ಓರ್ಲಾಂಡೋದಲ್ಲಿ ೧೪ ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ೩೨ ವರ್ಷದ ಶಿಕ್ಷಕಿಯನ್ನು ಬಂಧಿಸಲಾಗಿದೆ. ಶಾಲಾ ಆವರಣದಲ್ಲಿಯೇ ಈ ಘಟನೆ ನಡೆದಿದ್ದು, ಶಿಕ್ಷಕಿ ವಿದ್ಯಾರ್ಥಿಗೆ ಲೈಂಗಿಕ ಕ್ರಿಯೆಗಳನ್ನು ಹೇಗೆ ಮಾಡಬೇಕೆಂದು ಕಲಿಸುತ್ತಿದ್ದಳು ಎಂದು ವರದಿಯಾಗಿದೆ.

ಓರ್ಲಾಂಡೋ, ಅಮೆರಿಕ (ಜೂ.27): 14 ವರ್ಷದ ವಿದ್ಯಾರ್ಥಿಯ ಜೊತೆ ಲೈಂಗಿಕ ಸಂಬಂಧ ಇರಿಸಿಕೊಂಡಿದ್ದಕ್ಕಾಗಿ ಅಮೆರಿಕ ಓರ್ಲಾಂಡೋದ ಮಾಧ್ಯಮಿಕ ಶಾಲೆಯ 32 ವರ್ಷದ ಶಿಕ್ಷಕಿಯನ್ನು ಬಂಧಿಸಲಾಗಿದೆ.ಕಾರ್ನರ್ ಲೇಕ್ ಮಿಡಲ್ ಸ್ಕೂಲ್‌ನ ಶಿಕ್ಷಕಿ ಸಾರಾ ಟಟಿಯಾನಾ ಜಾಕಾಸ್ ಬಂಧನಕ್ಕೆ ಒಳಗಾದ ಶಿಕ್ಷಕಿ.2022ರ ಡಿಸೆಂಬರ್ ಮತ್ತು 2023ರ ಏಪ್ರಿಲ್ ನಡುವೆ 14 ವರ್ಷದ ವಿದ್ಯಾರ್ಥಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಅವರ ಮೇಲೆ ಆರೋಪ ಹೊರಿಸಲಾಗಿದೆ.

ಪೊಲೀಸರ ವರದಿಯ ಪ್ರಕಾರ, ಜಾಕಾಸ್‌, 14 ವರ್ಷದ ವಿದ್ಯಾರ್ಥಿಯ ಜೊತೆ ಈಕೆ ಲೈಂಗಿಕ ಸಂಭೋಗ ಹಾಗೂ ಮೌಖಿಕ ಸಂಭೋಗದಲ್ಲಿ (ಓರಲ್‌ ಸೆ*ಕ್ಸ್‌) ತೊಡಗಿದ್ದಳು. ಶಾಲೆ ಮುಚ್ಚಿದ ಬಳಿಕ, ಶಾಲಾ ಕೋಣೆಯ ಒಳಗೆ ಲೈಂಗಿಕ ಸಂಭೋಗ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 ಜಾಕಾಸ್‌ ಮುಚ್ಚಿದ, ಬೀಗ ಹಾಕಿದ ಬಾಗಿಲುಗಳ ಹಿಂದೆ ಶಾಲಾ ಆವರಣದಲ್ಲಿ ಲೈಂಗಿಕ ಸಂಭೋಗ ನಡೆದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ತನ್ನ ಜೊತೆ ಯಾವ ರೀತಿಯಲ್ಲಿ ಲೈಂಗಿಕ ಸಂಭೋಗ ಮಾಡಬೇಕು ಎನ್ನುವುದನ್ನೂ ಜಾಕಾಸ್‌,ಸ 14 ವರ್ಷದ ಹುಡುಗನಿಗೆ ತಿಳಿಸುತ್ತಿದ್ದಳು ಎನ್ನಲಾಗಿದೆ. ಈ ಸಂಭೋಗದ ಸಮಯದಲ್ಲಿಯೇ 14 ವರ್ಷದ ವಿದ್ಯಾರ್ಥಿ ತನ್ನ ವರ್ಜಿನಿಟಿಯನ್ನೂ ಕಳೆದುಕೊಂಡಿದ್ದ ಎನ್ನಲಾಗಿದೆ. ಯಾವ ರೀತಿ ಸಂಭೋಗ ನಡೆಸಬೇಕು ಎಂದು ಶಿಕ್ಷಕಿ ತಿಳಿಸಿದ ಬಳಿಕ ಮುಂದಿನ 3 ಅಥವಾ 4 ದಿನಗಳವರೆಗೆ ಲೈಂಗಿಕ ಸಂಭೋಗ ಇದೇ ರೀತಿ ಪುನರಾವರ್ತನೆಯಾಯಿತು ಎಂದು ಸಂತ್ರಸ್ಥ ವಿದ್ಯಾರ್ಥಿ ಹೇಳಿದ್ದಾನೆ.

ಜಾಕಾಸ್‌ನ ಪತಿ ಮೊದಲ ಬಾರಿಗೆ ಈ ಸಂಬಂಧವನ್ನು ಪತ್ತೆ ಮಾಡಿದ್ದ. ಅದಾದ ಬಳಿಕ, ಎಂದಿಗೂ ವಿದ್ಯಾರ್ಥಿಯನ್ನು ಭೇಟಿ ಮಾಡುವುದಿಲ್ಲ ಎಂದು ವಿದ್ಯಾರ್ಥಿ ಹಾಗೂ ಶಿಕ್ಷಕಿ ನಡುವೆ ಒಪ್ಪಂದವಾಗಿತ್ತು ಎಂದು ವರದಿ ತಿಳಿಸಿದೆ. ವಿದ್ಯಾರ್ಥಿಯ ತಾಯಿ ಕೂಡ ಜಾಕಾಸ್‌ ಜೊತೆಗೆ ಫೋನ್‌ನಲ್ಲಿ ಮಾತನಾಡಿದ್ದು, ಮುಂದೆ ಎಂದೂ ಕೂಡ ತನ್ನ ಮಗನಿಗೆ ಮೆಸೇಜ್‌ ಮಾಡಬೇಡಿ ಎಂದು ಆಕೆ ಹೇಳಿದ್ದಳು ಎನ್ನಲಾಗಿದೆ.

ಆದರೆ, ವಿದ್ಯಾರ್ಥಿ ಜೊತೆ ಸಂವಹನ ನಡೆಸುವ ಸಲುವಾಗಿಯೇ ಆಕೆ ಫೇಕ್‌ ಇನ್ಸ್‌ಟಾಗ್ರಾಮ್‌ ಅಕೌಂಟ್‌ ತೆರೆದಿದ್ದಳು ಎನ್ನಲಾಗಿದೆ. ಇಲ್ಲಿ ಆಕೆ ನಂಬರ್‌ ಹಾಗೂ ವರ್ಡ್‌ ಕೋಡ್‌ ಮೂಲಕ ಸಂವಹನ ನಡೆಸುತ್ತಿದ್ದಳು. 115 (ಐ ಮಿಸ್‌ ಯು), 520 (ಐ ಲವ್‌ ಯು), ಹೈ ಫೈವ್‌ (ಕಿಸ್‌) ಎನ್ನುವ ಕೋಡ್‌ ಮೂಲಕ ಸಂವಹನ ನಡೆಸುತ್ತಿದ್ದಳು.

ಶಾಲೆಯ ಉತ್ತರವೇನು?

ಈ ಕುರಿತಂತೆ ಆರೆಂಜ್‌ ಕೌಂಟಿ ಪಬ್ಲಿಕ್‌ ಸ್ಕೂಲ್‌ ಪ್ರತಿಕ್ರಿಯೆ ನೀಡಿದೆ. "ಕಾರ್ನರ್ ಲೇಕ್ ಮಿಡಲ್ ಸ್ಕೂಲ್ ಕುಟುಂಬದವರೆ, ಎರಡು ವರ್ಷಗಳ ಹಿಂದೆ ನಡೆದ ದುಷ್ಕೃತ್ಯದ ಆರೋಪಗಳು ವರದಿಯಾದ ನಂತರ ನಮ್ಮ ಶಿಕ್ಷಕಿಯಲ್ಲಿ ಒಬ್ಬರನ್ನು ಬಂಧಿಸಲಾಗಿದೆ ಎಂದು ಪ್ರಾಂಶುಪಾಲ ಬ್ರೌನಿಂಗ್ ತಿಳಿಸುತ್ತಿದ್ದಾರೆ. ನಾನು ಎಲ್ಲಾ ಆರೋಪಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇನೆ ಮತ್ತು ಕಾನೂನು ಜಾರಿ ಸಂಸ್ಥೆಗಳು ಮತ್ತು ವೃತ್ತಿಪರ ಮಾನದಂಡಗಳ ಕಚೇರಿಯಿಂದ ತನಿಖೆ ನಡೆಯುತ್ತಿದೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ನಾನು ಉದ್ಯೋಗಿ ವಿಷಯಗಳನ್ನು ಚರ್ಚಿಸಲು ಸಾಧ್ಯವಾಗದಿದ್ದರೂ, ತನಿಖೆಯ ಫಲಿತಾಂಶ ಬರುವವರೆಗೂ ಈ ವ್ಯಕ್ತಿಯು ಕ್ಯಾಂಪಸ್‌ಗೆ ಹಿಂತಿರುಗುವುದಿಲ್ಲ. ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ ದಯವಿಟ್ಟು ಶಾಲೆಯಲ್ಲಿ ನನ್ನನ್ನು ಸಂಪರ್ಕಿಸಿ. ಆಲಿಸಿದ್ದಕ್ಕಾಗಿ ಮತ್ತು ನಿಮ್ಮ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು." ಎಂದು ಬರೆದಿದ್ದಾರೆ.