100 ಮೀಟರ್ ಓಟದಲ್ಲಿ ದಾಖಲೆ ಬರೆದ ಥೈಲ್ಯಾಂಡ್ ಶತಾಯುಷಿ ಕೇವಲ 27.08 ಸೆಕೆಂಡುಗಳಲ್ಲಿ 100 ಮೀಟರ್ ಕ್ರಮಿಸಿದ ಹಿರಿಯಜ್ಜ ಥಾಯ್ಲೆಂಡ್ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆ
ಥಾಯ್ಲೆಂಡ್‌ನ 102 ವರ್ಷದ ವ್ಯಕ್ತಿಯೊಬ್ಬರು ಶತಾಯುಷಿಗಳ(centenarian) 100 ಮೀಟರ್ ಓಟವನ್ನು 27.08 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಥಾಯ್ಲೆಂಡ್‌ನ ಹಾಗೂ ಆಗ್ನೇಯ ಏಷ್ಯಾದ ದೇಶದ ಅತ್ಯಂತ ಹಿರಿಯ ಓಟಗಾರ ಎಂದು ಹೆಸರುವಾಸಿಯಾಗಿರುವ ಸಾವಾಂಗ್ ಜನಪ್ರಮ್ (Sawang Janpram) ಅವರು ಫೆಬ್ರವರಿ ಕೊನೆಯ ವಾರಾಂತ್ಯದಲ್ಲಿ ನೈಋತ್ಯ ಸಮುತ್ ಸಾಂಗ್‌ಖ್ರಾಮ್ ಪ್ರಾಂತ್ಯದಲ್ಲಿ(Samut Songkhram province) ನಡೆದ 26ನೇ ಥಾಯ್ಲೆಂಡ್ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (Thailand Master Athletics Championship) 100-105 ವರ್ಷಗಳ ವಿಭಾಗದಲ್ಲಿ ನಡೆದ ಸ್ಪರ್ಧೆಗಳಲ್ಲಿ ಎಲ್ಲಾ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ಶತಾಯುಷಿಗಳ 100 ಮೀಟರ್ ಓಟದಲ್ಲಿ ಕೇವಲ 27.08 ಸೆಕೆಂಡುಗಳಲ್ಲಿ ಓಟವನ್ನು ಮುಗಿಸುವ ಮೂಲಕ ಹೊಸ ದಾಖಲೆಯನ್ನು (Record) ನಿರ್ಮಿಸಿದ್ದು ಅವರ ಅತ್ಯಂತ ಗಮನಾರ್ಹ ಸಾಧನೆಯಾಗಿದೆ.
ತನ್ನ ವಯಸ್ಸಿನ ಅಂದರೆ ನೂರು ದಾಟಿದ ಶ್ರೇಣಿಯ ಎಲ್ಲಾ ಇತರ ಸ್ಪರ್ಧಿಗಳಿಗಿಂತ ಹೆಚ್ಚು ವಯಸ್ಸಿನವರಾದ ಇವರು ಶತಾಯುಷಿಗಳ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಅತ್ಯಂತ ಹಿರಿಯ ಶತಾಯುಷಿ ಆಗಿದ್ದಾರೆ. ಇವರ ಈ ಸಾಧನೆ ಎಲ್ಲರನ್ನು ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿದೆ. ಅವರ ಮಾಮೂಲಿ ದಿನಚರಿಯಂತೆ ಅವರು ತಮ್ಮ 70 ವರ್ಷದ ಮಗಳೊಂದಿಗೆ ವಾಕಿಂಗ್ ಹೋಗುವುದು ಮತ್ತು ಅವರ ಹಿತ್ತಲಿನಲ್ಲಿ ಬಿದ್ದ ಎಲೆಗಳನ್ನು ತೆರವುಗೊಳಿಸುವುದು ಮುಂತಾದ ಕೆಲಸಗಳನ್ನು ಮಾಡಲು ಅವರು ಇಷ್ಟಪಡುತ್ತಾರೆ.
ಆದರೆ ಚಾಂಪಿಯನ್‌ಶಿಪ್ (Championship) ನಡೆಯುವುದಕ್ಕೂ ಒಂದು ವಾರ ಮೊದಲು ಜನಪ್ರಮ್ ತಮ್ಮ ದೈಹಿಕ ಧೃಡತೆಗಾಗಿ ಹೆಚ್ಚು ಶ್ರಮವಹಿಸುತ್ತಿದ್ದರು. ಸುದ್ದಿಸಂಸ್ಥೆ ರಾಯಿಟರ್ಸ್ ಪ್ರಕಾರ, ಸ್ಥಳೀಯ ಕ್ರೀಡಾಂಗಣದಲ್ಲಿ ಅವರು ತನ್ನ ಮಗಳೊಂದಿಗೆ ದಿನಕ್ಕೆ ಎರಡು ಬಾರಿ ಸ್ಪರ್ಧೆಗೆ ತಯಾರಿ ಮಾಡುತ್ತಿದ್ದರು. ನನ್ನ ತಂದೆ ಯಾವಾಗಲೂ ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರುತ್ತಾರೆ, ಆದ್ದರಿಂದ ಅವರು ಉತ್ತಮ ಮಾನಸಿಕ ಆರೋಗ್ಯ ಸ್ಥಿತಿಯಲ್ಲಿದ್ದಾರೆ. ದೈಹಿಕ ಆರೋಗ್ಯದ ದೃಷ್ಟಿಯಿಂದ, ಅವರು ಹೆಚ್ಚು ಬಲಶಾಲಿಯಾಗಿದ್ದಾರೆ ಎಂದು ಅವರ ಪುತ್ರಿ ಸಿರಿಪನ್ (Siripan) ಹೇಳಿದ್ದಾರೆ. ಟ್ವಿಟರ್‌ನಲ್ಲಿ (twitter) ರಾಯಿಟರ್ಸ್ (Reuters) ಹಂಚಿಕೊಂಡ ವೀಡಿಯೊದಲ್ಲಿ, ಈ ಶತಾಯುಷಿ ಅಥ್ಲೀಟ್ ಜಾವೆಲಿನ್ (javelin) ಎಸೆಯುತ್ತಿರುವುದನ್ನು ಕಾಣಬಹುದು.
ಉಕ್ಕಿದ ದೇಶ ಭಕ್ತಿ... ಸೇನೆ ಸೇರಲು ಮುಂದಾದ 80ರ ಉಕ್ರೇನ್ ವೃದ್ಧ
ಈ ಶಕ್ತಿಯುತ ಜೀವನಶೈಲಿ ಮತ್ತು ಧೃಡ ಸಂಕಲ್ಪವು ಈ 102 ವರ್ಷ ವಯಸ್ಸಿನ ಜಾನ್‌ಪ್ರಮ್ ಅವರಿಗೆ ಪ್ರತಿಫಲ ನೀಡಿದೆ. ಇವರ ದಾಖಲೆಯು ಇದುವರೆಗಿನ ಯಾವುದೇ ವರ್ಷದಲ್ಲಿ ಯಾವುದೇ ಸ್ಪರ್ಧಿಯೂ ಮಾಡಿಲ್ಲ. ಜಾನ್‌ಪ್ರಮ್ ಅವರು ಈಗ ವಾರ್ಷಿಕ ಚಾಂಪಿಯನ್‌ಶಿಪ್‌ಗಳಲ್ಲಿ ನಾಲ್ಕು ಬಾರಿ ಅದರಲ್ಲೂ ವಿಶೇಷವಾಗಿ 100-ಮೀಟರ್ ಓಟ, ಜಾವೆಲಿನ್ ಥ್ರೋ ಮತ್ತು ಡಿಸ್ಕಸ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಕ್ರೀಡೆಯಲ್ಲಿ ಭಾಗವಹಿಸುವುದು ನನ್ನನ್ನು ಬಲಶಾಲಿ ಮತ್ತು ಉತ್ತಮನನ್ನಾಗಿ ಮಾಡಿದೆ. ಇದರ ಜೊತೆಗೆ, ವ್ಯಾಯಾಮವು ನಿಮ್ಮ ಹಸಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಆದ್ದರಿಂದ ನೀವು ಚೆನ್ನಾಗಿ ತಿನ್ನುತ್ತೀರಿ ಎಂದು ಜನಪ್ರಮ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಒಟ್ಟಿನಲ್ಲಿ ಈ ಶತಾಯುಷಿಯ ಸಾಧನೆ ಎಲ್ಲರ ಗಮನ ಸೆಳೆಯುತ್ತಿದೆ.
ಸ್ವಯಂ ಬಾಂಬ್ ತಯಾರಿಸಿಟ್ಟುಕೊಂಡ ವೃದ್ಧೆ: ಬರಲಿ ರಷ್ಯಾದವರು ಕಲಿಸುವೆ ಎಂದ ಉಕ್ರೇನ್ ಅಜ್ಜಿ