ಮುಂದಿನ ವರ್ಷದ ವರ್ಷಾಂತ್ಯಂಕ್ಕೆ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ರಿಪಬ್ಲಿಕನ್‌ ಪಕ್ಷದ ಟಿಕೆಟ್‌ ಆಕಾಂಕ್ಷಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಕೊಲರಾಡೋದ ಸುಪ್ರೀಂಕೋರ್ಟ್‌ ನಿರ್ಬಂಧಿಸಿದೆ.

ವಾಷಿಂಗ್ಟನ್‌: ಮುಂದಿನ ವರ್ಷದ ವರ್ಷಾಂತ್ಯಂಕ್ಕೆ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ರಿಪಬ್ಲಿಕನ್‌ ಪಕ್ಷದ ಟಿಕೆಟ್‌ ಆಕಾಂಕ್ಷಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಕೊಲರಾಡೋದ ಸುಪ್ರೀಂಕೋರ್ಟ್‌ ನಿರ್ಬಂಧಿಸಿದೆ.

2021ರಲ್ಲಿ ಅಮೆರಿಕದ ಸಂಸತ್‌ ಭವನದ ಮೇಲೆ ನಡೆದ ದಾಳಿಗೆ ತಮ್ಮ ಬೆಂಬಲಿಗರಿಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಟ್ರಂಪ್‌ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ ಕೋರ್ಟ್‌ ಈ ಆದೇಶ ಹೊರಡಿಸಿದೆ. ಅಮೆರಿಕದ ಇತಿಹಾಸದಲ್ಲೇ ಅಭ್ಯರ್ಥಿಯೊಬ್ಬರನ್ನು ಸಂವಿಧಾನದ ವಿಶೇಷ ಕಾಯ್ದೆಯ ಅನ್ವಯ ಈ ರೀತಿ ನಿಷೇಧಿಸಿದ್ದು ಇದೇ ಮೊದಲು. ಈ ನಡುವೆ ಕೊಲರಾಡೋ ಸುಪ್ರೀಂಕೋರ್ಟ್‌ ಆದೇಶವನ್ನು ದೋಷಪೂರಿತ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂದು ಬಣ್ಣಿಸಿರುವ ಟ್ರಂಪ್‌ ಅವರ ತಂಡ, ಈ ಆದೇಶವನ್ನು ಅಮೆರಿಕ ದೇಶದ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದೆ.

ರಹಸ್ಯ ದಾಖಲೆ ‘ಕದ್ದೊಯ್ದ’ ಕೇಸಲ್ಲಿ ಟ್ರಂಪ್‌ ವಿರುದ್ಧ ದೋಷಾರೋಪ: ಅಧ್ಯಕ್ಷರಾಗಿದ್ದೋರ ಮೇಲೆ ಮೊದಲ ಬಾರಿ ಕ್ರಿಮಿನಲ್‌ ಆರೋಪ

ಏನಿದು ಪ್ರಕರಣ?:

2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ವಿರುದ್ಧ ಟ್ರಂಪ್‌ ಸೋತಿದ್ದರು. ಈ ವೇಳೆ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಟ್ರಂಪ್ ಆರೋಪಿಸಿದ್ದರು. ಅದಾದ 2 ತಿಂಗಳ ಬಳಿಕ ಅಂದರೆ 2021ರ ಜ.6ರಂದು ಟ್ರಂಪ್‌ರ ಸಾವಿರಾರು ಬೆಂಬಲಿಗರು ಸಂಸತ್‌ ಮೇಲೆ ದಾಳಿ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ದಾಳಿಗೆ ಪ್ರಚೋದನೆ ನೀಡಿದ ಕಾರಣ ಟ್ರಂಪ್‌ ಅವರಿಗೆ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಪ್ರೈಮರಿ (ಅಂತಿಮ ಅಭ್ಯರ್ಥಿ ಆಯ್ಕೆ)ಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಕೊಲರಾಡೋ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ಟ್ರಂಪ್‌ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್‌ ಅಲ್ಲಿನ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಇದೀಗ ಅವರಿಗೂ ಅಲ್ಲಿಯೂ ಸೋಲಾಗಿದೆ.

ಬೆಳದಿಂಗಳ ಬಾಲೆಯರ ಜೊತೆ ಸೆಕ್ಸ್‌, ಟ್ರಂಪ್‌ ರಾಜಕೀಯ ಜೀವನವೀಗ ರಿಸ್ಕ್‌!

ಹಾಲಿ ರಿಪಬ್ಲಿಕನ್‌ ಪಕ್ಷದಿಂದ ಟ್ರಂಪ್‌ ಮುಂಚೂಣಿ ಅಭ್ಯರ್ಥಿಯಾಗಿದ್ದರು. ಒಂದು ವೇಳೆ ಟ್ರಂಪ್‌ಗೆ ಸ್ಪರ್ಧೆ ಅವಕಾಶ ಸಿಗದೇ ಇದ್ದಲ್ಲಿ ಅಭ್ಯರ್ಥಿಯಾಗುವ ಅವಕಾಶ ಭಾರತೀಯ ಮೂಲದ ವಿವೇಕ್‌ ರಾಮಸ್ವಾಮಿ, ನಿಕ್ಕಿ ಹ್ಯಾಲೆ ಪಾಲಾಗುವ ಸಾಧ್ಯತೆಯೂ ಇದೆ.