'ಗುಂಡಿಟ್ಟು ಮಹಿಳೆಯರ ಕೊಂದು ಶವದೊಂದಿಗೆ ತಾಲೀಬಾನಿಗಳ ಸೆಕ್ಸ್'
* ಶವದೊಂದಿಗೆ ಸೆಕ್ಸ್ ನಡೆಸುವ ತಾಲೀಬಾನಿಗಳು
* ವಿಕೃತ ಮನಸ್ಸಿನವರಿಂದ ಹೀನ ಅತ್ಯಾಚಾರ
* ಭಾರತಕ್ಕೆ ಬಂದು ರಕ್ಷಣೆ ಪಡೆದುಕೊಂಡ ಮಹಿಳೆ ಬಿಚ್ಚಿಟ್ಟ ಕರಾಳ ಸತ್ಯ
* ವಿಜ್ಞಾನದ ಭಾಷೆಯಲ್ಲಿ ಇದನ್ನು ನೆಕ್ರೊಫೀಲಿಯಾ ಎನ್ನುತ್ತಾರೆ.
ನವದೆಹಲಿ( ಆ. 23) ತಾಲೀಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡು ಅಟ್ಟಹಾಸ ಮೆರೆಯುತ್ತಲೇ ಇದ್ದಾರೆ. ಅನೇಕ ದೇಶಗಳು ಹರಸಹಾಸ ಮಾಡಿ ತಮ್ಮ ದೇಶದ ನಾಗರಿಕರನ್ನು ಕರೆಸಿಕೊಂಡಿವೆ.
ತಾಲೀಬಾನ್ ದಾಳಿಯ ನಂತರ ಅಫ್ಘಾನ್ ನಿಂದ ಭಾರತಕ್ಕೆ ಬಂದು ರಕ್ಷಣೆ ಪಡೆದುಕೊಂಡಿರುವ ಮಹಿಳೆಯೊಬ್ಬರು ತಾಲೀಬಾನಿಗಳ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ. ತಾಲೀಬಾನಿಗಳು ಶವಗಳೊಂದಿಗೆ ಸೆಕ್ಸ್ ಮಾಡುತ್ತಾರೆ. ಇದನ್ನು ಅತ್ಯಾಚಾರ ಎಂದೇ ಕರೆಯಬೇಕು. ಕ್ರೂರವಾಗಿ ಹಿಂಸಿಸಿ ಸಾಯಿಸುವುದು ಅಲ್ಲದೇ ಶವದೊಂದಿಗೆ ಸೆಕ್ಸ್ ನಡೆಸಿ ವಿಕೃತ ಆನಂದ ಪಡೆದುಕೊಳ್ಳುತ್ತಾರೆ ಎಂದಿದ್ದಾರೆ.
ಶವದೊಂದಿಗೆ ಸೆಕ್ಸ್.. ಇಂಥವರು ಇರ್ತಾರಾ?
ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹಿಳೆ ಮುಸ್ಕಾನ್ ತಾಲೀಬಾನಿಗಳ ದಾಳಿಗೂ ಮುನ್ನ ಅಫ್ಘಾನ್ ನಲ್ಲಿ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದರು. ಜೀವ ಬೆದರಿಕೆ ಕಾರಣ ಭಾರತಕ್ಕೆ ಬಂದಿದ್ದಾರೆ.
ಶವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ನೆಕ್ರೊಫೀಲಿಯಾ ಎನ್ನುತ್ತಾರೆ. ತಾಲಿಬಾನಿಗಳು ಮಹಿಳೆಯರನ್ನು ಹೊತ್ತೊಯ್ದು ಗುಂಡಿಕ್ಕಿ ಕೊಂದ ನಂತರ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಯವ ತಾಲೀಬಾಣಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೆಣ್ಣನ್ನು ಭೋಗದ ವಸ್ತು ಎಂದುಕೊಂಡಿದ್ದು ಪ್ರತಿ ಮನೆಯಿಂದ ಹೆಣ್ಣೊಂದನ್ನು ಹೊತ್ತಯ್ಯುತ್ತಾರೆ ಎಂದಿದ್ದಾರೆ.
ಶವಪೆಟ್ಟಿಗೆಯಲ್ಲಿ ತುಂಬಿ ಸೆಕ್ಸ್ ಗುಲಾಮಗಿರಿಗೆ, ಊಟ ರುಚಿ ಆಗಿಲ್ಲವೆಂದು ಮಹಿಳೆಯರನ್ನು ಸುಡ್ತಾರೆ!
ಪೊಲೀಸ್ ನೌಕರಿಯಲ್ಲಿದ್ದ ಮುಸ್ಕಾನ್ ಗೆ ಮಹಿಳೆಯೊಬ್ಬಳು ಉದ್ಯೋಗ ಮಾಡುತ್ತಿರುವುದನ್ನು ಸಹಿಸದ ತಾಲೀಬಾನಿಗಳು ಅಕೆಗೆ ಜೀವ ಬೆದರಿಕೆ ಹಾಕಿದ್ದರು. ಕಡೆಗೆ ಮನೆಯಯವರ ಒತ್ತಡ ತಾಳಲಾರದೆ ಆಕೆ ನೌಕರಿಗೆ ವಿದಾಯ ಹೇಳಿದ್ದರು. ಸರ್ಕಾರಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬನಿಗೂ ಜೀವ ಬೆದರಿಕೆ ಸಾಮಾನ್ಯ ಎಂಬ ಕರಾಳ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ನೆಕ್ರೊಫೀಲಿಯಾ: ಶವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ನೆಕ್ರೊಫೀಲಿಯಾ ಎನ್ನುತ್ತಾರೆ. ವಿಕೃತ ಮನಸ್ಸಿನ ವ್ಯಕ್ತಿಗಳು ಮಾಥ್ರ ಇದನ್ನು ಮಾಡಲು ಸಾಧ್ಯ. ಕನ್ನಡದ ದಂಡುಪಾಳ್ಯ ಸಿನಿಮಾದಲ್ಲಿಯತೂ ಸಹ ಶವದೊಂದಿಗೆ ಸೆಕ್ಸ್ ಗೆ ಸಂಬಂಧಿಸಿದ ದೃಶ್ಯವೊಂದಿತ್ತು.