Asianet Suvarna News Asianet Suvarna News

ಕುಟುಂಬಸ್ಥರ ಕಣ್ಣೆದುರೇ ಗರ್ಭಿಣಿ ಪೊಲೀಸ್ ಅಧಿಕಾರಿಯ ಹತ್ಯೆಗೈದ ತಾಲಿಬಾನ್ ರಕ್ಕಸರು!

* ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ರಕ್ಕಸರ ಅಟ್ಟಹಾಸ

* ದಿನೇ ದಿನೇ ಸಾವಿನ ಭಯದಲ್ಲಿ ಬದುಕುತ್ತಿದ್ದಾರೆ ಹೆಣ್ಮಕ್ಕಳು

* ಕುಟುಂಬಸ್ಥರ ಕಣ್ಣೆದುರೇ ಗರ್ಭಿಣಿ ಪೊಲೀಸ್ ಅಧಿಕಾರಿಯ ಹತ್ಯೆಗೈದ ತಾಲಿಬಾನ್ ರಕ್ಕಸರು!

 

Taliban Kills Pregnant Afghan Policewoman In Front Of Her Family Report pod
Author
Bangalore, First Published Sep 6, 2021, 2:46 PM IST
  • Facebook
  • Twitter
  • Whatsapp

ಕಾಬೂಲ್(ಸೆ.06): ಅಪ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬೆನ್ನಲ್ಲೇ, ಬರ್ಬರ ಹತ್ಯೆಯ ಘಟನೆಗಳು ಬೆಳಕಿಗೆ ಬರಲಾರಂಭಿಸಿವೆ. ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ, ತಾಲಿಬಾನ್ ಉಗ್ರರು ಗರ್ಣಿಣಿ ಪೊಲೀಸ್ ಪೊಲೀಸ್ ಅಧಿಕಾರಿಯನ್ನು ಆಕೆಯ ಕುಟುಂಬಸ್ಥರ ಕಣ್ಣೆದುರೇ ರಕ್ತಸಿಕ್ತವಾಗಿ ಕೊಂದು ಹಾಕಿರುವ ಘಟನೆ ಘೋರ್ ಪ್ರಾಂತ್ಯದಲ್ಲಿ ನಡೆದಿದೆ. ಅಫ್ಘಾನಿಸ್ತಾನದ ಪತ್ರಕರ್ತ ಟ್ವೀಟ್ ಮಾಡಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಟ್ವೀಟ್‌ನಲ್ಲಿ ನಿಗಾರಾ 6 ತಿಂಗಳ ಗರ್ಭಿಣಿ ಎಂಬ ಮಾಹಿತಿಯನ್ನೂ ನಿಡಲಾಗಿದೆ. ಆದರೆ ತಾಲಿಬಾನ್ ಉಗ್ರರು ಯಾವುದೇ ಕರುಣೆ ತೋರಿಸದೆ, ಆಕೆಯ ಪತಿ ಮತ್ತು ಮಕ್ಕಳೆದುರೇ ಆಕೆಯನ್ನು ಕೊಂದು ಹಾಕಿದ್ದಾರೆ ಎಂದೂ ಬರೆದಿದ್ದಾರೆ.

ಬಿಬಿಸಿ ವಿಶ್ವಾಸಾರ್ಹತೆಗೆ ಕಪ್ಪುಚುಕ್ಕೆ: ಅಪ್ಘಾನಿಸ್ತಾನದಲ್ಲಿ ಪಾಕ್‌ ಕುತಂತ್ರ ಹೊಗಳಿದ ನಿರೂಪಕಿ!

ಹೀಗಿದ್ದರೂ ಆ ಮಹಿಳಾ ಪೊಲೀಸ್ ಅಧಿಕಾರಿಯನ್ನು ತಾಲಿಬಾನ್ ಉಗ್ರರು ಏಕೆ ಗುಂಡಿಕ್ಕಿ ಕೊಂದಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಇನ್ನು ಅತ್ತ ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಹೇಳುವಂತೆ ತಾಲಿಬಾನಿಯರ ಭಯದಿಂದ, ಹಿಜಾಬ್ ಮತ್ತು ಬುರ್ಖಾ ಖರೀದಿಸಲು ಮಹಿಳೆಯರ ಸ್ಪರ್ಧೆ ಏರ್ಪಟ್ಟಿದೆ. ಹಿಜಾಬ್ ಮತ್ತು ಬುರ್ಖಾ ಖರೀದಿಸಲು ಜನರು ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ. 1990 ರ ದಶಕದಲ್ಲಿ ತಾಲಿಬಾನ್ ಆಕ್ರಮಣದ ನಂತರ ಇದೇ ರೀತಿಯ ಘಟನೆ ಕಂಡುಬಂದಿತ್ತು ಎಂದು ವರದಿ ಮಾಡಿದೆ.

ಇನ್ನು ಈ ಹತ್ಯೆಯ ಘಟನೆ ಹೆರಾತ್‌ನಲ್ಲಿ ಮಹಿಳೆಯರು ಪ್ರತಿಭಟಿಸಿದ ಸಂದರ್ಭದಲ್ಲೇ ವರದಿಯಾಗಿದೆ ಎಂಬುವುದು ಉಲ್ಲೇಖನೀಯ. ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ಹೊಸ ತಾಲಿಬಾನ್ ಸರ್ಕಾರದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಬೇಕು ಎಂದು ಈ ಮಹಿಳೆಯರು ಒತ್ತಾಯಿಸಿದರು. ಇದರೊಂದಿಗೆ, ಈ ಮಹಿಳೆಯರು ಕೂಡ ಮಹಿಳೆಯರಿಗೆ ಪುರುಷರ ಸಮಾನ ಹಕ್ಕುಗಳ ಬೇಡಿಕೆಗಾಗಿ ತಮ್ಮ ಧ್ವನಿಯನ್ನು ಎತ್ತಿದ್ದರು. ಹೆರಾತ್‌ನಲ್ಲಿ ಮಹಿಳಾ ಪ್ರತಿಭಟನಾಕಾರರು ಬ್ಯಾನರ್‌ಗಳು ಮತ್ತು ಫಲಕಗಳನ್ನು ಹಿಡಿದಿದ್ದರು. ದೇಶದ ರಾಜಕೀಯ ವ್ಯವಸ್ಥೆಯಿಂದ ಮಹಿಳೆಯರನ್ನು ಹೊರಗಿಡುವುದನ್ನು ಅವರು ವಿರೋಧಿಸುತ್ತಿದ್ದರು. 

ಶರ​ಣಾ​ಗುವ ಸ್ಥಿತಿ ಬಂದರೆ ತಲೆ​ಗೆ ಗುಂಡು ಹಾರಿಸು: ಅಂಗರಕ್ಷಕನಿಗೆ ಸಲೇಹ್‌ ಸೂಚನೆ!

ತಾಲಿಬಾನ್‌ ಕಾಬೂಲ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಮಾನವ ಹಕ್ಕುಗಳು ಮತ್ತು ಮಹಿಳಾ ಹಕ್ಕುಗಳ ವಿಷಯಗಳಲ್ಲಿ ಅಫ್ಘಾನಿಸ್ತಾನ ಕಳೆದ 20 ವರ್ಷಗಳಲ್ಲಿ ಕಂಡ ಪ್ರಗತಿ ಇನ್ನು ಉಳಿಯುವುದಿಲ್ಲ ಎಂದು ತಜ್ಞರು ಭಯಪಟ್ಟಿದ್ದಾರೆ. ತಾಲಿಬಾನ್ ಆಳ್ವಿಕೆಯಲ್ಲಿ ಮಹಿಳೆಯರು ಅನಿಶ್ಚಿತ ಭವಿಷ್ಯವನ್ನು ಎದುರಿಸಬೇಕಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದರು.

Follow Us:
Download App:
  • android
  • ios