ಜಾದೂವನ್ನು ದಿನಸಿ ಅಂಗಡಿಯಲ್ಲೋ ತರಕಾರಿ ಅಂಗಡಿಯಲ್ಲೋ ಪ್ರದರ್ಶನ ಮಾಡಿದ್ರೆ ಹೇಗಿರುತ್ತೆ? ಹೇಗಿರುತ್ತೆ ಎಂಬುದನ್ನು ಓರ್ವ ತರುಣ ಜಾದೂಗಾರ ತೋರಿಸಿ ಕೊಟ್ಟಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮ್ಯಾಜಿಕ್ ಬಹಳ ಪುರಾತನವಾದ ಮಾಯಜಾಲ ನಮ್ಮ ಕಣ್ಣನ್ನೇ ನಂಬದಂತೆ ಮಾಡುವಷ್ಟು ಅಚ್ಚರಿ ನೀಡುವ ಈ ಜಾದೂ ನೋಡುತ್ತಿದ್ದರೆ ಕಣ್ಣಿಗೆ ಹಬ್ಬ. ದೇಹವನ್ನೇ ಕತ್ತರಿಸಿ ಮರು ಜೋಡಿಸುವ, ಕುಳಿತಲ್ಲಿಂದಲೇ ವ್ಯಕ್ತಿಯನ್ನು ಮಾಯ ಮಾಡುವ, ಎಲ್ಲೋ ನಾಪತ್ತೆಯಾದವನ ಇನ್ನೆಲ್ಲೋ ತಂದು ನಿಲ್ಲಿಸುವಂತಹ ಈ ಜಾದೂ ರೋಚಕತೆ ಜೊತೆ ದಿಗ್ಭ್ರಮೆಯನ್ನು ಮೂಡಿಸುತ್ತಿದೆ. ಇಂತಹ ಜಾದೂವನ್ನು ದಿನಸಿ ಅಂಗಡಿಯಲ್ಲೋ ತರಕಾರಿ ಅಂಗಡಿಯಲ್ಲೋ ಪ್ರದರ್ಶನ ಮಾಡಿದ್ರೆ ಹೇಗಿರುತ್ತೆ? ಹೇಗಿರುತ್ತೆ ಎಂಬುದನ್ನು ಓರ್ವ ತರುಣ ಜಾದೂಗಾರ ತೋರಿಸಿ ಕೊಟ್ಟಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೀವು ಶಾಲಾ ಕಾಲೇಜುಗಳಲ್ಲಿ, ಜಾತ್ರೆಗಳಲ್ಲಿ 20 ರೂಪಾಯಿಯೋ 50 ರೂಪಾಯಿಯೋ ಹಣ ನೀಡಿ ಜಾದೂಗಾರನ ಮೋಡಿಗೆ ಒಳಗಾಗಿರಬಹುದು. ಅಲ್ಲಿ ಜಾದೂಗಾರ ಹೂವನ್ನು ಹಾರುವ ಚಿಟ್ಟೆಯಾಗಿಸುತ್ತಾನೆ. ಮೊಟ್ಟೆ ಇದ್ದಲ್ಲಿ ಟೊಮೆಟೋ ಬರುತ್ತದೆ. ಒಂದು ಲೋಟದಲ್ಲಿದ್ದ ಜ್ಯೂಸ್ ಎರಡು ಲೋಟವಾಗುತ್ತದೆ. ಸಣ್ಣ ಪೇಪರ್ ತುಂಡೊಂದದು ಹಾರುವ ಪರಿವಾಳವಾಗುತ್ತದೆ. ಹೀಗೆ ಜಾದೂಗಾರನ ಮೋಡಿ ಅಮೋಘವಾದುದು ಹಾಗೆಯೇ ಇಲ್ಲೊಬ್ಬ ತರಕಾರಿ ಮಾರ್ಟ್‌ನಲ್ಲಿ ನಿಂಬೆಹಣ್ಣೊಂದನ್ನು ಹಾರುವಂತೆ ಮಾಡಿದ್ದಾನೆ. ಇದನ್ನು ನೋಡಿದ ಅಲ್ಲಿದ್ದ ದಂಪತಿ ಈತನ ಮಾಯಾಜಾಲಕ್ಕೆ ಬೆರಗಾಗಿದ್ದಾರೆ.
Suhani Shah: ಜನರ ಮನಸ್ಸಲ್ಲೇನಿದೆ ಅಂತ ಥಟ್ ಅಂತ ಹೇಳುವ ಈಕೆ ಯಾರು ಗೊತ್ತಾ?
ಸ್ವತಃ ಜಾದೂಗಾರನಾಗಿರುವ xaviermortimer (Xavier Mortimer) ಎಂಬುವವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ವೀಡಿಯೋದಲ್ಲಿ ಆತ ತರಕಾರಿ ತೆಗೆದುಕೊಳ್ಳುತ್ತಿದ್ದ ದಂಪತಿಯ ಬಳಿ ಬಂದು ನಿಂಬೆಹುಳಿಯೊಂದನ್ನು ತೆಗೆದುಕೊಂಡು ಮಂತ್ರಿಸಿದಂತೆ ಮಾಡಿದ್ದು, ಇದಾಗಿ ಸ್ವಲ್ಪ ಹೊತ್ತಿನಲ್ಲಿ ಆತ ನಿಂಬೆಹಣ್ಣು ಗಾಳಿಯಲ್ಲಿ ವೇಗವಾಗಿ ಹಾರಾಡಲು ಆರಂಭಿಸಿದೆ. ಬೆಲೂನ್‌ನಂತೆ ಅದು ಮೇಲೆ ಮೇಲೆ ಹಾರುತ್ತಲೇ ಇದ್ದು, ಇದನ್ನು ನೋಡಿದ ದಂಪತಿ ಬೆರಗಾಗಿ ಆತನನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ.
ಮೊದಲಿಗೆ ನಿಂಬೆಹಣ್ಣನ್ನು ಕವರಿಗೆ ಹಾಕಿದ ಆತ ನಂತರ ಕವರನ್ನು ಉಲ್ಟಾ ಹಿಡಿದಿದ್ದಾನೆ. ನಂತರ ಕೈ ಬಿಟ್ಟಿದ್ದು, ಕವರ್‌ನ ಸಮೇತ ನಿಂಬೆಹಣ್ಣು ಗಾಳಿಯಲ್ಲಿ ಹಾರಲು ಆರಂಭಿಸಿದೆ. ನಂತರ ಅಲ್ಲೆ ಇದ್ದ ಗಾಜಿನ ಡಬ್ಬಿಯೊಳಗೆ ನಿಂಬೆಹಣ್ಣನ್ನು ಜಾದುಗಾರ ಹಾಕಿದ್ದು, ಇದನ್ನು ಅದರಲ್ಲೂ ಅದು ಕೆಳಗೆ ಬೀಳದೇ ಮುಚ್ಚಳ ತೆಗೆಯಲು ಕಾಯುತ್ತಿರುವಂತೆ ಮೇಲೆ ನಿಂತಿದೆ. ನಂತರ ಆತ ಸಣ್ಣ ಕ್ಯಾರಿಯರ್ ತೆಗೆದುಕೊಂಡು ನಿಂಬೆಹುಳಿಯನ್ನು ಅದಕ್ಕೆ ಹಾಕಿಕೊಂಡು ಮುಂದೆ ಹೋಗಿದ್ದಾನೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, 7 ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಮಕ್ಕಳು ಹೋಗೋಕು ಹೆದರುತ್ತಿದ್ದ 'ಭೂತ ಬಂಗಲೆ'ಯಲ್ಲಿ ವಾಸವಿದ್ದ ಖ್ಯಾತ ಜಾದೂಗಾರ ಓಪಿ ಶರ್ಮ ನಿಧನ!
ಅನೇಕರು ಆತ ಮನುಷ್ಯನಲ್ಲ, ಆತ ಆತ್ಮವನ್ನು ದೆವ್ವಕ್ಕೆ ಮಾರಿಕೊಂಡಿದ್ದಾನೆ ಎಂದು ಈ ವಿಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಜೀವನ ನಿಮಗೆ ಲೆಮನ್ ನೀಡಿದರೆ ಅದರಲ್ಲಿ ಅಬ್ರಕಡಬ್ರ ಮಾಡಿ ಎಂದು ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ.
