Asianet Suvarna News

79 ವರ್ಷದ ತಾಯಿಯ ಜೀವಂತ ಸಮಾಧಿ, 3 ದಿನದ ಬಳಿಕ ಘೋರಿ ಅಗೆದಾಗ ಪೊಲೀಸರಿಗೆ ಶಾಕ್!

ಮಕ್ಕಳು ದೊಡ್ಡವರಾದ ಮೇಲೆ ವಯಸ್ಸಾದ ಪೋಷಕರನ್ನು ಕೆಲವರು ವೃದ್ಧಾಶ್ರಮದಲ್ಲಿ ಬಿಡುವುದನ್ನು ಕೇಳಿದ್ದೇವೆ. ಇಲ್ಲೊಬ್ಬ ಅನಾರೋಗ್ಯದ ತಾಯಿಯನ್ನು ಜೀವಂತ ಸಮಾಧಿ ಮಾಡಿದ್ದಾನೆ. ಸೊಸೆ ನೀಡಿದ ದೂರಿ ಮೇರೆ ಪೊಲೀಸರು 3 ದಿನದ ಬಳಿಕ ಸಮಾಧಿ ಆಗೆದಾಗ 79 ವರ್ಷದ ತಾಯಿ ಜೀವಂತವಾಗಿ ಹೊರಬಂದಿದ್ದಾರೆ. ಈ ರೋಚಕ ಘಟನೆ ವಿವರ ಇಲ್ಲಿದೆ. 

The son who buried his mother alive saved after 3 days in grave in china
Author
Bengaluru, First Published May 9, 2020, 9:51 PM IST
  • Facebook
  • Twitter
  • Whatsapp

ಚೀನಾ(ಮೇ.09): ಜೀವಂತ ಸಮಾಧಿ ಮಾಡಿದರೆ ಕೆಲವೇ ಕೆಲವು ಗಂಟೆಗಳು ಮಾತ್ರ ಬದುಕಲು ಸಾಧ್ಯ ಎನ್ನುವುದು ವಿಜ್ಞಾನದ ತರ್ಕ. ಆದರೆ ಚೀನಾದ ಅಜ್ಜಿಯೊಬ್ಬಳು ಜೀವಂತ ಸಮಾಧಿಯಾದ ಬರೋಬ್ಬರಿ 3 ದಿನಗಳ ಬಳಿಕವೂ ಬದುಕಿ ಬಂದ ಘಟನೆ ಚೀನಾದಲ್ಲಿ ನಡೆದಿದೆ. ಈ ಘಟನೆ ಅಚ್ಚರಿಯಾಗುವುದು  ನಿಜ. ಇದರ ಹಿಂದೆ ಮನಕಲುಕುವ ಕತೆಯಿದೆ.

ಸತ್ತ ಮಗ ಬದುಕಿ ಬರುತ್ತಾನೆಂದು 38 ದಿನ ಸ್ಮಶಾನದಲ್ಲೇ ಕಳೆದ ತಂದೆ!

ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಮಗ ಮೇ 2ರಂದು ವ್ಹಿಲ್‌ ಚೇರ್‌ನಲ್ಲಿ ಹೊರಗೆ ಕರೆದುಕೊಂಡು ಹೋಗಿ, ಜೀವಂತ ಸಮಾಧಿ ಮಾಡಿದ್ದ. ಮೂರು ದಿನವಾದರೂ ಅತ್ತೆ ಮನೆಗೆ ಮರಳದೇ ಇದ್ದಿದ್ದನ್ನು ಗಮನಿಸಿದ ಸೊಸೆ ಪೊಲೀಸರಿಗೆ ದೂರು ನೀಡಿದ್ದಳು. ದೂರಿನಲ್ಲಿ ತನ್ನ ಗಂಡೆ ಸೊಸೆಯನ್ನು ಹೊರಗಡೆ ಕೆರೆದುಕೊಂಡು ಹೋಗಿದ್ದು, ಮನೆಗೆ ಮರಳಿಲ್ಲ ಎಂದು ಉಲ್ಲೇಖಿಸಿದ್ದರು.

ಪೊಲೀಸರು ನೇರವಾಗಿ 58 ವರ್ಷದ ಮಗನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈತ ಪಾರ್ಶ್ವವಾಯು ಹಾಗೂ ಇತರ ಕೆಲ ಖಾಯಿಲೆಯಿಂದ ಬಳಲುತ್ತಿರುವ ತಾಯಿಯನ್ನು ಆರೈಕೆ ಮಾಡಿ ತಾಳ್ಮೆ ಕಳೆದುಕೊಂಡಿದ್ದೆ. ಹೀಗಾಗಿ ವೀಲ್ಹ್ ಚೇರ್‌ನಲ್ಲಿ ಕರೆದುಕೊಂಡು ಹೋಗಿ ಜೀವಂತ ಸಮಾದಿ ಮಾಡಿರುವುದಾಗಿ ಹೇಳಿದ್ದಾನೆ. 

ಹೂತಿಟ್ಟ ಮಹಿಳೆ ಶವ ಒಂದು ದಿನದ ನಂತರ ಹೊರತೆಗೆದು ರೇಪ್!...

ತಕ್ಷಣವೇ ಪೊಲೀಸರು ಪೊಲೀಸರು ಸಮಾಧಿ ಅಗೆದಿದ್ದಾರೆ. ಈ ವೇಳೆ ಪೊಲೀಸರಿಗೆ ಅಚ್ಚರಿಯಾಗಿದೆ. 3 ದಿನದ ಬಳಿಕ ಸಮಾಧಿ ಅಗೆದಾದ 79 ವರ್ಷದ ತಾಯಿ ಜೀವಂತವಾಗಿದ್ದರು. ತಕ್ಷಣವೇ ಅಜ್ಜಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಮಗನ ಮೇಲೆ ಕೊಲೆ ಯತ್ನ ಸೇರಿದಂತೆ ಹಲವು ಕೇಸ್ ದಾಖಲಿಸಿ ವಿಚಾರಣೆ ಪೊಲೀಸರು ನಡಸುತ್ತಿದ್ದಾರೆ.  

ಸಮಾಧಿ ಮಾಡುವ ವೇಳೆ ತಾಯಿ ಸಹಾಯಕ್ಕಾಗಿ ಕೂಗಿದ್ದಾಳೆ. ಆದರೆ ಆ ಪ್ರದೇಶದಲ್ಲಿ ಯಾರು ಇರಲಿಲ್ಲ. ಇತ್ತ ಮಗನಲ್ಲಿ ಬೇಡಿಕೊಂಡಿದ್ದಾಳೆ. ಆದರೆ ಮಗ ತಾಯಿ ಸತ್ತುಹೋಗಿರುವ ರೀತಿ ನಟಿಸಿ ಸಮಾಧಿ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹೆಚ್ಚಿನ ವಿವರ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
 

Follow Us:
Download App:
  • android
  • ios