ಮಹಿಳಾ ಶಿಕ್ಷಕಿಯೊಬ್ಬರು 17 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲಿಯೇ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ. 2010ರಲ್ಲಿ ನಡೆದ ಈ ಘಟನೆ ಈಗ ಬೆಳಕಿಬೆ ಬಂದಿದೆ ಎಂದು ಹೇಳಲಾಗುತ್ತಿದೆ. ಬಂಧನದ ನಂತರ ಮಹಿಳೆಯನ್ನು 40 ಲಕ್ಷ ರೂ.ಗಳ ಜಾಮೀನು ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ.
ನವದೆಹಲಿ (ಸೆ. 21): 17 ವರ್ಷದ ವಿದ್ಯಾರ್ಥಿಯೊಂದಿಗೆ ಸಂಬಂಧ ಹೊಂದಿದ್ದ ಕಾರಣಕ್ಕೆ ಮಹಿಳಾ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿದ್ದ ಅವರು 17 ವರ್ಷದ ವಿದ್ಯಾರ್ಥಿಯ ಜೊತೆ ತಮ್ಮ ಕಚೇರಿಯಲ್ಲಯೇ ಸೆಕ್ಸ್ ನಡೆಸಿದ್ದರು ಎಂದು ಆರೋಪಿಸಲಾಗಿದೆ. ವಿಶೇಷವೆಂದರೆ ಮಹಿಳಾ ಶಿಕ್ಷಕಿ ಸುಮಾರು 20 ವರ್ಷಗಳಿಂದ ಇದೇ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಟೀಚರ್ ಆಫ್ ದ ಇಯರ್ ಪ್ರಶಸ್ತಿಯನ್ನೂ ಪಡೆದಿದ್ದರು. ಇದು ಅಮೆರಿಕದಲ್ಲಿ ನಡೆದಿರುವ ಪ್ರಕರಣವಾಗಿದೆ. ಆರೋಪಿ ಮಹಿಳಾ ಶಿಕ್ಷಕಿಯ ಹೆಸರು ಲಿಯಾ ಕ್ವೀನ್. ಆಕೆಗೆ ಈಗ 43 ವರ್ಷ. ಜೆಂಟ್ರಿ ಇಂಟರ್ ಮೀಡಿಯೇಟ್ ಶಾಲೆಯ ಶಿಕ್ಷಕಿಯಾಗಿರುವ ಲಿಯಾ ಅವರನ್ನು ಸೆಪ್ಟೆಂಬರ್ 15 ರಂದು ಬಂಧಿಸಲಾಯಿತು. ಅಕ್ರಮ ಪದಾರ್ಥಗಳನ್ನು ಸೇವಿಸಿದ ಆರೋಪವೂ ಅವರ ಮೇಲಿದೆ. ಅಚ್ಚರಿಯ ವಿಚಾರವೆಂದರೆ, ಈ ಪ್ರಕರಣ ನಡೆದು 12 ವರ್ಷಗಳಾಗಿವೆ. ಸುಮಾರು 40 ಲಕ್ಷ ರೂಪಾಯಿಗಳನ್ನು ಪಾವತಿಸಿದ ನಂತರ, ಲಿಯಾ ಕೂಡ ಸೆಪ್ಟೆಂಬರ್ 17 ರಂದು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದರು. ಜೆಂಟ್ರಿ ಪೊಲೀಸ್ ಇಲಾಖೆಯ ಪ್ರಕಾರ, 2010 ರ ಘಟನೆಯ ಮೇಲೆ ಲೇಹ್ ಅವರನ್ನು ಬಂಧಿಸಲಾಯಿತು. ಆಗ ಈಕೆ 17 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದರು ಎನ್ನಲಾಗಿದ್ದು, ಇದೀಗ ಈ ವಿಷಯ ಬಹಿರಂಗವಾಗಿದೆ.
ಸಂತ್ರಸ್ತ ವಿದ್ಯಾರ್ಥಿಯ ಆರೋಪಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಯ ಪೋಷಕರು, ಮಾಜಿ ಶಿಕ್ಷಕನೂ ಆಗಿರುವ ಲಿಯಾಳ ಮಾಜಿ ಪತಿಯಿಂದ ಪೊಲೀಸರು ಈ ಸಾಕ್ಷ್ಯವನ್ನು ಸಂಗ್ರಹಿಸಿದ್ದಾರೆ. ವಿದ್ಯಾರ್ಥಿಯನ್ನು ತನ್ನ ಮನೆಗೆ ಆಹ್ವಾನಿಸಿದ ಆರೋಪವೂ ಲಿಯಾಳ ಮೇಲಿದೆ. ಲಿಯಾ (Leah Queen) ಇತರ ಹಲವಾರು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಪೊಲೀಸರು ಈ ವಿಷಯದ ಬಗ್ಗೆ ಮುಂದೆ ಬರಲು ಇತರ ಸಂತ್ರಸ್ತರನ್ನು ಕೇಳಿಕೊಂಡಿದ್ದಾರೆ.
ಗ್ಯಾಂಟ್ರಿ ಪಬ್ಲಿಕ್ ಸ್ಕೂಲ್ಸ್ ಸೂಪರಿಂಟೆಂಡೆಂಟ್ ಟೆರ್ರಿ ಡಿಪೋಲಾ (Terry Depola) ಅವರು ಲಿಯಾ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಲಿಯಾ ಜೆಂಟ್ರಿ ಶಾಲೆಯಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ಬೋಧಿಸುತ್ತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. 2014-15ನೇ ಸಾಲಿನಲ್ಲಿ ಲಿಯಾ ಅವರಿಗೆ ವರ್ಷದ ಶಿಕ್ಷಕಿ ಪ್ರಶಸ್ತಿಯೂ ಲಭಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅವರು ಅರ್ಕಾನ್ಸಾಸ್ ಅಸೋಸಿಯೇಶನ್ ಆಫ್ ಹೆಲ್ತ್, ಫಿಸಿಕಲ್ ಎಜುಕೇಶನ್, ರಿಕ್ರಿಯೇಶನ್ ಮತ್ತು ಡ್ಯಾನ್ಸ್‌ನಿಂದ ಈ ಪ್ರಶಸ್ತಿಯನ್ನು ಪಡೆದಿದ್ದರು.
ಬರೀ ಸೆಕ್ಸ್ ಅಲ್ಲ, ಸಂತಾನಾಭಿವೃದ್ಧಿ ಮದುವೆಯ ಮೂಲ ಉದ್ದೇಶ: ಮದ್ರಾಸ್ ಹೈಕೋರ್ಟ್!
ಅಫಿಡವಿಟ್ ಪ್ರಕಾರ, 2010 ರ ಬೇಸಿಗೆಯಲ್ಲಿ ವಿದ್ತಾರ್ಥಿಯನ್ನು ಲೈಂಗಿಕವಾಗಿ (teacher student love story) ಅವರು ಬಳಸಿಕೊಂಡಿದ್ದರು ಎಂದು ಹೇಳಲಾಗಿದೆ. 17 ವರ್ಷ ವಯಸ್ಸಿನ ಹುಡುಗನನ್ನು ಲಿಯಾ ಅವರು ತಮ್ಮ ಶಾಲಾ ಕಛೇರಿಯಲ್ಲಿ (School Office), ಬಾತ್‌ರೂಮ್‌ನಲ್ಲಿ ಲೈಂಗಿಕ ಚಟುವಟಿಕೆಗಾಗಿ ಬಳಸಿಕೊಂಡಿದ್ದರು. ನಾರ್ತ್‌ವೆಸ್ಟ್ ಅರ್ಕಾನ್ಸಾಸ್ ಡೆಮೋಕ್ರಾಟ್-ಗೆಜೆಟ್‌ನಿಂದ ಪಡೆದ ಅಫಿಡವಿಟ್‌ನ ಪ್ರಕಾರ, ಲಿಯಾ ಆರಂಭದಲ್ಲಿ ಬ್ಯಾಸ್ಕೆಟ್‌ಬಾಲ್ ಆಟದ ಮೂಲಕ ವಿದ್ಯಾರ್ಥಿಯ ಜೊತೆ ಸ್ನೇಹ ಬೆಳೆಸಿದ್ದಳು. ಆ ಸಮಯದಲ್ಲಿ ಹುಡುಗನಿಗೆ 17 ವರ್ಷವಾಗಿತ್ತು. ನಂತರ ಲಿಯಾ ಮತ್ತು ಹುಡುಗ ಶಾಲೆಯ ಸಮಯದ ಹೊರಗೆ ಸಾಮಾಜಿಕವಾಗಿ ಕಾಣಿಸಿಕೊಂಡಿದ್ದರು ಮತ್ತು ಮಾರ್ಚ್ 2010 ರಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಸಂವಹನ ನಡೆಸುತ್ತಿದ್ದರು.
ಸೆಕ್ಸ್‌ಗಾಗಿ ದಿನವಿಡೀ ಗಂಡನ ಕಾಟ, ಹೆಲ್ಪ್‌ಲೈನ್‌ಗೆ ಕರೆ ಮಾಡಿ ಸಹಾಯ ಕೋರಿದ ವೃದ್ಧೆ
ವಿದ್ಯಾರ್ಥಿಯ ಪಾಲಕರು, ಲಿಯಾ ಅವರ ಮಾಜಿ ಪತಿ ಪ್ರಕರಣದ ಕುರಿತಾಗಿ ಸಾಕಷ್ಟು ವಿವರಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ, ಇದರಲ್ಲಿ ಲಿಯಾ ಮತ್ತು ವಿದ್ಯಾರ್ಥಿ ಅವಳು ವಾಸಿಸುತ್ತಿದ್ದ ಮನೆಯಲ್ಲಿ ಸಾಕಷ್ಟು ಬಾರಿ ಒಟ್ಟಿಗೆ ನೋಡಿದ್ದೆ. ಈ ವೇಳೆ ಅವರು ಶಿಕ್ಷಕಿ ಹಾಗೂ ವಿದ್ಯಾರ್ಥಿಯ ರೀತಿ ಕಂಡಿರಲಿಲ್ಲ ಎಂದು ಮಾಜಿ ಪತಿ ತಿಳಿಸಿದ್ದಾರೆ.
