ಏರ್‌ಪೋರ್ಟ್‌ನಲ್ಲಿಯೇ ಟರ್ಮಿನೇಟರ್ ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಬಂಧನ!
ಹಾಲಿವುಡ್‌ನ ಹಿರಿಯ ನಟ ಹಾಗೂ ಕ್ಯಾಲಿಫೋರ್ನಿಯಾದ ಮಾಜಿ ಗವರ್ನರ್ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರನ್ನು ಮ್ಯೂನಿಚ್ ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿದೆ.
ನವದೆಹಲಿ (ಜ.18): ಟರ್ಮಿನೇಟರ್ ಸರಣಿಯ ಚಿತ್ರಗಳ ಮೂಲಕವೇ ಜಗದ್ವಿಖ್ಯಾತರಾಗಿರುವ ಹಿರಿಯ ಹಾಲಿವುಡ್ ನಟ ಹಾಗೂ ಕ್ಯಾಲಿಫೋರ್ನಿಯಾದ ಮಾಜಿ ಗವರ್ನರ್ 76 ವರ್ಷದ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ (Arnold Schwarzenegger) ಅವರನ್ನು ಜರ್ಮಿನ ಮ್ಯೂನಿಕ್ ಏರ್‌ಪೋರ್ಟ್‌ನಲ್ಲಿ ಬಂದಿಸಲಾಗಿದೆ. ತಮ್ಮಲ್ಲಿರುವ ಐಷಾರಾಮಿ ವಾಚ್‌ನ ಬಗ್ಗೆ ಮಾಹಿತಿಯನ್ನು ತಿಳಿಸದ ಕಾರಣ ಅವರನ್ನು ಬಂಧಿಸಲಾಗಿ ದೆ ಎಂದು ಜರ್ಮನಿಯ ಅಧಿಕಾರಿಗಳು ತಿಳಿಸಿದ್ದಾರೆ. ಹಾಲಿವುಡ್‌ನ ಪ್ರಖ್ಯಾತ ನಟ ತಾವು ಹರಾಜು ಮಾಡಲು ಬಯಸಿದ್ದ ವಾಚ್‌ಅನ್ನು ನೋಂದಾಯಿಸಿಕೊಳ್ಳದೇ ತಂದ ಕಾರಣಕ್ಕಾಗಿ ಅವರಿಗೆ ಜರ್ಮನಿಯ ತೆರಿಗೆ ಕಾನೂನಿನ ಅಡಿಯಲ್ಲಿ 35 ಸಾವಿರ ಯುರೋ ಅಂದರೆ (31.68 ಲಕ್ಷ ರೂಪಾಯಿ) ದಂಡ ವಿಧಿಸಲಾಗಿದೆ ಬರ್ಲಿನ್ ಮಾಧ್ಯಮಗು ವರದಿ ಮಾಡಿವೆ. ಮಿ.ಒಲಿಂಪಿಯಾ ಖ್ಯಾತಿಯ ನಟನಿಂದ ದಂಡ ವಸೂಲಿ ಮಾಡಲು ಅವರನ್ನು ಸ್ಥಳೀಯ ಬ್ಯಾಂಕ್‌ಗೆ ಅಧಿಕಾರಿಗಳು ಕರೆದೊಯ್ದಿದ್ದಾರೆ. ಶ್ವಾರ್ಜಿನೆಗ್ಗರ್ ಬಂಧನದ ಸುದ್ದಿಯನ್ನು ಜರ್ಮನ್ ಕಸ್ಟಮ್ಸ್ ವಕ್ತಾರರು ಖಚಿತಪಡಿಸಿದ್ದಾರೆ.
ಜರ್ಮನ್ ಟ್ಯಾಬ್ಲಾಯ್ಡ್ ಪತ್ರಿಕೆ ಬಿಲ್ಡ್ ಪ್ರಕಾರ, ಕಸ್ಟಮ್ಸ್ ಶುಲ್ಕದ ಭಾಗವಾಗಿ ಭಾರಿ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಲು ಟರ್ಮಿನೇಟರ್ ಖ್ಯಾತಿ ನಟನಿಗೆ ತಿಳಿಸಲಾಗಿದೆ. ಮೂಲತಃ ಆಸ್ಟ್ರಿಯಾದವರಾದ ಶ್ವಾರ್ಜಿನೆಗ್ಗರ್, ಹತ್ತಿರದ ಬ್ಯಾಂಕ್‌ನಿಂದ ಬೃಹತ್ ಮೊತ್ತವನ್ನು ಹಿಂಪಡೆಯಲು ಕಸ್ಟಮ್ಸ್ ಅಧಿಕಾರಿಯೊಬ್ಬರು ಬೆಂಗಾವಲಾಗಿ ತೆರಳಿದ್ದರು.
76 ವರ್ಷದ ಮಾಜಿ ಬಾಡಿಬಿಲ್ಡರ್ 49 ವರ್ಷದ ಗೆಳತಿ ಹೀದರ್ ಮಿಲ್ಲಿಗನ್ ಮತ್ತು ಸ್ನೇಹಿತನೊಂದಿಗೆ ಜರ್ಮನಿ ಪ್ರವಾಸದಲ್ಲಿದ್ದಾರೆ ಎಂದು ಬಿಲ್ಡ್ ತನ್ನ ವರದಿಯಲ್ಲಿ ತಿಳಿಸಿದೆ. ಮ್ಯೂನಿಚ್ ವಿಮಾನ ನಿಲ್ದಾಣದ ಕಸ್ಟಮ್ಸ್ ವಕ್ತಾರರನ್ನು ಉಲ್ಲೇಖಿಸಿದ ಗಾರ್ಡಿಯನ್ ಮಾಧ್ಯಮದ ವರದಿಯ ಪ್ರಕಾರ, ಥಾಮಸ್ ಮೈಸ್ಟರ್ ಅವರು ಶ್ವಾರ್ಜಿನೆಗ್ಗರ್ ಅವರನ್ನು ಯುಎಸ್ ನಿಂದ ಜರ್ಮನಿಗೆ ಬಂದ ನಂತರ ಬುಧವಾರ ಮಧ್ಯಾಹ್ನ ವಿಮಾನ ನಿಲ್ದಾಣದ ಕಸ್ಟಮ್ಸ್ ಪ್ರದೇಶದಲ್ಲಿ ಬಂಧಿಸಲಾಯಿತು ಎಂದು ಹೇಳಿದರು.
ಇವಳು ಅವಳಾಗಲು ಸಾಧ್ಯವೇ ಇಲ್ಲ! ತೆಲುಗು ಬಾಲನಟಿ ಆವಂತಿಕಾ ಹೊಸ ಆವೃತ್ತಿ ನೋಡಿ ಶಾಕ್ ಆದ ಇಂಟರ್ನೆಟ್!
ಮಿಲ್ಲಿಗನ್ ಮತ್ತು ಶ್ವಾರ್ಜಿನೆಗ್ಗರ್ ಅವರ ಅನಾಮಧೇಯ ಸ್ನೇಹಿತನಿಗೆ ಅವರೊಂದಿಗೆ ಬ್ಯಾಂಕ್‌ಗೆ ಹೋಗಲು ಅವಕಾಶವಿರಲಿಲ್ಲ. ದಂಡ ಪಾವತಿ ಮಾಡಿದ ಬಳಿಕ ಶ್ವಾರ್ಜಿನೆಗ್ಗರ್ ಮ್ಯೂನಿಚ್‌ನಲ್ಲಿ ತನ್ನ ಪ್ರಯಾಣವನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ, ಐಷಾರಾಮಿ ಗಡಿಯಾರವನ್ನು ಕಸ್ಟಮ್ಸ್ ಅಧಿಕಾರಿಗಳ ಬಳಿ ಇರಿಸಲಾಗಿದೆ ಎಂದು ಮೇಸ್ಟರ್ ಪತ್ರಿಕೆ ವರದಿ ಮಾಡಿದೆ. ಆಸ್ಟ್ರಿಯಾದ ಕಿಟ್ಜ್‌ಬುಹೆಲ್‌ನ ಸ್ಕೀ ರೆಸಾರ್ಟ್‌ನಲ್ಲಿ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರ ಹವಾಮಾನ ಯೋಜನೆಯನ್ನು ಬೆಂಬಲಿಸಲು ಭೋಜನದ ಸಮಯದಲ್ಲಿ ದುಬಾರಿ ಗಡಿಯಾರವನ್ನು ಗುರುವಾರ ರಾತ್ರಿ ಹರಾಜಿಗೆ ಇಡಲಿ ನಿಗದಿ ಮಾಡಲಾಗಿತ್ತು ಎಂದು ಜರ್ಮನ್ ದೈನಿಕ ಬಿಲ್ಡ್ ಹೇಳಿದೆ.
ಲಾಸ್ ಏಂಜಲಿಸ್ ಬೀಚ್ನಲ್ಲಿ ಮಗಳ ಹುಟ್ಟುಹಬ್ಬ ಆಚರಿಸಿದ ಪ್ರಿಯಾಂಕಾ-ನಿಕ್: ಫೋಟೋಗಳು ವೈರಲ್