Asianet Suvarna News Asianet Suvarna News

ಮಲೇಷಿಯಾದ ನೂತನ ರಾಜನಾಗಿ ಸುಲ್ತಾನ್ ಇಬ್ರಾಹಿಂ ನೇಮಕ

 ಮಲೇಷಿಯಾದ ಜೋಹರ್ ಪ್ರದೇಶವನ್ನು ಅಳುತ್ತಿದ್ದ ರಾಜ ಸುಲ್ತಾನ್ ಇಬ್ರಾಹಿಂ ಸುಲ್ತಾನ್ ಇಸ್ಕಂದರ್ ಅವರನ್ನು ಅದ್ದೂರಿ ಸಮಾರಂಭದಲ್ಲಿ ಮಲೇಷಿಯಾದ ನೂತನ ರಾಜನನ್ನಾಗಿ ನೇಮಿಸಲಾಗಿದೆ. ಮಲೇಷಿಯಾದಲ್ಲಿ ರಾಜಕೀಯ ಸ್ಥಿರತೆಯನ್ನು ಖಾತ್ರಿಡಿಸುವಲ್ಲಿ ಈ ಕೋಟ್ಯಾಧಿಪತಿ ರಾಜ ಪ್ರಮುಖ ಪಾತ್ರ ವಹಿಸಬಹುದು ಎಂದು ಊಹಿಸಲಾಗಿದೆ.

Sultan Ibrahim appointed as the new king of Malaysia akb
Author
First Published Jan 31, 2024, 12:48 PM IST

ಕೌಲಾಲಂಪುರ್:  ಮಲೇಷಿಯಾದ ಜೋಹರ್ ಪ್ರದೇಶವನ್ನು ಅಳುತ್ತಿದ್ದ ರಾಜ ಸುಲ್ತಾನ್ ಇಬ್ರಾಹಿಂ ಸುಲ್ತಾನ್ ಇಸ್ಕಂದರ್ ಅವರನ್ನು ಅದ್ದೂರಿ ಸಮಾರಂಭದಲ್ಲಿ ಮಲೇಷಿಯಾದ ನೂತನ ರಾಜನನ್ನಾಗಿ ನೇಮಿಸಲಾಗಿದೆ. ಮಲೇಷಿಯಾದಲ್ಲಿ ರಾಜಕೀಯ ಸ್ಥಿರತೆಯನ್ನು ಖಾತ್ರಿಡಿಸುವಲ್ಲಿ ಈ ಕೋಟ್ಯಾಧಿಪತಿ ರಾಜ ಪ್ರಮುಖ ಪಾತ್ರ ವಹಿಸಬಹುದು ಎಂದು ಊಹಿಸಲಾಗಿದೆ. ಒಬ್ಬರಾದ ಮೇಲೊಬ್ಬರಂತೆ ತಿರುಗುವ ವಿಶಿಷ್ಠವಾದ ರಾಜಪ್ರಭುತ್ವದ ವ್ಯವಸ್ಥೆಯ ಅಡಿಯಲ್ಲಿ ಬುಧವಾರ ರಾಷ್ಟ್ರದ ಹೊಸ ರಾಜನಾಗಿ ಸುಲ್ತಾನ್ ಇಬ್ರಾಹಿಂ ಪ್ರಮಾಣವಚನ ಸ್ವೀಕರಿಸಿದರು.

65 ವರ್ಷದ ಸುಲ್ತಾನ್ ಇಬ್ರಾಹಿಂ ಇಸ್ಕಂದರ್ ಅವರು ಅರಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಸಂದರ್ಭದಲ್ಲಿ ಇತರ ರಾಜಮನೆತನಗಳು, ಪ್ರಧಾನಿ ಅನ್ವರ್ ಇಬ್ರಾಹಿಂ ಮತ್ತು ಕ್ಯಾಬಿನೆಟ್ ಸದಸ್ಯರು ಈ ಸಮಾರಂಭದಲ್ಲಿ ಹಾಜರಿದ್ದು, ಅಧಿಕಾರದ ಘೋಷಣೆಯ ದಾಖಲೆಗೆ ಸಹಿ ಹಾಕಿದರು.ಇದಾದ ಬಳಿಕ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ.

2500 ಕೋಟಿ ಮೌಲ್ಯದ ಆಸ್ತಿ ಬಿಟ್ಟು ಸಾಮಾನ್ಯ ವ್ಯಕ್ತಿಯನ್ನು ಮದ್ವೆಯಾದ ಬಿಲಿಯನೇರ್ ಯುವತಿ!

ಮಲೇಷ್ಯಾ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಸುಲ್ತಾನ್ ಇಬ್ರಾಹಿಂ ಅವರು ರಿಯಲ್ ಎಸ್ಟೇಟ್‌ನಿಂದ ದೂರಸಂಪರ್ಕ ಮತ್ತು ವಿದ್ಯುತ್ ಸ್ಥಾವರಗಳವರೆಗೆ ವ್ಯಾಪಕವಾದ ವ್ಯಾಪಾರ ಸಾಮ್ರಾಜ್ಯದ ಮಾಲೀಕತ್ವವನ್ನು ಹೊಂದಿದ್ದಾರೆ. ಮಲೇಷ್ಯಾದಲ್ಲಿ ಆಡಳಿತದಲ್ಲಿರುವ ಸರ್ಕಾರದಿಂದ ಪ್ರಧಾನಿಯಾಗಿರುವ ಅನ್ವರ್ ಇಬ್ರಾಹಿಂ ಜೊತೆ ಈ ಹೊಸ ರಾಜ ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ. ಹೀಗಾಗಿ ಇವರ ಆಡಳಿತವೂ ಅನ್ವರ್ ಅವರ ಸರ್ಕಾರವನ್ನು ಬಲಪಡಿಸಬಹುದು ಎಂದು ನಂಬಲಾಗಿದೆ. ಅನ್ವರ್ ನೇತೃತ್ವದ ಮಲೇಷಿಯಾ ಸರ್ಕಾರವೂ ಬಲವದ ಇಸ್ಲಾಮಿಕ್‌ ವಿರೋಧವನ್ನು ಎದುರಿಸುತ್ತಿದೆ. 

1957 ರಲ್ಲಿ ಮಲೇಷ್ಯಾ ದೇಶವೂ ಬ್ರಿಟನ್‌ ವಸಾಹತುವಿನಿಂದ ಹೊರಬಂದು ಸ್ವಾತಂತ್ರ್ಯ ದೇಶವಾದ ನಂತರ ಇಲ್ಲಿ ಒಂಬತ್ತು ಮೂಲ ಜನಾಂಗೀಯ ಮಲಯ ರಾಜ್ಯದ ಆಡಳಿತಗಾರರು ತಲಾ ಐದು ವರ್ಷಗಳ ಅವಧಿಗೆ ಮಲೇಷ್ಯಾ ರಾಜರಾಗಿ ಅಧಿಕಾರ ಸ್ವೀಕರಿಸುತ್ತಾರೆ. ಸರದಿ ಪ್ರಕಾರ ಒಂದೊಂದು ಮೂಲ ಸಮುದಾಯದ ಜನ ರಾಜರಾಗುವ ವಿಶ್ವದ ಅಪರೂಪದ ಏಕೈಕ ವ್ಯವಸ್ಥೆ ಇದಾಗಿದೆ. ಇನ್ನು ಮಲೇಷ್ಯಾ ದೇಶವೂ 13 ರಾಜ್ಯಗಳನ್ನು ಹೊಂದಿದ್ದು, ಅದರಲ್ಲಿ ಒಂಬತ್ತು ರಾಜ್ಯಗಳೂ ಮಾತ್ರ ಅಧಿಕಾರದಲ್ಲಿ ರಾಜ ಕುಟುಂಬವನ್ನು ಹೊಂದಿವೆ. ಈ ಕುಟುಂಬಗಳು ಹಲವು ಶತಮಾನಗಳ ಹಿನ್ನೆಲೆಯ ತಮ್ಮ ಮನೆತನದ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿವೆ. ಬ್ರಿಟಿಷರು ಈ ರಾಜ್ಯಗಳನ್ನು ಒಟ್ಟುಗೂಡಿಸುವ ಮೊದಲು ಈ ಮಲೇಷ್ಯಾ ರಾಜ್ಯಗಳಲ್ಲಿ ಇವರು ಸ್ವತಂತ್ರ ಮಲಯಾ ಸಾಮ್ರಾಜ್ಯವನ್ನು ಹೊಂದಿದ್ದರು.

8 ಲಕ್ಷ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ನಗರ ಭೂತಗಳ ಸಿಟಿ ಆಗಿದ್ದು ಹೇಗೆ?

ಪೆರಾಕ್ ರಾಜ್ಯದ ಆಡಳಿಗಾರರಾಗಿರುವ ಸುಲ್ತಾನ್ ನಜ್ರಿನ್ ಅವರು ಮಲೇಷ್ಯಾದ ಮುಂದಿನ ರಾಜನಾಗಲಿದ್ದು, ಪ್ರಸ್ತುತ ಉಪರಾಜನಾಗಿ ಆಯ್ಕೆಯಾಗಿದ್ದಾರೆ.

Follow Us:
Download App:
  • android
  • ios