ಇವಳು ಅವಳಾಗಲು ಸಾಧ್ಯವೇ ಇಲ್ಲ! ತೆಲುಗು ಬಾಲನಟಿ ಆವಂತಿಕಾ ಹೊಸ ಆವೃತ್ತಿ ನೋಡಿ ಶಾಕ್ ಆದ ಇಂಟರ್ನೆಟ್!
ಟಾಲಿವುಡ್‌ನಲ್ಲಿ ಮಹೇಶ್ ಬಾಬು, ನಾಗಚೈತನ್ಯ, ಪವನ್ ಕಲ್ಯಾಣ್ ಮುಂತಾದ ನಟರ ಚಿತ್ರಗಳಲ್ಲಿ ಬಾಲ ನಟಿಯಾಗಿದ್ದ ಮುಗ್ಧ ಮುಖದ ಆವಂತಿಕಾ ಈಗ ಹಾಲಿವುಡ್‌ನ ಮೀನ್ ಗರ್ಲ್ಸ್‌ನಲ್ಲಿ ಬಾರ್ಬಿ ಬೊಂಬೆಯ ಹಾಗಾಗಿರುವುದು ನೋಡಿದ ಜನ, ನಿಜಕ್ಕೂ ಇವಳು ಅವಳೇನಾ ಎಂದು ಮತ್ತೆ ಮತ್ತೆ ಅಚ್ಚರಿ ಪಡ್ತಿದಾರೆ.
ಈಕೆಯ ಅಂದಿನ ಹಾಗೂ ಇಂದಿನ ಫೋಟೋಗಳು, ಮಾತನಾಡುವ ಸ್ಲ್ಯಾಂಗ್, ಬಾಡಿ ಲಾಂಗ್ವೇಜ್ ನೋಡಿದರೆ ಖಂಡಿತಾ ಅವಳೇ ಇವಳೆಂದು ನೀವು ಒಪ್ಪಲಾರಿರಿ. ಒಂದು ಕಾಲದಲ್ಲಿ ಮಹೇಶ್ ಬಾಬು ಜೊತೆ ಸ್ಕ್ರೀನ್ ಹಂಚಿಕೊಂಡು 'ನೇನು ನಿಮ್ಮ ಪೆದ್ದ ಫ್ಯಾನ್' ಎಂದು ಮುದ್ದುಮುದ್ದಾಗಿ ಹೇಳಿದ್ದ ಆವಂತಿಕಾ ವಂದನಾಪು ಈಗ ಹಾಲಿವುಡ್‌ನಲ್ಲಿ ಟಾಕ್ ಆಫ್ ದ ಟೌನ್ ಆಗಿದ್ದಾಳೆ.
ಸಧ್ಯ ಹಾಲಿವುಡ್ ಅಂಗಳದ 'ಮೀನ್ ಗರ್ಲ್ಸ್' ಚಿತ್ರದಲ್ಲಿ ಕ್ಯರೆನ್ ಶೆಟ್ಟಿಯಾಗಿ ಸಾಕಷ್ಟು ಸೆನ್ಸೇಶನ್ ಹುಟ್ಟು ಹಾಕಿದ್ದಾಳೆ. ಅಮಂಡಾ ಸೆಫ್ರಿಡ್‌ನ ಕರೆನ್ ಸ್ಮಿತ್‌ನ 2.0 ಆವೃತ್ತಿಯಾದ ಕರೆನ್ ಶೆಟ್ಟಿ ಪಾತ್ರವನ್ನು ನಿರ್ವಹಿಸಿ ಹಾಲಿವುಡ್ ಅಭಿಮಾನಿಗಳನ್ನು ಗಳಿಸಿಕೊಳ್ಳುತ್ತಿದ್ದಾಳೆ.
ಮಹೇಶ್ ಬಾಬು ಅವರ ಬ್ರಹ್ಮೋತ್ಸವಂ, ನಾಗ ಚೈತನ್ಯ ಅವರ ಪ್ರೇಮಂ ಮತ್ತು ಪವನ್ ಕಲ್ಯಾಣ್ ಅವರ ಅಜ್ಞಾತವಾಸಿ ಚಿತ್ರಗಳಲ್ಲಿ ಬಾಲನಟಿಯಾಗಿದ್ದ ಆವಂತಿಕಾ ವಂದನಾಪುವನ್ನು ಮೀನ್ ಗರ್ಲ್ಸ್‌ನಲ್ಲಿ ನೋಡಿದವರು ಶಾಕ್ ಆಗುತ್ತಿದ್ದಾರೆ. ಅಬ್ಬಬ್ಬಾ! ಒಬ್ಬ ವ್ಯಕ್ತಿ ಈ ಮಟ್ಟಿಗೆ ಬದಲಾಗಬಹುದಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಮಾಲ್ತಿ ಮೇರಿಗೆ 2 ವರ್ಷ; ಮುದ್ದು ಮಗಳ ಬರ್ತ್‌ಡೇ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ
ಅವಂತಿಕಾ ವಂದನಾಪು ರೆಡ್ ಕಾರ್ಪೆಟ್‌ಗೆ ನೀಡಿದ ಸಂದರ್ಶನವನ್ನು ಹಂಚಿಕೊಂಡಿರುವ ತೆಲುಗು ಅಭಿಮಾನಿಯೊಬ್ಬರು, 'ಅಬ್ಬಬ್ಬಾ, ಎಂಥಾ ಬಾಡಿ ಸ್ಟ್ರಕ್ಚರ್, ಎಂಥಾ ಬಾಡಿ ಲಾಂಗ್ವೇಜ್, ಎಂಥ ಚೇಂಜಮ್ಮೋ' ಎಂದು ಬರೆದಿದ್ದಾರೆ.
ಮತ್ತೊಬ್ಬ ಸಾಮಾಜಿಕ ಬಳಕೆದಾರರು ಪ್ರತಿಕ್ರಿಯಿಸಿ, 'ಇದಂತೂ ಪೂರ್ತಿ ಶಾಕಿಂಗ್, ಅವಳ ದೇಹಭಾಷೆ ಕೂಡಾ ಬದಲಾಗಿದೆ' ಎಂದಿದ್ದಾರೆ.
ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು, 'ಇವರು ಪ್ರೇಮಂ ಮತ್ತು ಬ್ರಹ್ಮೋತ್ಸವಮ್‌ನ ಅದೇ ಹುಡುಗಿ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ' ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ಡ್ರೋನ್ ಪ್ರತಾಪ್‌ಗೆ 'ಕಾಗೆ' ಅಂದು ಕನ್ನಡಿಗರ ಕೋಪಕ್ಕೆ ಗುರಿಯಾದ ಇಶಾನಿ
ಆವಂತಿಕಾ ಬಗ್ಗೆ
ಆವಂತಿಕಾ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತೆಲುಗು ಕುಟುಂಬದಲ್ಲಿ ಜನಿಸಿದರು. ಆಕೆಯ ಕುಟುಂಬವು ಮೂಲತಃ ಹೈದರಾಬಾದ್‌ನಿಂದ ಬಂದಿದೆ ಮತ್ತು ಅವರು 2016 ರಲ್ಲಿ ಮಹೇಶ್ ಬಾಬು ಅಭಿನಯದ ಬ್ರಹ್ಮೋತ್ಸವಂ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಅವರು ನಾಗ ಚೈತನ್ಯ ಅವರ ಪ್ರೇಮಂ, ರಾರಂಡೋಯ್ ವೇದಿಕೆ ಚೂಢಂ ಮತ್ತು ಪವನ್ ಕಲ್ಯಾಣ್ ಅವರ ಅಜ್ಞಾತವಾಸಿಯಂತಹ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದರು. ಅವರು ಐಶ್ವರ್ಯಾ ರಾಜೇಶ್ ಅವರ 2021 ರ ಭೂಮಿಕಾ ಚಿತ್ರದೊಂದಿಗೆ ತಮಿಳಿನಲ್ಲಿ ಪದಾರ್ಪಣೆ ಮಾಡಿದರು.