Asianet Suvarna News Asianet Suvarna News

Taliban Commitment: ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ತಾಲಿಬಾನ್‌ ಬದ್ಧ

ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಶಿಕ್ಷಣ ಹಾಗೂ ಉದ್ಯೋಗ ನೀಡಲು ಬದ್ಧ
ತಾಲಿಬಾನ್‌ ಆಡಳಿತವು ಯುಎಸ್ ಜೊತೆ ಉತ್ತಮ ಸಂಬಂಧವನ್ನು ಬಯಸುತ್ತದೆ
ಸಂದರ್ಶನದಲ್ಲಿ ತಾಲಿಬಾನ್ ಮುಖ್ಯಸ್ಥರ ಹೇಳಿಕೆ 
 

Taliban committed to giving education and jobs to girls and women akb
Author
Bangalore, First Published Dec 14, 2021, 11:18 AM IST
  • Facebook
  • Twitter
  • Whatsapp

ಅಫ್ಘಾನಿಸ್ತಾನ(ಡಿ.14) ಅಫ್ಘಾನಿಸ್ತಾನ(Afghanistan)ದ ಹೊಸ ತಾಲಿಬಾನ್ ಆಡಳಿತಗಾರರು ಹುಡುಗಿಯರು ಮತ್ತು ಮಹಿಳೆಯರಿಗೆ ಶಿಕ್ಷಣ(education) ಮತ್ತು ಉದ್ಯೋಗ ನೀಡಲು ತಾತ್ವಿಕವಾಗಿ ಬದ್ಧರಾಗಿದ್ದಾರೆ. ಅವರು ಹಿಂದಿನ ಆಡಳಿತದಿಂದ ಗಮನಾರ್ಹವಾಗಿ ಬದಲಾಗಿದ್ದು, ಹತಾಶೆಗೊಳಗಾಗಿರುವ ಲಕ್ಷಾಂತರ ಅಫ್ಘಾನರು(Afghans) ಜಗತ್ತಿನ ಕರುಣೆ ಹಾಗೂ ಸಹಾನುಭೂತಿಯನ್ನು ಬಯಸಿದ್ದಾರೆ ಎಂದು  ತಾಲಿಬಾನ್‌ ಸಂಘಟನೆಯ ಪ್ರಮುಖ ನಾಯಕ(Taliban leader)ರೊಬ್ಬರು ಹೇಳಿಕೆ ನೀಡಿದ್ದಾರೆ. 

ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ(Amir Khan Muttaqi) ಅವರು ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಹೇಳಿಕೆಯಲ್ಲಿ  ತಾಲಿಬಾನ್ ಸರ್ಕಾರವು ಎಲ್ಲಾ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ ಮತ್ತು  ಅಮೆರಿಕಾದೊಂದಿಗೆ ಅದು ಯಾವುದೇ ಸಮಸ್ಯೆ ಹೊಂದಿಲ್ಲ. ಆಗಸ್ಟ್ 15 ರಂದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲು ಇತರ ದೇಶಗಳು ಅಫ್ಘಾನಿಸ್ತಾನಕ್ಕೆ 10 ಶತಕೋಟಿ ಮೊತ್ತದ ನೆರವು ನೀಡಲು ಬಯಸಿದ್ದರು. ಆದರೆ ತಾಲಿಬಾನ್‌ ಅಲ್ಲಿದ್ದ ಅಮೆರಿಕಾ ಬೆಂಬಲಿತ ಅಧ್ಯಕ್ಷ ಆಶ್ರಫ್‌ ಘನಿ ಸರ್ಕಾರವನ್ನು ತೆಗೆದು ಹಾಕಿ ತಾನು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ನೀಡಬೇಕಾಗಿದ್ದ  10 ಶತಕೋಟಿ ಮೊತ್ತದ ನೆರವನ್ನು ಇತರ ದೇಶಗಳು ತಡೆ ಹಿಡಿದಿದ್ದವು. ಈಗ ಅದನ್ನು ಅಫ್ಘಾನ್‌ಗೆ ನೀಡುವಂತೆ  ಅಮೆರಿಕಾ ಹಾಗೂ ಇತರ ರಾಷ್ಟ್ರಗಳಿಗೆ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಕೇಳಿದ್ದಾರೆ. 

ಅಫ್ಘಾನಿಸ್ತಾನದ ವಿರುದ್ಧ ಹೇರಿದ ನಿರ್ಬಂಧಗಳಿಂದ  ಯಾವುದೇ ಪ್ರಯೋಜವಿಲ್ಲ

ಅಫ್ಘಾನಿಸ್ತಾನವನ್ನು ಅಸ್ಥಿರಗೊಳಿಸುವುದು ಅಥವಾ ದುರ್ಬಲ ಅಫ್ಘಾನ್ ಸರ್ಕಾರವನ್ನು ಹೊಂದುವುದು ಯಾರೊಬ್ಬರ ಆಕಾಂಕ್ಷೆಯಲ್ಲ. ಈ ತಾಲಿಬಾನ್‌ ಸರ್ಕಾರದಲ್ಲಿ ಅವರ ಸಹಾಯಕರಲ್ಲಿ ಹಿಂದಿನ ಸರ್ಕಾರದ ಉದ್ಯೋಗಿಗಳು ಮತ್ತು ತಾಲಿಬಾನ್ ಶ್ರೇಣಿಯಿಂದ ನೇಮಕಗೊಂಡವರು ಇದ್ದಾರೆ ಎಂದ ಮುತ್ತಕಿ, ಹೆಣ್ಣುಮಕ್ಕಳ ಶಿಕ್ಷಣ ಮತ್ತು ಉದ್ಯೋಗಿಗಳ ಮೇಲೆ ತಾಲಿಬಾನ್ ಹೇರಿದ ನಿರ್ಬಂಧಗಳ ಬಗ್ಗೆ ವಿಶ್ವದ ಇತರ ದೇಶಗಳು ವ್ಯಕ್ತಪಡಿಸಿದ ಆಕ್ರೋಶವನ್ನು ಒಪ್ಪಿಕೊಂಡರು. ಅಫ್ಘಾನಿಸ್ತಾನದ ಅನೇಕ ಭಾಗಗಳಲ್ಲಿ, ತಾಲಿಬಾನ್ ಅಧಿಕಾರ ವಹಿಸಿಕೊಂಡಾಗಿನಿಂದ 7 ರಿಂದ 12 ನೇ ತರಗತಿಯ ಮಹಿಳಾ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಅನುಮತಿ ನಿರಾಕರಿಸಲಾಗಿದೆ. ಮತ್ತು ನಾಗರಿಕ ಸೇವೆಯಲ್ಲಿದ್ದ ಅನೇಕ ಮಹಿಳೆಯರಿಗೆ ಮನೆಯಲ್ಲೇ ಇರುವಂತೆ ಹೇಳಲಾಗಿದೆ. ತಾಲಿಬಾನ್ ಆಡಳಿತಗಾರರು ದೇಶದಲ್ಲಿ ತಮ್ಮ ಇಸ್ಲಾಂ ಧರ್ಮದ ತೀವ್ರ ವ್ಯಾಖ್ಯಾನವನ್ನು ಜಾರಿಗೆ ತರುವ ಸಲುವಾಗಿ ಶಾಲೆಗಳು ಮತ್ತು ಕೆಲಸದ ಸ್ಥಳದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ  ವ್ಯವಸ್ಥೆ ಮಾಡಲು ಸಮಯ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

Afghans Sell Body Organs: ಆಹಾರಕ್ಕಾಗಿ ದೇಹದ ಅಂಗಾಗಗಳನ್ನೇ ಮಾರುತ್ತಿರುವ ಅಫ್ಘಾನಿಗಳು!

ತಾಲಿಬಾನ್‌ಗಳು ಹಿಂದಿನಂತಿಲ್ಲ. ಅವರು ತಮ್ಮ ಆಡಳಿತದ ರೀತಿ ನೀತಿಗಳಲ್ಲಿ ಬದಲಾವಣೆ ತಂದಿದ್ದಾರೆ. ನಾವು ಆಡಳಿತದಲ್ಲಿ ಮತ್ತು ರಾಜಕೀಯದಲ್ಲಿ ರಾಷ್ಟ್ರ ಮತ್ತು ಪ್ರಪಂಚದೊಂದಿಗೆ ಸಂವಹನದಲ್ಲಿ ಪ್ರಗತಿ ಸಾಧಿಸಿದ್ದೇವೆ. ಪ್ರತಿ ದಿನವೂ ನಾವು ಹೆಚ್ಚಿನ ಅನುಭವವನ್ನು ಪಡೆಯುತ್ತೇವೆ ಮತ್ತು ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತೇವೆ ಎಂದು ಅವರು ಹೇಳಿದರು. ಹೊಸ ತಾಲಿಬಾನ್ ಸರ್ಕಾರದ ಅಡಿಯಲ್ಲಿ, ದೇಶದ 34 ಪ್ರಾಂತ್ಯಗಳಲ್ಲಿ 10 ಹಾಗೂ 12 ನೇ ತರಗತಿಗೆ ಹುಡುಗಿಯರು ಶಾಲೆಗೆ ಹೋಗುತ್ತಿದ್ದಾರೆ, ಖಾಸಗಿ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯ(universities)ಗಳು ಅಡೆ ತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಮತ್ತು ಈ ಹಿಂದೆ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಶೇಕಡಾ  100% ಮಹಿಳೆಯರು ಮತ್ತೆ ಕೆಲಸಕ್ಕೆ  ಹಿಂತಿರುಗಿದ್ದಾರೆ ಎಂದು ಮುತ್ತಕಿ ಹೇಳಿದರು. ಕೆಲಸದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ನಾವು ತಾತ್ವಿಕವಾಗಿ ಬದ್ಧರಾಗಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದರು.

Taliban bans Forced Marriage: ಸ್ತ್ರೀ ಒಪ್ಪಿಗೆ ಇಲ್ಲದ ಬಲವಂತದ ಮದುವೆ ನಿಷೇಧಿಸಿದ ತಾಲಿಬಾನ್‌

ಪ್ರಸ್ತುತ ಅಫ್ಘಾನಿಸ್ತಾನದಲ್ಲಿ (Afghanistan) ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು ತಾಲಿಬಾನ್ (Taliban) ಆಡಳಿತ ಮತ್ತೆ ಸ್ಥಾಪಿತವಾದ ಬಳಿಕ, ಅಲ್ಲಿನ ಜನರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ.  ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಬದುಕು ಸಾಗಿಸಲು ಜನರು ತಮ್ಮ ದೇಹಗಳ ಅಂಗಾಂಗಗಳನ್ನೇ (Body Organs) ಮಾರಾಟ ಮಾಡಿಕೊಂಡು ಜೀವನ ನಡೆಸುವಂತಹ ಪರಿಸ್ಥಿತಿಗೆ ಬಂದು ತಲುಪಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಾಬೂಲ್‌ನ (Kabul) ಬೀದಿಯೊಂದರ ಮರವೊಂದಕ್ಕೆ ಅಂಟಿಸಿದ್ದ ಭಿತ್ತಿಪತ್ರದಲ್ಲಿ  "ಕಿಡ್ನಿ ಮಾರಾಟಕ್ಕಿದೆ" ಎಂದು ಬರೆಯಲಾಗಿದ್ದು, ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿತ್ತು. 
 

Follow Us:
Download App:
  • android
  • ios