Asianet Suvarna News Asianet Suvarna News

ಇಸ್ತಾಂಬುಲ್‌ನ ಜನನಿಬಿಡ ಪ್ರದೇಶದಲ್ಲಿ ಆತ್ಮಾಹುತಿ ಬಾಂಬ್ ದಾಳಿ

ಟರ್ಕಿಯ ಇಸ್ತಾಂಬುಲ್ ನಗರದ ಜನನಿಬಿಡ ಪ್ರದೇಶದಲ್ಲಿ ಶಂಕಿತ ಆತ್ಮಾಹುತಿ ಬಾಂಬರ್ ದಾಳಿ ನಡೆದಿದ್ದು,  ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಕೆಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

suicide bomber attacks in Turkish city Istanbul akb
Author
First Published Nov 13, 2022, 7:56 PM IST

ಇಸ್ತಾಂಬುಲ್: ಟರ್ಕಿಯ ಇಸ್ತಾಂಬುಲ್ ನಗರದ ಜನನಿಬಿಡ ಪ್ರದೇಶದಲ್ಲಿ ಶಂಕಿತ ಆತ್ಮಾಹುತಿ ಬಾಂಬರ್ ದಾಳಿ ನಡೆದಿದ್ದು,  ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಕೆಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಟರ್ಕಿಸ್ ನಗರ ಇಸ್ತಾಂಬುಲ್‌ನ ಕೇಂದ್ರಭಾಗದಲ್ಲಿ ಜನ ಶಾಪಿಂಗ್‌ನಲ್ಲಿ ತೊಡಗಿದ್ದ ವೇಳೆ ಈ ಅನಾಹುತ ಸಂಭವಿಸಿದೆ. ಈ ಅವಘಡದಲ್ಲಿ ಕನಿಷ್ಠ 11 ಜನ ಗಾಯಗೊಂಡಿದ್ದಾರೆ. 

ಸ್ಫೋಟದ ಭೀಕರತೆಯ ಹಲವು ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಸ್ಫೋಟ ಸಂಭವಿಸುವ ವೇಳೆ ಇಡೀ ಮಾರುಕಟ್ಟೆ ಜನಜಂಗುಳಿಯಿಂದ ತುಂಬಿತ್ತು. ಅಲ್ಲಿನ ಸ್ಥಳೀಯ ಕಾಲಮಾನ ಸಂಜೆ 4.20ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ 11 ಜನ ಗಾಯಗೊಂಡಿದ್ದು, ಗಾಯಾಳುಗಳ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.

ಆದರೆ ಟ್ವಿಟ್ಟರ್‌ನಲ್ಲಿ ಕೆಲವರು ನೀಡಿರುವ ಮಾಹಿತಿ ಪ್ರಕಾರ ಈ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ. ಆದರೆ ಈ ವಿಚಾರ ಅಧಿಕೃತವಾಗಿಲ್ಲ. ಟರ್ಕಿಸ್ ಪತ್ರಕರ್ತ ಕೆರಿಮ್ ಉಲ್ಕಾ ಪ್ರಕಾರ, ಇಸ್ತಾಂಬುಲ್‌ನ ಬೆಯೊಗ್ಲು ಇಸ್ತಿಕ್‌ಲಾಲ್ ಸ್ಟ್ರೀಟ್‌ನಲ್ಲಿ ಈ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ಸದ್ದು ಕೇಳಿದ ಜನ ಸ್ಥಳದಿಂದ ಜೀವ ಉಳಿಸಿಕೊಳ್ಳಲು ಎದ್ದುಬಿದ್ದು ಓಡಿದ್ದಾರೆ. ಈ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 
 

Follow Us:
Download App:
  • android
  • ios