* ಬಿಟ್ಟುಹೋದ ಸೇನಾ ವಾಹನ, ಶಸ್ತ್ರಾಸ್ತ್ರಗಳನ್ನು ತಾಲಿಬಾನಿ ಉಗ್ರರ ಪರೇಡ್* ದೇಶದ ಇತರೆ ಭಾಗಗಳಲ್ಲಿ ಮತ್ತು ಆಫ್ಘನ್‌ ಸೇನೆಗೆ ನೀಡಿದ್ದ ಯುದ್ಧ ವಾಹನಗಳು ಸುಸ್ಥಿತಿಯಲ್ಲಿ

ಕಾಬೂಲ್‌(ಸೆ.02): ವಿದೇಶಿ ಪಡೆಗಳು ದೇಶಬಿಟ್ಟು ಹೋದ ಬೆನ್ನಲ್ಲೇ, ಆ ದೇಶಗಳ ಸೇನಾಪಡೆಗಳು ಬಿಟ್ಟುಹೋದ ಸೇನಾ ವಾಹನ, ಶಸ್ತ್ರಾಸ್ತ್ರಗಳನ್ನು ತಾಲಿಬಾನಿ ಉಗ್ರರು ಬುಧವಾರ ಪರೇಡ್‌ ಮಾಡಿದ್ದಾರೆ. ಕಾಬೂಲ್‌ನಿಂದ ತೆರಳುವ ಮುನ್ನ ಅಮೆರಿಕ ತನ್ನ ವಿಮಾನ, ಕಾಪ್ಟರ್‌, ಯುದ್ಧ ವಾಹನಗಳನ್ನು ನಾಶ ಮಾಡಿತ್ತಾದರೂ, ದೇಶದ ಇತರೆ ಭಾಗಗಳಲ್ಲಿ ಮತ್ತು ಆಫ್ಘನ್‌ ಸೇನೆಗೆ ನೀಡಿದ್ದ ಯುದ್ಧ ವಾಹನಗಳು ಸುಸ್ಥಿತಿಯಲ್ಲೇ ಇದ್ದವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನು ಕಳೆದೊಂದು ತಿಂಗಳನಿಂದ ಹಂತಹಂತವಾಗಿ ತಮ್ಮ ವಶಕ್ಕೆ ಪಡೆಯುತ್ತಾ ಬಂದಿದ್ದ ಉಗ್ರರು ಬುಧವಾರ ಕಂದಹಾರ್‌ನಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ಬಿಟ್ಟುಹೋದ ವಾಹನಗಳನ್ನು ರಸ್ತೆಯಲ್ಲಿ ಸಾಲಾಗಿ ನಿಲ್ಲಿಸಿ, ಚಲಾಯಿಸಿ, ಆಗಸದಲ್ಲಿ ಕಾಪ್ಟರ್‌ ಹಾರಿಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.

ಕಾಬೂಲ್‌ ಆಫ್ಘನ್‌ ರಾಜಧಾನಿಯಾದರೂ, ಕಂದಹಾರ್‌ ತಾಲಿಬಾನ್‌ ಜನ್ಮತಾಳಿದ ಸ್ಥಳ. ಹೀಗಾಗಿ ಆ ಪ್ರದೇಶವನ್ನು ಉಗ್ರರು ಹೆಚ್ಚು ಇಷ್ಟಪಡುತ್ತಾರೆ.