ಇಂಡಿಯಾಸ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ರಣವೀರ್ ಅಲಹಾಬಾದಿಯಾಗೆ ಸುಪ್ರೀಂ ಕೋರ್ಟ್ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿದೆ. ಮಹಾರಾಷ್ಟ್ರ ಮತ್ತು ಅಸ್ಸಾಂ ಪೊಲೀಸರ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ಬಿಡುಗಡೆಗೆ ಸೂಚಿಸಿದೆ. ರಣವೀರ್ ಜಾಮೀನಿಗಾಗಿ ಪಾಸ್‌ಪೋರ್ಟ್ ಠೇವಣಿ ಇಟ್ಟಿದ್ದರು. ಈಗ ಮಹಾರಾಷ್ಟ್ರ ಸೈಬರ್ ಕ್ರೈಂ ಬ್ಯೂರೋಗೆ ಅರ್ಜಿ ಸಲ್ಲಿಸಿ ಪಾಸ್‌ಪೋರ್ಟ್ ಪಡೆಯಬಹುದು.

ನವದೆಹಲಿ(ಏ.28) ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಪ್ರಶ್ನೆ ಕೇಳಿ ಇಡೀ ಭಾರತೀಯರ ಆಕ್ರೋಶಕ್ಕೆ ಕಾರವಾಗಿದ್ದ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಘಟನೆ ಬಳಿಕ ಪೊಲೀಸರ ವಿಚಾರಣೆ ಎದುರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸತತ ಟೀಕೆ, ಹಲವರು ರಣವೀರ್ ಯೂಟ್ಯೂಬ್ ಚಾನೆಲ್ ಸಬ್‌ಸ್ಕ್ರಿಪ್ಶನ್ ಅಂತ್ಯಗೊಳಿಸಿದ್ದಾರೆ. ಇದರ ನಡುವೆ ಇದೀಗ ಸುಪ್ರೀಂ ಕೋರ್ಟ್, ರಣವೀರ್ ಅಲಹಬಾದಿಯಾ ಪರ ಆದೇಶ ಹೊರಡಿಸಿದೆ. ವಿವಾದಾತ್ಮಕ ಹೇಳಿಕೆ ಕುರಿತು ಮಹಾರಾಷ್ಟ್ರೀಯ ಹಾಗೂ ಅಸ್ಸಾಂ ಸೈಬರ್ ಕ್ರೈಂ ಪೊಲೀಸರು ವಿಚಾರಣೆ ಪೂರ್ಣಗೊಂಡಿರುವ ಕಾರಣ ಇದೀಗ ರಣವೀರ್ ಅಲಹಬಾದಿಯಾಗೆ ವಿದೇಶ ಪ್ರಯಾಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. 

ರಣವೀರ್ ಅಲಹಬಾದಿಯಾ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈಗಾಲೇ ವಿಚಾರಣೆ ಪೂರ್ಣಗೊಂಡಿರುವ ಕಾರಣ ರಣವೀರ್ ಪಾಸ್‌ಪೋರ್ಟ್‌ನ್ನು ರಿಲೀಸ್ ಮಾಡಲು ಸೈಬರ್ ಕ್ರೈಂ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮುಂಬೈ ಪೊಲೀಸರು ರಣವೀರ್ ಅಲಹಾಬಾದಿಯಾ ವಶಕ್ಕೆ ಪಡೆದು ಪಾಸ್‌ಪೋರ್ಟ್ ವಶಪಡಿಸಿಕೊಂಡಿದ್ದರು. ಹೀಗಾಗಿ ವಿಚಾರಣೆ ನಡುವೆ ರಣವೀರ್ ಅಲಹಾಬಾದಿಯಾ ತನ್ನ ಕೆಲಸದ ನಿಮಿತ್ತ ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿದ್ದರು. ಆದರೆ ಇದಕ್ಕೆ ಮುಂಬೈ ಹಾಗೂ ಅಸ್ಸಾಂ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ವಿಚಾರಣೆ ಅಂತ್ಯಗೊಂಡಿರುವ ಕಾರಣ ಸುಪ್ರೀಂ ಕೋರ್ಟ್ ಪಾಸ್‌ಪೋರ್ಟ್ ರಿಲೀಸ್ ಮಾಡುವಂತೆ ಸೈಬರ್ ಕ್ರೈಂ ಪೊಲೀಸರಿಗೆ ಸೂಚಿಸಿದೆ.

'ಇದು ನನ್ನ ಮರುಜನ್ಮʼ-ತಿಂಗಳುಗಳ ಬಳಿಕ ಮತ್ತೆ ಬಂದ ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ! ಇಷ್ಟು ದಿನ ಏನಾಯ್ತು?

ಹಾಸ್ಯನಟ ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋನಲ್ಲಿ ರಣವೀರ್ ಅಶ್ಲೀಲ ಹೇಳಿಕೆ ನೀಡಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು. ಆದರೆ ಬಂಧನಕ್ಕೂ ಮೊದಲು ಮಧ್ಯಂತರ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದ ರಣವೀರ್ ಅಲಹಬಾದಿಯಾ ಜಾಮೀನು ಪಡೆಯಲು ಪಾಸ್‌ಪೋರ್ಟ್ ಠೇವಣಿಯಾಗಿ ನೀಡಿದ್ದರು.

ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ಅಲ್ಲಾಬಾದಿಯ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳ ತನಿಖೆ ಪೂರ್ಣಗೊಂಡಿದೆ. ಹೀಗಾಗಿ ರಣವೀರ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ಆದೇಶ ಹೊರಡಿಸಿತು. ಪಾಸ್‌ಪೋರ್ಟ್ ಬಿಡುಗಡೆಗಾಗಿ ಮಹಾರಾಷ್ಟ್ರ ಸೈಬರ್ ಕ್ರೈಮ್ ಬ್ಯೂರೋಗೆ ಅರ್ಜಿ ಸಲ್ಲಿಸಲು ಪೀಠವು ಅಲ್ಲಾಬಾದಿಗೆ ಅವಕಾಶ ನೀಡಿತು. ಇದೀಗ ರಣವೀರ್ ಅರ್ಜಿ ಸಲ್ಲಿಸಿ ಪಾಸ್‌ಪೋರ್ಟ್ ಮರಳಿ ಪಡೆಯಬಹುದು. ಮುಂಬೈ ಹಾಗೂ ಅಸ್ಸಾಂ ಪೊಲೀಸರು ಈ ಪ್ರಕರಣದಲ್ಲಿ ರಣವೀರ್ ವಿಚಾರಣೆ ನಡೆಸಿದ್ದಾರೆ.

ಇಂಡಿಯಾಸ್ ಗಾಟ್ ಲೇಟೆಂಟ್ ವಿವಾದ, ರಾಖಿ ಸಾವಂತ್‌ಗೆ ಮಹಾರಾಷ್ಟ್ರ ಸೈಬರ್ ಸೆಲ್‌ನಿಂದ ಸಮನ್ಸ್