ಮೊಮ್ಮಕ್ಕಳಿಗಾಗಿ ಸೇನೆ ಸೇರುವೆ ಎಂದ 80ರ ಅಜ್ಜ 80ರ ಪ್ರಾಯದಲ್ಲೂ ದೇಶಕ್ಕೆ ಮಿಡಿಯುವ ಜೀವ ಉಕ್ರೇನ್‌ ಅಜ್ಜನ ಫೋಟೋ ವೈರಲ್‌

ಬಲಿಷ್ಠ ರಾಷ್ಟ್ರ ರಷ್ಯಾದ ದಾಳಿಯಿಂದಾಗಿ ಉಕ್ರೇನ್‌ ಸಂಪೂರ್ಣ ನಲುಗಿ ಹೋಗಿದೆ. ಇಡೀ ಪ್ರಪಂಚವನ್ನೇ ಕರೆದರೂ ಯಾವ ದೇಶವೂ ಉಕ್ರೇನ್‌ ನೆರವಿಗೆ ಧಾವಿಸಿಲ್ಲ. ಹೀಗಾಗಿ ತನ್ನ ಅಸ್ತಿತ್ವಕ್ಕಾಗಿ ಏಕಾಂಗಿ ಹೋರಾಟ ನಡೆಸುತ್ತಿರುವ ಉಕ್ರೇನ್‌ ತನ್ನ ನಾಗರಿಕರಿಗೂ ಹೋರಾಡುವ ಸಲುವಾಗಿ ಕೈಗೆ ಗನ್‌ಗಳನ್ನು ನೀಡುತ್ತಿದೆ. ಈ ಮಧ್ಯೆ 80 ದಾಟಿದ ವೃದ್ಧರೊಬ್ಬರು ತನ್ನನ್ನು ಸೇನೆಗೆ ಸೇರಿಸಿಕೊಳ್ಳಿ ಎರಡು ಜೊತೆ ಬಟ್ಟೆ ತುಂಬಿದ ಬ್ಯಾಗ್‌ ಹಿಡಿದುಕೊಂಡು ಬಂದಿದ್ದು, ಉಕ್ರೇನಿ ವೃದ್ಧನ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಉಕ್ರೇನ್‌ನ ಮಾಜಿ ಪ್ರಥಮ ಮಹಿಳೆ ಕತೆರಿನಾ ಯುಶ್ಚೆಂಕೊ (Kateryna Yushchenko) ಅವರು ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಫೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಕಪ್ಪು ಬಣ್ಣದ ಟೋಪಿ ಧರಿಸಿದ ವೃದ್ಧರೊಬ್ಬರು, ಒಂದು ಪುಟ್ಟ ಲೆದರ್ ಬ್ಯಾಗ್‌ ಹಿಡಿದುಕೊಂಡಿದ್ದು ಉಕ್ರೇನ್‌ ಸೈನಿಕನೋರ್ವನ ಬಳಿ ತನ್ನನ್ನು ಸೇನೆಗೆ ಸೇರಿಸಿಕೊಳ್ಳುವಂತೆ ಕೇಳುತ್ತಾರೆ. 'ಈ 80 ವರ್ಷದ ವೃದ್ಧನ ಫೋಟೋವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇವರು ಎರಡು ಟೀ ಶರ್ಟ್ ಎರಡು ಜೊತೆ ಪ್ಯಾಂಟ್ ಹಾಗೂ ಹಲ್ಲುಜುವ ಬ್ರಷ್‌ ಹಾಗೂ ತಿನ್ನಲು ಸ್ಯಾಂಡ್‌ವಿಚ್‌ ತೆಗೆದುಕೊಂಡು ಸೇನೆ ಸೇರಲು ಬಂದಿದ್ದಾಗಿ ಹೇಳುತ್ತಿದ್ದಾರೆ. ಇವರು ತಮ್ಮ ಮೊಮ್ಮಕ್ಕಳಿಗಾಗಿ ಇದನ್ನು ಮಾಡುತ್ತಿರುವುದಾಗಿ ಹೇಳಿದ್ದಾರೆ' ಎಂದು ಈ ಫೋಟೋವನ್ನು ಪೋಸ್ಟ್ ಮಾಡಿ ಕತೆರಿನಾ ಯುಶ್ಚೆಂಕೊ ಬರೆದುಕೊಂಡಿದ್ದಾರೆ. 

Scroll to load tweet…

ಎಲ್ಲಿ ಈ ಫೋಟೋವನ್ನು ತೆಗೆಯಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಶುಕ್ರವಾರ ತನ್ನ ಯುದ್ಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದ್ದಂತೆ ಈ ಫೋಟೋ ವೈರಲ್ ಆಗಿದೆ. ಕತೆರಿನಾ ಯುಶ್ಚೆಂಕೊ ಅವರು ಮಾಡಿದ ಈ ಟ್ವಿಟ್‌ನ್ನು ಎರಡೂವರೆ ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಹಾಗೂ 39,000 ಕ್ಕೂ ಹೆಚ್ಚು ಜನ ಈ ಪೋಸ್ಟನ್ನು ರಿಟ್ವಿಟ್ ಮಾಡಿದ್ದಾರೆ. ವೃದ್ಧ ವ್ಯಕ್ತಿಯ ಧೈರ್ಯಕ್ಕೆ ಜನ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ದೇಶ ಹಾಗೂ ಕುಟುಂಬದ ಮೇಲಿನ ಪ್ರೀತಿಗಾಗಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಉಕ್ರೇನ್‌ ಜನರ ಹೃದಯ ಹಾಗೂ ಮನಸ್ಸು ತುಂಬಾ ಸ್ಟ್ರಾಂಗ್ ಆಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

Russia Ukraine Crisis:ಭಾರತದಲ್ಲಿ ಯಾವೆಲ್ಲ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಮಾಹಿತಿ
ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ಸಮರ ಕಾನೂನಿನಡಿಯಲ್ಲಿ ಇರುವ 18 ರಿಂದ 60 ವರ್ಷ ವಯಸ್ಸಿನ ಪುರುಷರು ರಾಷ್ಟ್ರವನ್ನು ತೊರೆಯುವುದನ್ನು ನಿಷೇಧಿಸಲಾಗಿದೆ ಎಂದು ಉಕ್ರೇನ್ ಗುರುವಾರ ಘೋಷಣೆ ಮಾಡಿತ್ತು. ಹೀಗಾಗಿ ಉಕ್ರೇನ್‌ನ ಪುರುಷರು ತಮ್ಮ ಹೆಂಡತಿ ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿ ತಾವು ಅಲ್ಲೇ ನಿಂತು ರಷ್ಯಾ ವಿರುದ್ಧ ಹೋರಾಡುತ್ತಿದ್ದಾರೆ. ಹೀಗಾಗಿ ತಂದೆಯೋರ್ವ ತನ್ನ ಪುಟಾಣಿ ಮಗಳನ್ನು ದೂರ ಕಳುಹಿಸುವ ವೇಳೆ ಆಕೆಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ರಷ್ಯಾ ವಿರುದ್ಧ ಹ್ಯಾಕರ್‌ಗಳ ಸೈಬರ್‌ ದಾಳಿ: ಸರ್ಕಾರಿ ವೆಬ್‌ಸೈಟ್‌ಗಳ ಹ್ಯಾಕ್