದ್ರೆ ಮಾತ್ರ ಈ ಸೌಲಭ್ಯ
*ಟಿಕೆಟ್ ಹಣವನ್ನು 3 ಅಥವಾ 6 ತಿಂಗಳ ಅವಧಿಯ ಇಎಂಐ ಮೂಲಕ ಪಾವತಿಸುವ ಅವಕಾಶ
*ಈ ಯೋಜನೆಗೆ ಐಆರ್ ಸಿಟಿಸಿ ಹಾಗೂ ಕ್ಯಾಶ್ ಇ ಸಂಸ್ಥೆ ಸಹಯೋಗ

CASHe partners IRCTC to launch travel now pay later facility
Author
First Published Oct 19, 2022, 12:33 PM IST

ನವದೆಹಲಿ (ಅ.19): ಟಿಕೆಟ್ ಗೆ ಕಾಸಿಲ್ಲದಿದ್ದರೂ ರೈಲಿನಲ್ಲಿ ಪ್ರಯಾಣಿಸುವ ಅವಕಾಶವನ್ನು ರೈಲ್ವೆ ಇಲಾಖೆ ನೀಡಿದೆ. ಆದರೆ, ನೀವು ಕ್ಯಾಷ್ ಇ ಪಾವತಿ ಆಯ್ಕೆ ಬಳಸಿ ಐಆರ್ ಟಿಸಿ ಆ್ಯಪ್ ನಲ್ಲಿ ಟಿಕೆಟ್ ಕಾಯ್ದಿರಿಸಬೇಕು, ಆದರೆ ಹಣವನ್ನು ಆಗಲೇ ಪಾವತಿಸಬೇಕಿಲ್ಲ, ಬದಲಿಗೆ ನಂತರ ಇಎಂಐ ಮೂಲಕ ಪಾವತಿ ಮಾಡಬಹುದು. 'ಈಗ ಪ್ರಯಾಣಿಸಿ, ಆಮೇಲೆ ಪಾವತಿಸಿ' (ಟ್ರಾವೆಲ್ ನೌ, ಪೇ ಲೇಟರ್/ಟಿಎನ್ ಪಿಎಲ್) ಎಂಬ ಈ ಹೊಸ ಯೋಜನೆಯನ್ನು ಭಾರತೀಯ ರೈಲ್ವೆ ಇಲಾಖೆಯ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮವು (ಐಆರ್ ಸಿಟಿಸಿ) ಹಣಕಾಸು ಸೇವೆಗಳನ್ನು ಒದಗಿಸುವ ಕ್ಯಾಶ್ ಇ ಸಂಸ್ಥೆ ಸಹಯೋಗದಲ್ಲಿ ಪರಿಚಯಿಸಿದೆ. ಈ ಸೇವೆಯು ರೈಲ್ವೆ ಇಲಾಖೆಯ ಐಆರ್ ಸಿಟಿಸಿ ಟ್ರಾವೆಲ್ ಆ್ಯಪ್ ನಲ್ಲಿ ಕ್ಯಾಶ್ ಇ ಪಾವತಿ ಆಯ್ಕೆ ಮೂಲಕ ಟಿಕೆಟ್ ಬುಕ್ ಮಾಡಿ ಹಣವನ್ನು 3 ಅಥವಾ 6 ತಿಂಗಳ ಅವಧಿಯ ತನಕದ ಇಎಂಐ ಮೂಲಕ ಪಾವತಿಸುವ ಅವಕಾಶವನ್ನು ಕಲ್ಪಿಸಿದೆ. ಇಎಂಐ ಪಾವತಿ ಆಯ್ಕೆಯು ಐಆರ್ ಸಿಟಿಸಿ ಟ್ರಾವೆಲ್  ಆ್ಯಪ್ ನಲ್ಲಿ ಕಾಯ್ದಿರಿಸಿದ ಹಾಗೂ ತತ್ಕಾಲ ಟಿಕೆಟ್ ಗಳ ಬುಕ್ಕಿಂಗ್ ಗೆ ಇರುವ ಚೆಕ್ ಔಟ್ ಪುಟದಲ್ಲಿದೆ.  

ಕ್ಯಾಶ್ ಇಯ (CASHe) ಟಿಎನ್ ಪಿಎಲ್ ಇಎಂಐ (EMI) ಪಾವತಿ ಆಯ್ಕೆ ಈ ಸೌಲಭ್ಯವನ್ನು ಯಾವುದೇ ದಾಖಲೆಗಳ ಅಗತ್ಯವಿಲ್ಲದೆ ಎಲ್ಲ ಬಳಕೆದಾರರು ಬಳಸಲು ಅನುವು ನೀಡಿದೆ. ಹೀಗಾಗಿ ಕ್ಯಾಶ್ ಇ ಟಿಎನ್ ಪಿಎಲ್ ಇಎಂಐ ಆಯ್ಕೆಯನ್ನು ಪ್ರಯಾಣಿಕರು ಸುಲಭವಾಗಿ ಬಳಸಿಕೊಳ್ಳಬಹುದು. ಐಆರ್ ಟಿಸಿ ಆ್ಯಪ್ 9 ಕೋಟಿ ಬಾರಿ ಡೌನ್ ಲೋಡ್ ಆಗಿದೆ. ಇದರ ಮೂಲಕ ಪ್ರತಿ ದಿನ 15 ಲಕ್ಷ ರೈಲ್ವೆ ಟಿಕೆಟ್ ಗಳನ್ನು ಕಾಯ್ದಿರಿಸಲಾಗುತ್ತಿದೆ. 

ಬೆಳಕಿನ ಹಬ್ಬಕ್ಕೆ ಎಲ್ಐಸಿಯ ಹೊಸ ಪಾಲಿಸಿ; ಸುರಕ್ಷತೆಯ ಜೊತೆಗೆ ಉಳಿತಾಯಕ್ಕೆ ಧನ್ ವರ್ಷ

'ಐಆರ್ ಸಿಟಿಸಿ ನೆರವಿನಿಂದ ಇದು ಭಾರತದ ಅತೀದೊಡ್ಡ ಈಗ ಪ್ರಯಾಣಿಸಿ ನಂತರ ಪಾವತಿಸಿ ಎಂಬ ಇಎಂಐ ಪಾವತಿ ವ್ಯವಸ್ಥೆಯಾಗಿದೆ. ಐಆರ್ ಸಿಟಿಸಿ ಜೊತೆಗಿನ ನಮ್ಮ ಸಹಯೋಗ ದೇಶದಲ್ಲಿ ಡಿಜಿಟಲ್ ಇಎಂಐ ಪಾವತಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆಯಾಗಿದೆ. ಈ ಸಹಭಾಗಿತ್ವವು ಕ್ಯಾಶ್ ಇಗೆ ಐಆರ್ ಸಿಟಿಸಿಯ ಲಕ್ಷಾಂತರ ಗ್ರಾಹಕರನ್ನು ತಲುಪಲು ಹಾಗೂ ಅವರಿಗೆ ಈ ಹಿಂದೆ ಎಂದೂ ಸಿಗದ ಹಾಗೂ ಈಗ ಆರಾಮದಾಯಕವಾಗಿ ಪ್ರಯಾಣಿಸಿ ನಂತರ ಅವರ ರೈಲ್ವೆ ಟಿಕೆಟ್ ಗೆ ಇಎಂಐ ಮುಖಾಂತರ ಹಣ ಪಾವತಿಸುವ ಅವಕಾಶ ಕಲ್ಪಿಸಿದೆ' ಎಂದು ಕ್ಯಾಶ್ ಇ ಸಂಸ್ಥಾಪಕ ಅಧ್ಯಕ್ಷ ವಿ.ರಮಣ್ ಕುಮಾರ್ ತಿಳಿಸಿದ್ದಾರೆ.

ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಲು ಬಯಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಆರ್ ಬಿಐ ಹೊಸ ಗೈಡ್ ಲೈನ್ಸ್

ಕ್ಯಾಶ್ ಇ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಈಗ ಟಿಕೆಟ್ ಖರೀದಿಸಿ ನಂತರ ಪಾವತಿ ಮಾಡುವ ಆಯ್ಕೆ ನೀಡಿದ್ರೆ ಮೋಸ ಹೋಗುವ ಸಾಧ್ಯತೆ ಇಲ್ವಾ? ಎಂಬ ಪ್ರಶ್ನೆಯೂ ಮೂಡಬಹುದು. ಕ್ಯಾಶ್ ಇ ಕೃತಕ ಬುದ್ಧಿಮತ್ತೆ (AI) ಆಧಾರಿತ ಅಲ್ಗೊರಿಥಮ್ ಪ್ಲ್ಯಾಟ್ ಫಾರ್ಮ್ ನಲ್ಲಿ (algorithm platform) ಸೋಷಿಯಲ್ ಲೋನ್ ಕೋಟಿಂಟ್  (SLQ) ಮೂಲಕ ಕಾರ್ಯನಿರ್ವಹಿಸುತ್ತದೆ. ಈ SLQ ಸಾಲಗಾರನ ( borrower) ಪಾವತಿ (Payment) ಸಾಮರ್ಥ್ಯವನ್ನು ಆತನ ಸೋಷಿಯಲ್ ಮೀಡಿಯಾ (Social media) ಹಾಗೂ ಮೊಬೈಲ್ ದತ್ತಾಂಶಗಳ ಆಧಾರದಲ್ಲಿ ಗ್ರಹಿಸುತ್ತದೆ. ಆ ಬಳಿಕ ಆತ ಇಎಂಐ (EMI) ಸೌಲಭ್ಯ ಪಡೆಲು ಅರ್ಹ ಹೌದು, ಅಲ್ಲ ಎಂಬುದನ್ನು ನಿರ್ಧರಿಸುತ್ತದೆ. ಇಎಂಐ ಮೂಲಕ ರೈಲ್ವೆ ಟಿಕೆಟ್ ಹಣ ಪಾವತಿಸುವ ವ್ಯವಸ್ಥೆ ತುರ್ತು ಸಂದರ್ಭದಲ್ಲಿ ಅನೇಕ ರೈಲ್ವೆ ಪ್ರಯಾಣಿಕರಿಗೆ ನೆರವಾಗೋದರಲ್ಲಿ ಸಂಶಯವಿಲ್ಲ. 

Follow Us:
Download App:
  • android
  • ios