ಇರಾನ್ ಮೇಲೆ ಸೀಮಿತ ದಾಳಿಯ ಎಚ್ಚರಿಕೆ ಬೆನ್ನಲ್ಲೇ, ಇರಾನ್‌ನ ಸರ್ವೋಚ್ಚ ನಾಯಕ ಆಯತೋಲ್ಲಾ ಅಲಿ ಖಮೇನಿ ಹಾಗೂ ಅವರ ಪುತ್ರ ಮೋಜತಬಾ ಖಮೇನಿ ಹತ್ಯೆ ಮಾಡುವ ಪ್ಲ್ಯಾನ್ ಕೂಡಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ರಹಸ್ಯ ಯೋಜನೆಗಳ ಪೈಕಿ ಒಂದಾಗಿದೆ ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.
ವಾಷಿಂಗ್ಟನ್: ಇರಾನ್ ಮೇಲೆ ಸೀಮಿತ ದಾಳಿಯ ಎಚ್ಚರಿಕೆ ಬೆನ್ನಲ್ಲೇ, ಇರಾನ್‌ನ ಸರ್ವೋಚ್ಚ ನಾಯಕ ಆಯತೋಲ್ಲಾ ಅಲಿ ಖಮೇನಿ ಹಾಗೂ ಅವರ ಪುತ್ರ ಮೋಜತಬಾ ಖಮೇನಿ ಹತ್ಯೆ ಮಾಡುವ ಪ್ಲ್ಯಾನ್ ಕೂಡಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ರಹಸ್ಯ ಯೋಜನೆಗಳ ಪೈಕಿ ಒಂದಾಗಿದೆ ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.
ಸೇನಾ ಬಳಕೆಗೆ ಅಗತ್ಯವಾದ ಯುರೇನಿಯಂ ಸಂಸ್ಕರಣೆ ನಿಲ್ಲಿಸಬೇಕು
ಸೇನಾ ಬಳಕೆಗೆ ಅಗತ್ಯವಾದ ಯುರೇನಿಯಂ ಸಂಸ್ಕರಣೆ ನಿಲ್ಲಿಸಬೇಕು. ಈ ವಿಷಯದಲ್ಲಿ ಅಮೆರಿಕದ ಜೊತೆ ಇರಾನ್ ಒಪ್ಪಂದ ಮಾಡಬೇಕು ಎಂಬುದು ಅಮೆರಿಕ ತಾಕೀತು. ಆದರೆ ಇದಕ್ಕೆ ಇರಾನ್ ಒಪ್ಪದೇ ಇರುವ ಕಾರಣ, ಆ ದೇಶದ ಮೇಲೆ ಸೀಮಿತ ದಾಳಿಗೆ ಟ್ರಂಪ್ ಯೋಜಿಸಿದ್ದಾರೆ. ಇದರ ಜೊತೆಗೆ ಆಯತೋಲ್ಲಾ ಅಲಿ ಖಮೇನಿ ಹಾಗೂ ಅವರ ಪುತ್ರ ಮೋಜತಬಾ ಖಮೇನಿ ಹತ್ಯೆ ಸೇರಿದಂತೆ ಹಲವು ಮಿಲಿಟರಿ ಆಯ್ಕೆಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದಿವೆ. ಯಾವುದೇ ಕ್ಷಣದಲ್ಲಿ ಅವರು ನಿರ್ಧಾರ ತೆಗೆದುಕೊಳ್ಳಬಹುದು’ ಎಂದು ಟ್ರಂಪ್ ಸಲಹೆಗಾರರೊಬ್ಬರ ಮಾತುಗಳನ್ನು ಉಲ್ಲೇಖಿಸಿ ಅಮೆರಿಕದ ಆಕ್ಸಿಯೋಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
‘ಟ್ರಂಪ್ ಅವರ ಜೊತೆ ಚರ್ಚಿಸಲಾದ ವಿಷಯಗಳಲ್ಲಿ ಖಮೇನಿ, ಮುಂದಿನ ಉತ್ತರಾಧಿಕಾರಿಯಾದ ಅವರ ಪುತ್ರ ಹಾಗೂ ಮುಲ್ಲಾಗಳನ್ನು ಹೊರಗೆಳೆಯುವುದೂ ಒಂದು. ಆದರೆ ದಾಳಿ ಬಗ್ಗೆ ಅಧ್ಯಕ್ಷರು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದನ್ನು ಅವರು ಮಾಡದಿರಬಹುದು. ಆದರೆ ನಾಳೆ ಎದ್ದ ತಕ್ಷಣ ‘ಮಾಡಿ’ ಎಂದು ಕರೆ ನೀಡಲೂಬಹುದು’ ಎಂದು ಟ್ರಂಪ್‌ರ ಹಿರಿಯ ಸಲಹೆಗಾರರೊಬ್ಬರು ಹೇಳಿದ್ದಾಗಿ ವರದಿ ತಿಳಿಸಿದೆ.
ಇರಾನ್ ಮೇಲೆ ಅಮೆರಿಕ ದಾಳಿ ಏಕೆ?
ಅಣ್ವಸ್ತ್ರಕ್ಕೆ ಅಗತ್ಯವಾದ ಯುರೇನಿಯಂ ಸಂಸ್ಕರಣೆ ಇರಾನ್ ನಿಲ್ಲಿಸಬೇಕು ಎಂಬು ಅಮೆರಿಕದ ತಾಕೀತು
ಇದಕ್ಕೆ ಒಪ್ಪದ ಕಾರಣಕ್ಕಾಗಿ ಸರ್ವೋಚ್ಚ ಧಾರ್ಮಿಕ ನಾಯಕ ಖಮೇನಿ ಪದಚ್ಯುತಿಗೆ ಅಮೆರಿಕದ ಪ್ಲ್ಯಾನ್
ಅಣು ಒಪ್ಪಂದಕ್ಕೆ ಒಪ್ಪದಿದ್ದಲ್ಲಿ ಇರಾನ್ ಮೇಲೆ ಸೀಮಿತ ದಾಳಿ ಅಥವಾ ಖಮೇನಿ, ಪುತ್ರನ ಹತ್ಯೆಗೆ ಸ್ಕೆಚ್


