ಬ್ರಿಟಟನ್(ಫೆ.09): ಇಡೀ ಜಗತ್ತು ಕೊರೋನಾ ವೈರಸ್ಸಿನ ಆಟಾಟೋಪ ಕಂಡು ಸುಸ್ತಾಗಿದೆ. ಆದರೆ ಬ್ರಿಟನ್ನಿನ ತರುಣನೊಬ್ಬನಿಗೆ ಎರಡೆರಡು ಬಾರಿ ಕೊರೋನಾ ಸೋಂಕು ತಗುಲಿದ್ದರೂ ಆತನಿಗೆ ಅದರ ಪರಿವೆಯೇ ಇಲ್ಲ.

ಹೌದು, ಕಳೆದ ಮಾಚ್‌ರ್‍ನಲ್ಲಿ ನಡೆದ ಕಾರು ಅಪಘಾತದಲ್ಲಿ ಬ್ರಿಟನ್ನಿನ 19 ವರ್ಷದ ಯುವಕ ಜೋಸೆಫ್‌ ಫ್ಲಾವಿಲ್‌ ಮೆದುಳಿಗೆ ಗಂಭೀರ ಪೆಟ್ಟು ಬಿದ್ದು, ಆತ ಕೋಮಾಗೆ ಜಾರಿದ್ದ. ಈ ವೇಳೆ ಜೋಸೆಫ್‌ಗೆ ಎರಡೆರಡು ಬಾರಿ ಕೊರೋನಾ ಸೋಂಕು ತಗುಲಿತ್ತು. ಜೋಸೆಫ್‌ ಆರೈಕೆ ಮಾಡಲೂ ಕುಟುಂಬಸ್ಥರಿಗೆ ಸಾಧ್ಯವಾಗಿರಲಿಲ್ಲ. ವಿಡಿಯೋ ಮೂಲಕವೇ ಮಾತನಾಡಿಸುತ್ತಿದ್ದರು.

2 ತಿಂಗಳು ಕೋಮಾದಲ್ಲಿದ್ದ ಹುಡುಗ ಆ ಒಂದು ಪದ ಕೇಳಿ ಕಣ್ಬಿಟ್ಟ!

ಆದರೆ ಪವಾಡವೆಂಬಂತೆ ಒಂದು ವರ್ಷದ ಬಳಿಕ ಇತ್ತೀಚೆಗೆ ಜೋಸೆಫ್‌ ಗುಣಮುಖನಾಗುತ್ತಿದ್ದಾನೆ. ಕುಟಂಬದವರ ಮಾತಿಗೆ ಪ್ರತಿಕ್ರಿಯಿಸುತ್ತಿದ್ದಾರೆ.

ಆದರೆ ಜಗತ್ತಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಕೊರೋನಾ ಹೆಮ್ಮಾರಿ ಬಗ್ಗೆ ಈತನಿಗೆ ಅರಿವೇ ಇಲ್ಲ.