ಕರಾಚಿ[ನ. 07] ಈ ಪ್ರಪಂದಲ್ಲಿ ಎಂತೆಂಥ ವಿಕೃತಗಳನ್ನು ಕಾಣಬೇಕೋ ಗೊತ್ತಿಲ್ಲ. ಪಾಕಿಸ್ತಾನದ ಈ ಘಟನೆ ನಿಜಕ್ಕೂ ಮಾನವ ಕುಲಕ್ಕೆ ಕಳಂಕ.

ಸತ್ತ ಮಹಿಳೆಯನ್ನು ಹೂತ ಜಾಗದಿಂದ ಹೊರತೆಗೆದು ಹೆಣದ ಮೇಲೆ ಅತ್ಯಾಚಾರ ಎಸಗಲಾಗಿದೆ. ಅಪರಿಚಿತ ವ್ಯಕ್ತಿ ಈ ಕೆಲಸ ಮಾಡಿದ್ದು ಕರಾಚಿಯ ಲಂಧಿ ಪಟ್ಟನದಲ್ಲಿ ಘಟನೆ ನಡೆದಿದೆ.

ಶನಿವಾರ ರಾತ್ರಿ ಮಹಿಳೆಯ ಅಂತ್ಯಕ್ರಿಯೆ ನೆರವೇದಿಸಲಾಗಿತ್ತು. ಪೊಲೀಸರು ಅಂತ್ಯಕ್ರಿಯೆಯಲ್ಲಿ ಯಾರೆಲ್ಲ ಭಾಗವಹಿಸಿದ್ದರು. ಅವರಲ್ಲಿ ಯಾರೋ ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ರೇಪ್ ಆರೋಪಿ ಹರ್ಯಾಣ ರಾಜಕಾರಣದ ಕಿಂಗ್ ಮೇಕರ್!

ಒಂದು ದಿನದ ನಂತರ ಹೂತಿಟ್ಟ ಮಹಿಳೆಯ ಶವ ಹೊರಕ್ಕೆ ತೆಗೆಯಲಾಗಿದೆ. ಶ್ವಾನವೊಂದು ಹೆಣ ಹೂತ ಜಾಗದ ಸುತ್ತಲೂ ಓಡಾಡುತ್ತಿರುವುದನ್ನು ಗಮನಿಸಿ ಸ್ಮಶಾನದ ಸೆಕ್ಯೂರಿಟಿಗೆ ಅನುಮಾನ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ದೇಹ ಸಹ ಸಮಾಧಿಯಿಂದ ಹೊರಗೆ ತೆಗೆದು ಹಾಕಿದ್ದು ಗೊತ್ತಾಗಿದ್ದು ಕುಟುಂಬಕ್ಕೂ ಮಾಹಿತಿ ನೀಡಲಾಗಿದೆ.

ನಾಯಿಯಿಂದ ಸಮಾಧಿಗೆ ಮುಚ್ಚಿದ್ದ ಕಲ್ಲು ಸರಿಸಲು ಸಾಧ್ಯವಾಗುವುದಿಲ್ಲ. ಅದರ ತೂಕ ಇನ್ನು ಜಾಸ್ತಿ ಇದೆ. ಇದು ಮಾನವರಿಂದಲೇ ಆಗಿರುವ ಕೆಲಸ ಎಂದು ಕುಟುಂಬದವರು ಹೇಳಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.