Asianet Suvarna News Asianet Suvarna News

ಮಾನವ ವಿಕಾಸದ ಬಗ್ಗೆ ಆವಿಷ್ಕಾರ: ವೈದ್ಯಕೀಯ ಕ್ಷೇತ್ರದಲ್ಲಿ ಸ್ವಾಂಟೆ ಪಾಬೊಗೆ Nobel Prize

1901 ಮತ್ತು 2021 ರ ನಡುವೆ ಶರೀರಶಾಸ್ತ್ರ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಒಟ್ಟು 112 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. ಈ ಪೈಕಿ 12 ಮಹಿಳೆಯರು ಮಾತ್ರ ನೊಬೆಲ್‌ ಪುರಸ್ಕೃತರಾಗಿದ್ದಾರೆ. 

svante paabo wins 2022 nobel prize in medicine for discovery around genomes of extinct hominins ash
Author
First Published Oct 3, 2022, 4:51 PM IST

ವಿಜ್ಞಾನಿ (Scientist) ಸ್ವಾಂಟೆ ಪಾಬೋ ಅವರು "ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳ (Hominins) ಜೀನೋಮ್‌ಗಳು (Genomes) ಮತ್ತು ಮಾನವ ವಿಕಸನಕ್ಕೆ (Human Evolution) ಸಂಬಂಧಿಸಿದ" ಸಂಶೋಧನೆಗಳಿಗಾಗಿ 2022 ರ ಶರೀರಶಾಸ್ತ್ರ (Physiology) ಅಥವಾ ವೈದ್ಯಕೀಯ (Medicine) ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ ಎಂದು ಪ್ರಶಸ್ತಿ ನೀಡುವ ಸಂಸ್ಥೆ ಮಾಹಿತಿ ನೀಡಿದೆ. ಸ್ವಾಂಟೆ ಪಾಬೋ ಪ್ರಸ್ತುತ ಮಾನವರ ಅಳಿವಿನಂಚಿನಲ್ಲಿರುವ ಸಂಬಂಧಿಯಾದ ನಿಯಾಂಡರ್‌ತಾಲ್‌ನ ಜೀನೋಮ್ ಅನ್ನು ಸೀಕ್ವೆನ್ಸ್ ಮಾಡಿದ್ದಾರೆ. ಅವರು ಈ ಹಿಂದೆ ಅಪರಿಚಿತವಾಗಿದ್ದ ಹೋಮಿನಿನ್ ಡೆನಿಸೋವಾ ಎಂಬ ಮಹತ್ವಾಕಾಂಕ್ಷೆಯ ಆವಿಷ್ಕಾರ ಮಾಡಿದ್ದಾರೆ.

"ಸುಮಾರು 70,000 ವರ್ಷಗಳ ಹಿಂದೆ ಆಫ್ರಿಕಾದಿಂದ ವಲಸೆ ಬಂದ ನಂತರ ಈ ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳಿಂದ ಹೋಮೋ ಸೇಪಿಯನ್ಸ್‌ಗೆ ಜೀನ್ ವರ್ಗಾವಣೆಯು ಸಂಭವಿಸಿದೆ ಎಂದು ಪಾಬೋ ಕಂಡು ಹಿಡಿದಿದ್ದಾರೆ. ಇನ್ನು, ಇದು ಹೇಗೆ ಮುಖ್ಯವಾಗುತ್ತೆ ಅಂತೀರಾ.. ಇಂದಿನ ಮಾನವರಿಗೆ ಅಂದರೆ ನಮಗೆ ಜೀನ್‌ಗಳ ಈ ಪ್ರಾಚೀನ ಹರಿವು ಇಂದಿಗೂ ಶಾರೀರಿಕ ಪ್ರಸ್ತುತತೆಯನ್ನು ಹೊಂದಿದೆ. ಉದಾಹರಣೆಗೆ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಪ್ಯಾಬೋ ಅವರ ಈ ಮೂಲ ಸಂಶೋಧನೆಯು ಪ್ಯಾಲಿಯೋಜೆನೊಮಿಕ್ಸ್ ಅನ್ನು ಹುಟ್ಟು ಹಾಕಿದೆ ಎಂದೂ ನೊಬೆಲ್ ಪ್ರಕಟಣೆ ಹೇಳುತ್ತದೆ.

ಇದನ್ನು ಓದಿ: ಕೋವಿಡ್ ಲಸಿಕೆಗೇಕೆ ನೊಬೆಲ್ ಸಿಗಲಿಲ್ಲ?: ಲಸಿಕೆಗೆ ಪ್ರಶಸ್ತಿ ಮಿಸ್‌ ಆದ ರಹಸ್ಯ ಬೆಳಕಿಗೆ!

ಸ್ವಾಂಟೆ ಪಾಬೋ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ಎವಲ್ಯೂಷನರಿ ಆಂಥ್ರೊಪಾಲಜಿಯ (Max Plank Institute for Evolutionary Anthropology) ನಿರ್ದೇಶಕರೂ ಆಗಿದ್ದಾರೆ. 

ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್ ಅವರು ತಾಪಮಾನ ಮತ್ತು ಸ್ಪರ್ಶಕ್ಕಾಗಿ ಗ್ರಾಹಕಗಳ ಸಂಶೋಧನೆಗಾಗಿ ಕಳೆದ ವರ್ಷ ನೊಬೆಲ್‌ ಬಹುಮಾನವನ್ನು ಜಂಟಿಯಾಗಿ ಪಡೆದಿದ್ದರು. 1901 ಮತ್ತು 2021 ರ ನಡುವೆ ಶರೀರಶಾಸ್ತ್ರ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಒಟ್ಟು 112 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. ಈ ಪೈಕಿ 12 ಮಹಿಳೆಯರು ಮಾತ್ರ ನೊಬೆಲ್‌ ಪುರಸ್ಕೃತರಾಗಿದ್ದಾರೆ. 

ಇದನ್ನೂ ಓದಿ: Nobel Prize| 86 ವರ್ಷದ ಬಳಿಕ ಪತ್ರಕರ್ತರಿಗೆ ನೊಬೆಲ್‌ ಶಾಂತಿ ಪುರಸ್ಕಾರದ ಗರಿ!

ಈ ಪ್ರತಿಷ್ಠಿತ ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೋನರ್ ($ 1.14 ಮಿಲಿಯನ್) ಬಹುಮಾನದ ಮೊತ್ತ ಹೊಂದಿದೆ. ಈ ಬಹುಮಾನದ ಹಣವನ್ನು 1895 ರಲ್ಲಿ ನಿಧನರಾದ ಪ್ರಶಸ್ತಿಯ ಸೃಷ್ಟಿಕರ್ತ, ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಆಸ್ತಿಯ ಮೂಲಕ ನೀಡಲಾಗುತ್ತದೆ. ಅವರ ವಿಲ್‌ ಅಥವಾ ಉಯಿಲಿನ ಪ್ರಕಾರ ಈ ಪ್ರಶಸ್ತಿ ನೀಡಲಾಗುತ್ತಿದೆ. ವೈಜ್ಞಾನಿಕ ಜಗತ್ತಿನಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ನೊಬೆಲ್‌ ಪ್ರಶಸ್ತಿಯನ್ನು ಸ್ವೀಡನ್‌ನ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನ ನೊಬೆಲ್ ಅಸೆಂಬ್ಲಿ ನೀಡುತ್ತದೆ.
 
ಇನ್ನು, ಮುಂದಿನ ದಿನಗಳಲ್ಲಿ ಒಂದು ವಾರದ ಅವಧಿಯಲ್ಲಿ ಇತರ ಬಹುಮಾನಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿನ ಅತ್ಯುತ್ತಮ ಕೆಲಸಕ್ಕಾಗಿ ಪ್ರಕಟಿಸಲಾಗುವುದು.

ಇದನ್ನೂ ಓದಿ: ಅಮೆರಿಕದ ಇಬ್ಬರು ವಿಜ್ಞಾನಿಗಳಿಗೆ ವೈದ್ಯಕೀಯ ನೊಬೆಲ್‌!

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ವೈದ್ಯಕೀಯ ಸಂಶೋಧನೆ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಮತ್ತು ಜಗತ್ತಿಗೆ ಕೆಲವು ಸಾಮಾನ್ಯತೆಯ ಪ್ರಜ್ಞೆಯನ್ನು ಮರಳಿ ಪಡೆಯಲು ಅವಕಾಶ ಮಾಡಿಕೊಟ್ಟ ಲಸಿಕೆಗಳ ಅಭಿವೃದ್ಧಿಯು ಅಂತಿಮವಾಗಿ ಪ್ರತಿಫಲವನ್ನು ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

ಆದರೂ, ಯಾವುದೇ ಸಂಶೋಧನೆಯನ್ನು ಗೌರವಿಸಲು ಸಾಮಾನ್ಯವಾಗಿ ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ವಿಜೇತರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಸಮಿತಿಗಳು ಯಾವಾಗಲೂ ಸ್ಪರ್ಧಿಗಳ ತುಂಬಿದ ಕ್ಷೇತ್ರಗಳಲ್ಲಿ ಕೆಲವು ನಿಶ್ಚಿತತೆಯೊಂದಿಗೆ ಅದರ ಸಂಪೂರ್ಣ ಮೌಲ್ಯವನ್ನು ನಿರ್ಧರಿಸಲು ನೋಡುತ್ತವೆ.

ಇನ್ನು,  ಸಾಂಕ್ರಾಮಿಕ ರೋಗದಿಂದಾಗಿ 2 ವರ್ಷಗಳ ಬ್ರೇಕ್‌ ನಂತರ ಈ ಬಾರಿ ಸ್ಟಾಕ್‌ಹೋಮ್‌ನಲ್ಲಿ ಮತ್ತೆ ನೊಬೆಲ್ ಔತಣಕೂಟ ಆರಂಭವಾಗಿದೆ. 

Follow Us:
Download App:
  • android
  • ios