ಉಕ್ರೇನ್‌ನಿಂದ ರಷ್ಯಾಕ್ಕೆ ಮಕ್ಕಳ ಗಡೀಪಾರು: ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನ ವಾರಂಟ್
ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ವ್ಯಾಪ್ತಿಯ 120 ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳಲ್ಲಿ ಯಾವುದೇ ದೇಶಕ್ಕೆ ಕಾಲಿಟ್ಟರೆ ಬಂಧನಕ್ಕೆ ಹೊಣೆಗಾರರಾಗಿದ್ದಾರೆ ಎಂದು
ಐಸಿಸಿ ಪ್ರಾಸಿಕ್ಯೂಟರ್ ಕರೀಂ ಖಾನ್ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ AFP ಗೆ ಹೇಳಿದರು. ಫೊರೆನ್ಸಿಕ್ ಪುರಾವೆಗಳು, ಪರಿಶೀಲನೆ ಮತ್ತು ಇಬ್ಬರು ವ್ಯಕ್ತಿಗಳ ಹೇಳಿಕೆಯನ್ನು
ಬಂಧನ ವಾರಂಟ್‌ಗಳು ಆಧರಿಸಿವೆ ಎಂದೂ ಅವರು ಹೇಳಿದರು.
ಹೇಗ್ (ಮಾರ್ಚ್ 18, 2023): ಉಕ್ರೇನಿಯನ್ ಮಕ್ಕಳನ್ನು ಕಾನೂನುಬಾಹಿರವಾಗಿ ಗಡೀಪಾರು ಮಾಡಿದ ಯುದ್ಧ ಅಪರಾಧದ ಆರೋಪದ ಮೇಲೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಶುಕ್ರವಾರ ಬಂಧನ ವಾರಂಟ್ ಹೊರಡಿಸಿದೆ. ಹಾಗೆ, ರಷ್ಯಾದ ಅಧ್ಯಕ್ಷೀಯ ಕಮಿಷನರ್ ಮರಿಯಾ ಲ್ವೊವಾ-ಬೆಲೋವಾ ವಿರುದ್ಧವೂ ವಾರಂಟ್ ಹೊರಡಿಸಿದೆ ಎಂದು ಹೇಗ್ ಮೂಲದ ಐಸಿಸಿ ಹೇಳಿದೆ. ಆದರೆ, ಇದು ನಿರರ್ಥಕ ಎಂದು ರಷ್ಯಾ ಸರ್ಕಾರ ಕೋರ್ಟ್ ಆದೇಶವನ್ನು ತಿರಸ್ಕರಿಸಿದೆ. ಅಲ್ಲದೆ, ರಷ್ಯಾ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನ ಭಾಗವೂ ಅಲ್ಲ ಎಂದೂ ಹೇಳಿದ್ದು, ಈ ಹಿನ್ನೆಲೆ ಪುಟಿನ್ ವಿರುದ್ಧ ಹೇಗೆ ವಾರಂಟ್ ಹೊರಡಿಸಲಾಗಿದೆ ಎಂಬುದು ಸಹ ಸ್ಪಷ್ಟವಾಗಿಲ್ಲ ಎಂದೂ ಹೇಳಲಾಗಿದೆ.
ಯುದ್ಧದಿಂದ (War) ಜರ್ಜರಿತವಾಗಿರುವ ಉಕ್ರೇನ್ (Ukraine) ಐಸಿಸಿ (ICC) ಘೋಷಣೆಯನ್ನು ಸ್ವಾಗತಿಸಿದ್ದು, ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಇದನ್ನು ಐತಿಹಾಸಿಕ ನಿರ್ಧಾರ ಎಂದಿದ್ದು, ಅರೆಸ್ಟ್ ವಾರಂಟ್ (Arrest Warrant) ಅನ್ನು ಶ್ಲಾಘಿಸಿದೆ. ಫೆಬ್ರವರಿ 24, 2022 ರಂದು ನಮ್ಮ ಮೇಲೆ ಆಕ್ರಮಣ ಮಾಡಿದಾಗಿನಿಂದ 16,000 ಕ್ಕೂ ಹೆಚ್ಚು ಉಕ್ರೇನ್ ಮಕ್ಕಳನ್ನು ರಷ್ಯಾಕ್ಕೆ (Russia) ಗಡೀಪಾರು ಮಾಡಲಾಗಿದ್ದು, ಅನೇಕರನ್ನು ಸಂಸ್ಥೆಗಳು ಮತ್ತು ಮಕ್ಕಳನ್ನು ಸಾಕುವ ಮನೆಗಳಲ್ಲಿ ಇರಿಸಲಾಗಿದೆ ಎಂದು ಉಕ್ರೇನ್ ಸರ್ಕಾರ ಹೇಳಿದೆ.
ಇದನ್ನು ಓದಿ: ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಆಪ್ತರೇ ಹತ್ಯೆ ಮಾಡ್ತಾರೆ: ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಭವಿಷ್ಯ
ಇನ್ನು, ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ವ್ಯಾಪ್ತಿಯ 120 ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳಲ್ಲಿ ಯಾವುದೇ ದೇಶಕ್ಕೆ ಕಾಲಿಟ್ಟರೆ ಬಂಧನಕ್ಕೆ ಹೊಣೆಗಾರರಾಗಿದ್ದಾರೆ ಎಂದು
ಐಸಿಸಿ ಪ್ರಾಸಿಕ್ಯೂಟರ್ ಕರೀಂ ಖಾನ್ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ AFP ಗೆ ಹೇಳಿದರು. ಫೊರೆನ್ಸಿಕ್ ಪುರಾವೆಗಳು, ಪರಿಶೀಲನೆ ಮತ್ತು ಇಬ್ಬರು ವ್ಯಕ್ತಿಗಳ ಹೇಳಿಕೆಯನ್ನು
ಬಂಧನ ವಾರಂಟ್‌ಗಳು ಆಧರಿಸಿವೆ ಎಂದೂ ಅವರು ಹೇಳಿದರು.
"ನಾವು ಪ್ರಸ್ತುತಪಡಿಸಿದ ಸಾಕ್ಷ್ಯವು ಮಕ್ಕಳ ವಿರುದ್ಧದ ಅಪರಾಧಗಳ ಮೇಲೆ ಕೇಂದ್ರೀಕರಿಸಿದೆ. ಮಕ್ಕಳು ನಮ್ಮ ಸಮಾಜದ ಅತ್ಯಂತ ದುರ್ಬಲ ಭಾಗ" ಎಂದೂ ಕರೀಂ ಖಾನ್ ಹೇಳಿದರು.
ವ್ಲಾಡಿಮಿರ್ ಪುಟಿನ್ ಅವರ ಕ್ರಿಮಿನಲ್ ಹೊಣೆಗಾರಿಕೆಯನ್ನು ಶಂಕಿಸಲು ನ್ಯಾಯಮೂರ್ತಿಗಳು "ಸಮಂಜಸವಾದ ಆಧಾರಗಳನ್ನು" ಕಂಡುಕೊಂಡಿದ್ದಾರೆ ಮತ್ತು ಫೆಬ್ರವರಿ 22 ರಂದು ಬಂಧನ ವಾರೆಂಟ್‌ಗಳಿಗಾಗಿ ಕರೀಂ ಖಾನ್ ಅವರ ಅರ್ಜಿಯನ್ನು ಮಂಜೂರು ಮಾಡಿದ್ದಾರೆ ಎಂದು ಐಸಿಸಿ ಹೇಳಿದೆ. ಹಾಗೆ, ಅರೆಸ್ಟ್ ವಾರೆಂಟ್‌ಗಳ ಕಾರ್ಯಗತಗೊಳಿಸುವಿಕೆಯು "ಅಂತರರಾಷ್ಟ್ರೀಯ ಸಹಕಾರವನ್ನು ಅವಲಂಬಿಸಿದೆ" ಎಂದು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಅಧ್ಯಕ್ಷ ಪಿಯೋಟರ್ ಹಾಫ್‌ಮಾನ್ಸ್ಕಿ
ಹೇಳಿದ್ದಾರೆ.
ಇದನ್ನೂ ಓದಿ: ವರ್ಷ ಪೂರೈಸಿದ ಹತ್ಯಾಕಾಂಡ: ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಯುದ್ಧದ ಪರಿಣಾಮವೇನು?
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರದ ಮುಖ್ಯಸ್ಥರಾಗಿರುವ ವ್ಲಾಡಿಮಿರ್ ಪುಟಿನ್‌ಗೆ ಬಂಧನ ವಾರಂಟ್ ಐಸಿಸಿಗೆ ಅಭೂತಪೂರ್ವ ಹೆಜ್ಜೆಯಾಗಿದೆ. ವಿಶ್ವದ ಅತ್ಯಂತ ಕೆಟ್ಟ ಅಪರಾಧಗಳಿಗೆ ದೇಶಗಳು ಶಂಕಿತರನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಾಗದಾಗ ಅವರು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಮೊರೆ ಹೋಗಬಹುದು. ಇದನ್ನು
2002 ರಲ್ಲಿ ಸ್ಥಾಪಿಸಲಾಯಿತು.
ರಷ್ಯಾ ಉಕ್ರೇಮ್ ಮೇಲೆ ಆಕ್ರಮಣ ಮಾಡಿದ ಕೆಲವೇ ದಿನಗಳ ಬಳಿಕ ಉಕ್ರೇನ್‌ನಲ್ಲಿ ಆಪಾದಿತ ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ಕುರಿತು ಪ್ರಾಸಿಕ್ಯೂಟರ್ ಕರೀಂ ಖಾನ್ ತನಿಖೆಯನ್ನು ಪ್ರಾರಂಭಿಸಿದರು.
ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ರಹಸ್ಯವಾಗಿ ಉಕ್ರೇನ್‌ಗೆ ಭೇಟಿ ನೀಡಿದ್ದು ಹೇಗೆ?
ಹಲವು ರಾಷ್ಷ್ರಗಳಿಂದ ಸ್ವಾಗತ
ಉಕ್ರೇನ್‌ನ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಸಹ ಈ ಕ್ರಮವನ್ನು ಶ್ಲಾಘಿಸಿದ್ದು, ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಅರೆಸ್ಟ್ ವಾರಂಟ್ "ಸಮರ್ಥನೀಯವಾಗಿದೆ" ಮತ್ತು "ಬಹಳ ಬಲವಾದ ಅಂಶವನ್ನು ನೀಡುತ್ತದೆ" ಎಂದು ಹೇಳಿದರು. ಬ್ರಿಟನ್ ಸಹ ಇದನ್ನು ಸ್ವಾಗತಿಸಿದ್ದು, ಯುರೋಪಿಯನ್ ಒಕ್ಕೂಟವು "ಇದು ಕೇವಲ ಪ್ರಾರಂಭ" ಎಂದು ಹೇಳಿದೆ.