ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಜೈಲಿಗೆ ಹೋಗ್ತಾರೆಂದು ಕೇಳಿ ಎಕ್ಸೈಟ್ ಆದ ಖ್ಯಾತ ನೀಲಿ ತಾರೆ..!
ಖ್ಯಾತ ನೀಲಿ ತಾರೆ ಸ್ಟಾರ್ಮಿ ಡೇನಿಯೆಲ್ಸ್‌ಗೆ ಮಾಡಿದ ಹಣ ಪಾವತಿ ಬಗ್ಗೆ ರಹಸ್ಯ ಹಣದ ತನಿಖೆಯಲ್ಲಿ ಟ್ರಂಪ್ ಬಂಧನವಾಗಬಹುದೆಂಬ ಹಿನ್ನೆಲೆ ಅವರು ಈ ಟ್ವೀಟ್ ಮಾಡಿದ್ದಾರೆ.
ವಾಷಿಂಗ್ಟನ್ ಡಿಸಿ (ಮಾರ್ಚ್ 22, 2023): ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕೊಳಗಾಗಬಹುದೆಂಬ ಸುದ್ದಿ ಕಳೆದ 2 - 3 ದಿನಗಳಿಂದ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ಸಂಭವನೀಯ ಬೆಳವಣಿಗೆ ಅಮೆರಿಕದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ನಡುವೆ, ಟ್ರಂಪ್ ಮಾಜಿ ಗರ್ಲ್‌ಫ್ರೆಂಡ್ ಎನ್ನಲಾದ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಅವರು ಟ್ರಂಪ್ ಬಂಧನವಾಗ್ತಾರೆಂದು ಭಾರಿ ಖುಷಿಯ ಮೂಡ್‌ನಲ್ಲಿದ್ದಾರೆ ಅನ್ಸುತ್ತೆ. ಅಮೆರಿಕದ ಕಾಲಮಾನ ಮಂಗಳವಾರವೇ ಟ್ರಂಪ್ ಬಂಧನನವಾಗಬಹುದೆಂದು ಹೇಳಲಾಗಿತ್ತು. ಈ ಹಿನ್ನೆಲೆ ಅದಕ್ಕೂ ಮುಂಚೆ ಟ್ವೀಟ್ ಮಾಡಿದ ಖ್ಯಾತ ನೀಲಿ ತಾರೆ ಅಮೆರಿಕ ಮಾಜಿ ಅಧ್ಯಕ್ಷರಿಗೆ ಅಪಹಾಸ್ಯ ಮಾಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸ್ಟಾರ್ಮಿ ಡೇನಿಯಲ್ಸ್, ಇಂದು ಎಕ್ಸೈಟ್ ಆಗುವಂತದ್ದಾನೇದಾದ್ರೂ ನಡೆಯುತ್ತಿದೆಯೇ ಎಂದು ತಮ್ಮ ಫಾಲೋವರ್ಸ್‌ಗಳಿಗೆ ಕೇಳಿದ್ದಾರೆ. ಖ್ಯಾತ ನೀಲಿ ತಾರೆ ಸ್ಟಾರ್ಮಿ ಡೇನಿಯೆಲ್ಸ್‌ಗೆ ಮಾಡಿದ ಹಣ ಪಾವತಿ ಬಗ್ಗೆ ರಹಸ್ಯ ಹಣದ ತನಿಖೆಯಲ್ಲಿ ಟ್ರಂಪ್ ಬಂಧನವಾಗಬಹುದೆಂಬ ಹಿನ್ನೆಲೆ ಅವರು ಈ ಟ್ವೀಟ್ ಮಾಡಿದ್ದಾರೆ. ಟ್ರಂಪ್ ಟವರ್ ಬಳಿ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲಾಗಿದ್ದು ಮತ್ತು ಪೊಲೀಸರು ಹೈ ಅಲರ್ಟ್‌ನಲ್ಲಿದ್ದಾರೆ. ಇನ್ನು, ಡೊನಾಲ್ಡ್ ಟ್ರಂಪ್ ದೋಷಾರೋಪಣೆ, ಬಂಧನಕ್ಕಾಗಿ ಇಡೀ ಅಮೆರಿಕ ಕುತೂಹಲದಿಂದ ನೋಡುತ್ತಿದೆ. ಆದರೆ, ಬಂಧನದ ಸಮಯ ಮಾತ್ರ ಅನಿಶ್ಚಿತ.
ಇದನ್ನು ಓದಿ: ಉಕ್ರೇನ್‌ನಿಂದ ರಷ್ಯಾಕ್ಕೆ ಮಕ್ಕಳ ಗಡೀಪಾರು: ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನ ವಾರಂಟ್
ಈ ಹಿನ್ನೆಲೆ ಡೇನಿಯೆಲ್ ಸ್ಟಾರ್ಮ್ಸ್, "ವಾವ್! ಇದು ಸುಂದರವಾದ ಮುಂಜಾನೆ. ನನ್ನ ತೋಟದ ಫಾರ್ಮ್ ಪಾರ್ಚ್‌ನಲ್ಲಿ ಕಾಫಿ ಹೀರುವುದು ಮತ್ತು ನನ್ನ ಸುಂದರ ಕುದುರೆ ಮೇಯುವುದನ್ನು ನೋಡುವುದು ಯಾವಾಗಲೂ ನನ್ನ ಕನಸಾಗಿತ್ತು. ಇಂದು ಏನಾದರೂ ರೋಮಾಂಚನಕಾರಿ ನಡೆಯುತ್ತಿದೆಯೇ?" ಎಂದು ಸ್ಟಾರ್ಮಿ ಡೇನಿಯಲ್ಸ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಮಂಗಳವಾರ ಮತ್ತೊಂದು ಪೋಸ್ಟ್‌ನಲ್ಲಿ,ಸ್ಟಾರ್ಮಿ ಡೇನಿಯಲ್ಸ್ ಡೊನಾಲ್ಡ್ ಟ್ರಂಪ್ ಅವರನ್ನು ಬೆಲೆ ಇಲ್ಲದ ಅಥವಾ ಚಿಕ್ಕದಾದ ಎಂದು ಕರೆದಿದ್ದರು ಮತ್ತು "ನಾನು ನಡೆಯುವುದಿಲ್ಲ, (ಟ್ರಂಪ್) ಜೈಲಿಗೆ ಹೋಗಲು "ಆಯ್ಕೆಯಾದಾಗ" ನಾನು ಬೀದಿಯಲ್ಲಿ ನೃತ್ಯ ಮಾಡುತ್ತೇನೆ" ಎಂದು ಪೋಸ್ಟ್ ಮಾಡಿದ್ದರು.
2016 ರಲ್ಲಿ ಪೋರ್ನ್ ಸ್ಟಾರ್‌ಗೆ ಹಣ ಪಾವತಿಸಿದ ಆರೋಪದ ಕುರಿತು ಮ್ಯಾನ್‌ಹ್ಯಾಟನ್ ಡಿಸ್ಟ್ರಿಕ್ಟ್ ಅಟಾರ್ನಿಯ ಗ್ರ್ಯಾಂಡ್ ಜ್ಯೂರಿ ತನಿಖೆಯ ಭಾಗವಾಗಿ ಮಂಗಳವಾರ ಬಂಧಿಸಲಾಗುವುದು ಎಂದು ಟ್ರಂಪ್ ತಮ್ಮ ಸ್ವಂತ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ರೂತ್ ಸೋಷಿಯಲ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ. ಟ್ರಂಪ್ ಹಾಗೂ ನೀಲಿ ತಾರೆ ಹೊಂದಿದ್ದ ಸಂಬಂಧದ ಬಗ್ಗೆ ಬಹಿರಂಗಪಡಿಸದಂತೆ ಇರಲು ಅಮೆರಿಕ ಮಾಜಿ ಅಧ್ಯಕ್ಷರ ಅಂದಿನ ವಕೀಲ ಮೈಕೆಲ್ ಕೋಹೆನ್ ಮೂಲಕ ಹಣ ಪಾವತಿಸಲಾಗಿತ್ತು ಎಂಬುದು ಆರೋಪ.
ಇದನ್ನೂ ಓದಿ: ಮತ್ತೆ ಟ್ವಿಟ್ಟರ್‌ನಲ್ಲಿ ಶುರುವಾಗಲಿದೆ ಡೊನಾಲ್ಡ್ ಟ್ರಂಪ್ ಹವಾ..! ಅಮೆರಿಕ ಮಾಜಿ ಅಧ್ಯಕ್ಷರು ಹೇಳಿದ್ದೇನು..?
ಇನ್ನು, ಮಂಗಳವಾರ ಬಂದು ಹೋದರೂ ತಮ್ಮ ಬಂಧನವಾಗದ ಹಿನ್ನೆಲೆ ಮಾಜಿ ಯುಎಸ್ ಅಧ್ಯಕ್ಷರು ಮತ್ತೊಮ್ಮೆ ಟ್ರೂತ್ ಸೋಶಿಯಲ್ ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ಮಾಡಿದ್ದಾರೆ. ಎಲ್ಲಾ ತನಿಖೆಗಳು "ಯಾವುದೇ ಅಪರಾಧ" ಇಲ್ಲ ಎಂದು ಸಾಬೀತುಪಡಿಸಿವೆ ಎಂದು ಅವರು ಹೇಳಿದ್ದು, ಮತ್ತು ಸಂಪೂರ್ಣ ವಿಚಾರವನ್ನು "ನನ್ನ ವಿರುದ್ಧದ ಸುಲಿಗೆ ಸಂಚು" ಎಂದೂ ಆರೋಪಿಸಿದ್ದಾರೆ.
ಕೆಲವು US ಮಾಧ್ಯಮಗಳು ಈ ಪ್ರಕರಣವನ್ನು ವಿಚಾರಣೆ ಮಾಡುವ ಗ್ರ್ಯಾಂಡ್ ಜ್ಯೂರಿ ಬುಧವಾರ ದೋಷಾರೋಪಣೆಗೆ ಮತ ಹಾಕಬಹುದು ಎಂದು ಊಹಿಸಲಾಗಿದೆ. ಆದರೆ ಮ್ಯಾನ್‌ಹಟ್ಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಯಾವುದೇ ಆರೋಪಗಳನ್ನು ಘೋಷಿಸುವ ಮೊದಲು ಮತ್ತು ಟ್ರಂಪ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಮುಂದಿನ ವಾರವೇ ಸಂಭವಿಸಬಹುದು ಎಂದೂ ಹೇಳಲಾಗ್ತಿದೆ.
ಇದನ್ನೂ ಓದಿ: ಎಫ್‌ಬಿಐ ತನ್ನ ನಿವಾಸದ ಮೇಲೆ ರೇಡ್ ಮಾಡಿದೆ: ಡೊನಾಲ್ಡ್ ಟ್ರಂಪ್ ಟೀಕೆ
ಒಂದು ವೇಳೆ 76 ವರ್ಷ ವಯಸ್ಸಿನ ಡೊನಾಲ್ಡ್ ಟ್ರಂಪ್ ಬಂಧನವಾದಲ್ಲಿ, ಅಪರಾಧದ ಆರೋಪಕ್ಕೆ ಒಳಗಾದ ಮೊದಲ ಮಾಜಿ ಅಥವಾ ಹಾಲಿ ಯುಎಸ್ ಅಧ್ಯಕ್ಷರಾಗುತ್ತಾರೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ.