ದೇಶದ ಎಲ್ಲಾ ಮನೆಗಳ ಕಿಟಕಿ ಕ್ಲೋಸ್ ಮಾಡಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಹೊಸ ರೂಲ್ಸ್‌!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಮಹಿಳೆಯರನ್ನು ನೋಡಬಹುದಾದ ಸ್ಥಳಗಳಲ್ಲಿ ಕಿಟಕಿಗಳ ನಿರ್ಮಾಣವನ್ನು ನಿಷೇಧಿಸಿದೆ. ಮಹಿಳೆಯರನ್ನು ಅಡುಗೆಮನೆಯಲ್ಲಿ, ಅಂಗಳದಲ್ಲಿ ಅಥವಾ ಬಾವಿಗಳಿಂದ ನೀರು ತರುತ್ತಿರುವುದನ್ನು ನೋಡುವುದು ಅಶ್ಲೀಲತೆಗೆ ಕಾರಣವಾಗಬಹುದು ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ. ಈ

 

Taliban banned making windows in Afghanistan houses close the existing ones with bricks san

ನವದೆಹಲಿ (ಡಿ.30): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಶನಿವಾರವೂ ತಾಲಿಬಾನ್‌ಗಳು ಮಹಿಳೆಯರನ್ನು ನೋಡಬಹುದಾದ ಸ್ಥಳಗಳಾದ ಮನೆಯ ಕಟ್ಟಡಗಳಲ್ಲಿ ಕಿಟಕಿಗಳ ನಿರ್ಮಾಣ ಮಾಡೋದನ್ನ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಮಹಿಳೆಯರ ಸ್ವಾತಂತ್ರ್ಯದ ಮೇಲೆ ತಾಲಿಬಾನ್‌ ಹೊರಡಿಸಿರುವ ಹೊಸ ಆದೇಶ ಇದಾಗಿದೆ. ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಇದನ್ನು ತಿಳಿಸಿದ್ದಾರೆ. ಹೊಸ ಕಟ್ಟಡಗಳಲ್ಲಿ ಪ್ರಾಂಗಣ, ಅಡುಗೆ ಮನೆ, ನೆರೆಹೊರೆಯವರ ಮನೆಗಳ ಆವರಣಗಳು ಮತ್ತು ಮಹಿಳೆಯರು ಸಾಮಾನ್ಯವಾಗಿ ಬಳಸುವ ಇತರ ಸ್ಥಳಗಳಲ್ಲಿ ಕಿಡಕಿಗಳನ್ನು ಹೊಂದಿರಬಾರದು ಎಂದು ತಿಳಿಸಿದ್ದಾರೆ. ಹೊಸದಾಗಿ ನಿರ್ಮಾಣ ಮಾಡುವ ಯಾವುದೇ ಮನೆಗಳಲ್ಲಿ ಇಂಥ ಸ್ಥಳಗಳಲ್ಲಿ ಕಿಟಕಿಗಳು ಇರಬಾರದು ಎಂದು ತಾಲಿಬಾನ್‌ ಆದೇಶ ಹೊರಡಿಸಿದೆ.

ತಾಲಿಬಾನ್ ವಕ್ತಾರರ ಪ್ರಕಾರ, ಮಹಿಳೆಯರನ್ನು ಅಡುಗೆಮನೆಯಲ್ಲಿ, ಅಂಗಳದಲ್ಲಿ ನೋಡುವುದು ಅಥವಾ ಬಾವಿಗಳಿಂದ ನೀರು ತರುತ್ತಿರುವುದನ್ನು ನೋಡುವುದು ಅಶ್ಲೀಲತೆಗೆ ಕಾರಣವಾಗಬಹುದು ಎಂದಿದ್ದಾರೆ.

ಹೊಸದಾಗಿ ನಿರ್ಮಾಣ ಮಾಡಲಾಗಿರುವ ಕಟ್ಟಡಗಳಲ್ಲಿ ಇಂಥ ಸ್ಥಳಗಳಲ್ಲಿ ಕಿಟಕಿಗಳು ಇರಬಾರದು. ಈ ಬಗ್ಗೆ ನಿಗಾ ವಹಿಸುವಂತೆ ಪುರಸಭೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರಸ್ಪರ ಒಬ್ಬರನ್ನೊಬ್ಬರು ನೆರೆಹೊರೆಯವರು ನೋಡುವಂಥ ಪ್ರದೇಶಗಳನ್ನು ಕಿಟಿಗಳನ್ನು ಹೊಂದಿರಬಾರದು ಎಂದು ತಿಳಿಸಲಾಗಿದೆ. ಹಾಗೇನಾದರೂ ಈಗಾಗಲೇ ನಿರ್ಮಾಣ ಮಾಡಿರುವ ಮನೆಗಳಲ್ಲಿ ಇಂಥ ಪ್ರದೇಶಗಳಲ್ಲಿ ಕಿಟಿಕಿಗಳು ಇದ್ದಿದ್ದಲ್ಲಿ, ಮನೆಯ ಮಾಲೀಕರು ಇಟ್ಟಿಗೆಯನ್ನು ಬಳಸಿ ಅದನ್ನು ಮುಚ್ಚಬೇಕು ಎಂದು ತಿಳಿಸಲಾಗಿದೆ.

ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಮರಳಿದ ನಂತರ, ತಾಲಿಬಾನ್ ನಿರಂತರವಾಗಿ ಮಹಿಳೆಯರ ವಿರುದ್ಧ ತುಘಲಕ್ ಆದೇಶಗಳನ್ನು ಹೊರಡಿಸುತ್ತಿದೆ. ಈ ತಿಂಗಳ ಆರಂಭದಲ್ಲಿ, ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ನರ್ಸಿಂಗ್ ತರಬೇತಿಯನ್ನು ತಾಲಿಬಾನ್ ನಿಷೇಧಿಸಿತ್ತು. ಇದರ ಹಿಂದಿನ ಕಾರಣವನ್ನೂ ನೀಡಿಲ್ಲ. ಈ ವರ್ಷದ ಆಗಸ್ಟ್‌ನಲ್ಲಿ, ಅಫಘಾನ್ ಮಹಿಳೆಯರು ಸಾರ್ವಜನಿಕವಾಗಿ ಮಾತನಾಡುವುದನ್ನು ಮತ್ತು ಅವರ ಮುಖವನ್ನು ತೋರಿಸುವುದನ್ನು ನಿಷೇಧಿಸಲಾಗಿತ್ತು. ಇದರೊಂದಿಗೆ ಮಹಿಳೆಯರು ತೀರಾ ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಬರಬೇಕು ಎಂದು ಹೇಳಲಾಗಿದೆ. ಇದಲ್ಲದೆ, ತಾಲಿಬಾನ್ ಮಹಿಳೆಯರು ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿದೆ.

ಅಫ್ಘಾನಿಸ್ತಾನದಲ್ಲಿ ಷರಿಯಾ ಕಾನೂನು: 2021 ರಲ್ಲಿ ದಂಗೆಯ ನಂತರ ತಾಲಿಬಾನ್ ಸರ್ಕಾರ ಇಲ್ಲಿ ನಿಯಂತ್ರಣವನ್ನು ತೆಗೆದುಕೊಂಡಿತು. ಇದಾದ ನಂತರ, ಅವರು ದೇಶದಲ್ಲಿ ಷರಿಯಾ ಕಾನೂನನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದರು. ವಾಸ್ತವವಾಗಿ, ಷರಿಯಾ ಇಸ್ಲಾಂ ಧರ್ಮವನ್ನು ನಂಬುವ ಜನರಿಗೆ ಕಾನೂನು ವ್ಯವಸ್ಥೆಯಂತಿದೆ. ಇದನ್ನು ಅನೇಕ ಇಸ್ಲಾಮಿಕ್ ದೇಶಗಳಲ್ಲಿ ಬಳಸಲಾಗುತ್ತದೆ. ಆದರೂ, ಪಾಕಿಸ್ತಾನ ಸೇರಿದಂತೆ ಹೆಚ್ಚಿನ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಇದು ಸಂಪೂರ್ಣವಾಗಿ ಕಾರ್ಯಗತಗೊಂಡಿಲ್ಲ. ಇದು ದೈನಂದಿನ ಜೀವನದಿಂದ ಹಿಡಿದು ಅನೇಕ ಪ್ರಮುಖ ವಿಷಯಗಳ ಮೇಲೆ ಕಾನೂನುಗಳನ್ನು ಹೊಂದಿದೆ.

ತಾಲಿಬಾನ್ ಆಡಳಿತದಿಂದ ದೂರಾಗುತ್ತಿದೆಯೇ ಸಹಯೋಗಿ ಹಕ್ಕಾನಿ ನೆಟ್‌ವರ್ಕ್?

ಷರಿಯಾವು ಕುಟುಂಬ, ಹಣಕಾಸು ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಕಾನೂನುಗಳನ್ನು ಒಳಗೊಂಡಿದೆ. ಮದ್ಯಪಾನ, ಮಾದಕ ದ್ರವ್ಯ ಸೇವನೆ ಅಥವಾ ಕಳ್ಳಸಾಗಾಣಿಕೆ ಷರಿಯಾ ಕಾನೂನಿನ ಅಡಿಯಲ್ಲಿ ಕೆಲವು ಪ್ರಮುಖ ಅಪರಾಧಗಳಾಗಿವೆ. ಅದಕ್ಕಾಗಿಯೇ ಈ ಅಪರಾಧಗಳು ಕಠಿಣ ಶಿಕ್ಷೆಯ ನಿಯಮಗಳನ್ನು ಹೊಂದಿವೆ.ತಾಲಿಬಾನ್ ಆಡಳಿತವು ಇಸ್ಲಾಮಿಕ್ ಕಾನೂನು ಆಫ್ಘನ್ ಪುರುಷರು ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತದೆ ಎಂದು ಹೇಳಿದೆ.

ಮಹಿಳೆಯರ ಸ್ವಾತಂತ್ರ್ಯಕ್ಕೆ ಮತ್ತಷ್ಟು ನಿರ್ಬಂಧ; ಸ್ತ್ರೀಯರ ಜೋರು ದನಿಗೂ ತಾಲಿಬಾನ್‌ ಹೊಸ ರೂಲ್ಸ್!

Latest Videos
Follow Us:
Download App:
  • android
  • ios