ಯೋಗಿ ಸ್ವಾಮಿ ಯೋ 9 ತಿಂಗಳ ಹಿಂದೆ ನುಡಿದ ಭವಿಷ್ಯ ನಿಜವಾಗುತ್ತಿದೆಯಾ? ಸ್ವಾಮಿ ಯೋ, ರಣವೀರ್‌ ಅಹಾಬಾದಿಯಾ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದೇನು? ಭಾರತ ಮತ್ತು ಪಾಕಿಸ್ತಾನ ನಡುವಿನ ಈಗಿನ ಘರ್ಷಣೆಗಳು ಈ ಭವಿಷ್ಯವಾಣಿಯನ್ನು ನೆನಪಿಗೆ ತಂದಿವೆ. ಏನಿದು ವೈರಲ್‌ ವಿಡಿಯೋ? 

ಮೇ 2025ರಿಂದ ಮೂರನೇ ವಿಶ್ವ ಯುದ್ಧ ಶುರುವಾಗಲಿದೆಯಾ? ಈಗ ಭಾರತ- ಪಾಕಿಸ್ತಾನ ನಡುವೆ ಶುರುವಾಗಿರುವ ಸಮರ ಅದಕ್ಕೆ ಮುನ್ನುಡಿಯಾ? ಹಾಗೊಂದು ಆತಂಕ ಎಲ್ಲರಲ್ಲಿ ತಲೆದೋರಿದೆ. ಅದಕ್ಕೆ ಕಾರಣ ದಿನದಿಂದ ದಿನಕ್ಕೆ ಈ ಯುದ್ಧ ಬಿಗಡಾಯಿಸ್ತಿರೋ ರೀತಿ. ಎರಡನೇ ಕಾರಣ, ಖ್ಯಾತ- ಕುಖ್ಯಾತ ಯುಟ್ಯೂಬ್‌ ಇನ್‌ಫ್ಲುಯೆನ್ಸರ್‌ ರಣವೀರ್ ಅಲ್ಲಾಬಾಡಿಯಾ ಗೊತ್ತಲ್ಲ? ಅವನ ಪಾಡ್‌ಕ್ಯಾಸ್ಟ್‌ನಲ್ಲಿ ಸ್ವಾಮಿ ಯೋ ಎಂಬ ಯೋಗಿ ನುಡಿದ ಭವಿಷ್ಯ. 9 ತಿಂಗಳ ಹಿಂದೆ ರಣವೀರ್‌ ಮುಂದೆ ಕುಳಿತು ಈತ ಹೇಳಿದ ಮಾತಿನ ಕ್ಲಿಪ್ಪಿಂಗ್‌ ಇದೀಗ ರಿಸರ್ಫೇಸ್‌ ಆಗಿದೆ. ಆತನ ಯುದ್ಧ ಭವಿಷ್ಯ ನಿಜವಾಗುವಂತಿದೆ. 

ಭಾರತ ಆಪರೇಶನ್‌ ಸಿಂದೂರ ನಡೆಸಿದ್ದು ನಿಮಗೆ ಗೊತ್ತೇ ಇದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದಕ ಶಿಬಿರಗಳನ್ನು ಭಾರತ ಕೆಡವಿದೆ. ಪ್ರತಿಯಾಗಿ ಪಾಕ್‌ ಮತ್ತೆ ಮಿಸೈಲ್‌ ದಾಳಿ ನಡೆಸಲು ಮುಂದಾಗಿದೆ. ಇದಕ್ಕೆ ಉತ್ತರಿಸಿ ಭಾರತ ಪಾಕ್‌ನ ವಾಯುರಕ್ಷಣಾ ವ್ಯವಸ್ಥೆಯನ್ನೇ ಮುರಿದುಹಾಕಿದೆ. ಇದು ಇನ್ನಷ್ಟುಉಲ್ಬಣಿಸುವ ಎಲ್ಲ ಸೂಚನೆ ಇದೆ.

ಸೋಶಿಯಲ್‌ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿರುವ ವೀಡಿಯೊವೊಂದಿದೆ. ಅದರಲ್ಲಿ ಆಧ್ಯಾತ್ಮಿಕ ವಾಗ್ಮಿ, ಯೋಗಿ ಸ್ವಾಮಿ ಯೋ ಎಂಬವರು, ಸುಮಾರು 21 ವಾರಗಳ ಹಿಂದೆ, ಗ್ರಹಗಳ ಜೋಡಣೆಗಳು ಮೇ 2025ರಲ್ಲಿ ಯುದ್ಧದಂತಹ ಸನ್ನಿವೇಶಗಳ ಸಂಭವನೀಯತೆಯನ್ನು ಸೂಚಿಸುತ್ತವೆ ಎಂದು ಹೇಳಿಕೊಂಡಿದ್ದರು. ಈ ಪಾಡ್‌ಕ್ಯಾಸ್ಟ್ 9 ತಿಂಗಳ ಹಿಂದೆ ಹೊರಬಂದಿತ್ತು. ಆ ಭವಿಷ್ಯವಾಣಿ ನಿಜವಾಗುವಂತಿದೆ. 

ಸ್ವಾಮಿ ಯೋ, 2025ರ ಮೇ ತಿಂಗಳಿನಲ್ಲಿ ಆಗುವ ಗ್ರಹಗಳ ಜೋಡಣೆಯನ್ನು ಭಾರತೀಯ ಪುರಾಣಗಳಲ್ಲಿ ಮಹಾಕಾವ್ಯವಾದ ಮಹಾಭಾರತದ ಸಮಯದಲ್ಲಿ ಅಸ್ತಿತ್ವದಲ್ಲಿತ್ತು ಎಂದು ನಂಬಲಾದ ಮಾದರಿಗಳಿಗೆ ಹೋಲಿಸಿದ್ದಾರೆ. ಈಗಿನ 6 ಗ್ರಹಗಳು ಮಹಾಭಾರತ ನಡೆದಾಗ ಇದ್ದ ಮಾದರಿಯನ್ನು ಹೋಲುತ್ತವೆ ಎಂದು ಅವರು ಉಲ್ಲೇಖಿಸಿದ್ದಾರೆ. ಈ ಅಸಾಮಾನ್ಯ ಭವಿಷ್ಯವಾಣಿಯಿಂದಾಗಿ ಪ್ರಸ್ತುತ ಘಟನೆಗಳು ಇನ್ನಷ್ಟು ಕುತೂಹಲ ಕೆರಳಿಸಿವೆ. ವೀಡಿಯೊ ವೈರಲ್‌ ಆಗುತ್ತಿದೆ. 'ಗ್ರಹಗಳು' ಅಥವಾ ಜ್ಯೋತಿಷ್ಯ ಮಾದರಿಗಳ ಸ್ಥಾನೀಕರಣದಿಂದಾಗಿ ಮೇ ತಿಂಗಳಲ್ಲಿ ಯುದ್ಧದಂತಹ ಸನ್ನಿವೇಶಗಳು ಉದ್ಭವಿಸಲಿವೆ ಎಂದು ಅವರು ಉಲ್ಲೇಖಿಸಿದ್ದಾರೆ.

ಸ್ವಾಮಿ ಯೋ ಭಾರತಕ್ಕೆ ಇದು ಸುವರ್ಣ ಯುಗವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಂದರೆ ಭಾರತ ತನ್ನ ಪ್ರಯತ್ನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತದೆ. ಭಾರತವು ವಿಶ್ವಸಂಸ್ಥೆಯೊಂದಿಗೆ ವೀಟೋ ಅಧಿಕಾರಕ್ಕೆ ಬರುತ್ತದೆ ಮತ್ತು ಅದು ಬಹುಶಃ ಪ್ರಮುಖ ಸ್ಥಾನದಲ್ಲಿರುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡುವುದರೊಂದಿಗೆ ಯುದ್ಧದ ಭವಿಷ್ಯವಾಣಿಯು ನಿಜವಾಗಿದೆಯೇ ಎಂದು ನೆಟಿಜನ್‌ಗಳು ಆಶ್ಚರ್ಯ ಪಟ್ಟಿದ್ದಾರೆ.

ಮಹಿಳೆಯರ ಸಿಂಧೂರ ಕಸಿದಿದ್ದಕ್ಕೆ ಉಗ್ರರ ರಕ್ತ ಕಕ್ಕಿಸಿದ ಭಾರತೀಯ ಸೇನೆ: ಸಿಂಧೂರಕ್ಕೆ ಏಕೆ ಇಷ್ಟೊಂದು ಮಹತ್ವ

ಈ ದಾಳಿಯು ಸ್ಪಷ್ಟ ಸಂಕೇತವನ್ನು ರವಾನಿಸಿದೆ ಎಂದು ಮಿಲಿಟರಿ ವಿಶ್ಲೇಷಕರ ಅನಿಸಿಕೆ. ಭಾರತವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಮತ್ತು ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ. ತನ್ನ ರಾಷ್ಟ್ರೀಯ ಭದ್ರತೆ ಅಪಾಯದಲ್ಲಿರುವಾಗ ದಿಟ್ಟ ಉತ್ತರ ನೀಡುತ್ತೇನೆ ಎಂಬ ಭಾರತದ ನಿಲುವನ್ನು ಈ ಕ್ರಮವು ಪ್ರಕಟಿಸಿದೆ. ಉದ್ವಿಗ್ನತೆ ಹೆಚ್ಚಿದೆ. ಯುದ್ಧವಿಮಾನಗಳು ಹಾರಾಡುತ್ತಿವೆ. 

ಭಾರತದ ಏರ್‌ಸ್ಟ್ರೈಕ್‌ ಬಳಿಕ ಸಿಂಧೂರ Vs ಕುಂಕುಮದ ಬಗ್ಗೆ ಜೋರು ಚರ್ಚೆ, ಏನಿದರ ನಡುವಿನ ವ್ಯತ್ಯಾಸ?


Scroll to load tweet…