Asianet Suvarna News Asianet Suvarna News

ಅಮೆರಿಕದ ಇಬ್ಬರು ವಿಜ್ಞಾನಿಗಳಿಗೆ ವೈದ್ಯಕೀಯ ನೊಬೆಲ್‌!

* ಮನುಷ್ಯನ ದೇಹದಲ್ಲಿರುವ ಉಷ್ಣತೆ, ಸ್ಪರ್ಶ ಗ್ರಾಹಕಗಳ ಸಂಶೋಧನೆಗೆ ಗೌರವ

* ಅಮೆರಿಕದ ಇಬ್ಬರು ವಿಜ್ಞಾನಿಗಳಿಗೆ ವೈದ್ಯಕೀಯ ನೊಬೆಲ್‌

David Julius Ardem Patapoutian win 2021 Medicine Nobel for discovery of temperature touch receptors pod
Author
Bangalore, First Published Oct 5, 2021, 8:12 AM IST

ಸ್ಟಾಕ್‌ಹೋಮ್‌(ಅ.05): ಜಗತ್ತಿನ ಅತ್ಯಂತ ಶ್ರೇಷ್ಠ ಪ್ರಶಸ್ತಿಯೆಂದು ಗುರುತಿಸಲಾಗುವ ನೊಬೆಲ್‌ ಪ್ರಶಸ್ತಿಗಳ ಈ ವರ್ಷದ ಘೋಷಣೆ ಸೋಮವಾರದಿಂದ ಆರಂಭವಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ(2021 Medicine Nobel) ಅಮೆರಿಕದ ಇಬ್ಬರು ವಿಜ್ಞಾನಿಗಳಿಗೆ ಪ್ರಶಸ್ತಿ ಲಭಿಸಿದೆ.

ಅಮೆರಿಕದ ಡೇವಿಡ್‌ ಜೂಲಿಯಸ್‌(David Julius) ಮತ್ತು ಆರ್ಡೆಮ್‌ ಪೆಟಾಪೌಟಿಯಾನ್‌(Ardem Patapoutian)  ಅವರಿಗೆ ನಮ್ಮ ದೇಹದಲ್ಲಿ ಉಷ್ಣತೆ ಮತ್ತು ಸ್ಪರ್ಶವನ್ನು ಗುರುತಿಸುವ ಗ್ರಾಹಕಗಳನ್ನು (ರಿಸೆಪ್ಟ​ರ್‍ಸ್) ಸಂಶೋಧಿಸಿದ್ದಕ್ಕಾಗಿ ವೈದ್ಯಕೀಯ ನೊಬೆಲ್‌ ನೀಡಲಾಗಿದೆ.

ಜೂಲಿಯಸ್‌ ಅವರು ಮೆಣಸಿನ ಕಾಯಿಯಲ್ಲಿರುವ ಕ್ಯಾಪ್ಸೇಸಿನ್‌ ಎಂಬ ರಾಸಾಯನಿಕ ಬಳಸಿ ನಮ್ಮ ದೇಹದ ನರಗಳಲ್ಲಿರುವ ಸೆನ್ಸರ್‌ಗಳು ಚರ್ಮದ ಮೂಲಕ ಉಷ್ಣತೆಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಕಂಡುಹಿಡಿದಿದ್ದಾರೆ.

ಪೆಟಾಪೌಟಿಯಾನ್‌ ಅವರು ನಮ್ಮ ದೇಹದ ಜೀವಕೋಶಗಳಲ್ಲಿ ಸ್ಪರ್ಶಕ್ಕೆ ಪ್ರತಿಕ್ರಿಯಿಸುವ ಎರಡು ಪ್ರತ್ಯೇಕ ಸೆನ್ಸರ್‌ಗಳನ್ನು ಕಂಡುಹಿಡಿದ್ದಾರೆ. ಇವು ಮನುಷ್ಯನ ದೇಹದ ರಚನೆಯ ಕುರಿತಾದ ಮಹತ್ವದ ಸಂಶೋಧನೆಯಾಗಿದ್ದು, ಪ್ರಕೃತಿಯ ಮತ್ತೊಂದು ವಿಸ್ಮಯವನ್ನು ತೆರೆದಿಟ್ಟಿವೆ ಎಂದು ನೊಬೆಲ್‌ ಕಮಿಟಿ ಹೇಳಿದೆ.

ವೈದ್ಯಕೀಯ ನೊಬೆಲ್‌ ಪ್ರಶಸ್ತಿಯು ಚಿನ್ನದ ಪದಕ ಹಾಗೂ ಸುಮಾರು 8.5 ಕೋಟಿ ರು.ಗಳನ್ನು ಒಳಗೊಂಡಿದೆ. ಸೋಮವಾರ ಪ್ರಕಟಿಸಿರುವುದು ಈ ವರ್ಷದ ಮೊದಲ ನೊಬೆಲ್‌ ಪ್ರಶಸ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಹಾಗೂ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಗಳು ಪ್ರಕಟವಾಗಲಿವೆ.

Follow Us:
Download App:
  • android
  • ios