ನಾರ್ವೆ ನಾಟಕಕಾರ ಜಾನ್ ಫಾಸಿಗೆ ಸಾಹಿತ್ಯ ನೊಬೆಲ್
ನಾರ್ವೆಯ ನಾಟಕಕಾರ ಹಾಗೂ ಲೇಖಕ ಜಾನ್ ಫಾಸಿ ಅವರಿಗೆ ಈ ಬಾರಿಯ ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಲಭಿಸಿದೆ. ನವೀನ ನಾಟಕಗಳು ಹಾಗೂ ಗದ್ಯದ ಮೂಲಕ ದನಿ ಇಲ್ಲದವರಿಗೆ ದನಿಯಾದ ಹಿನ್ನೆಲೆಯಲ್ಲಿ ಅವರನ್ನು ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಹೇಳಿದೆ.

ಸ್ಟಾಕ್‌ಹೋಮ್: ನಾರ್ವೆಯ ನಾಟಕಕಾರ ಹಾಗೂ ಲೇಖಕ ಜಾನ್ ಫಾಸಿ ಅವರಿಗೆ ಈ ಬಾರಿಯ ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಲಭಿಸಿದೆ. ನವೀನ ನಾಟಕಗಳು ಹಾಗೂ ಗದ್ಯದ ಮೂಲಕ ದನಿ ಇಲ್ಲದವರಿಗೆ ದನಿಯಾದ ಹಿನ್ನೆಲೆಯಲ್ಲಿ ಅವರನ್ನು ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಹೇಳಿದೆ.
ನಾರ್ವೆಯ ಪ್ರಸಿದ್ಧ ನಾಟಕಕಾರರಾಗಿರುವ ಫಾಸಿ ಅವರಿಗೆ 64 ವರ್ಷ. 40ಕ್ಕೂ ಹೆಚ್ಚು ನಾಟಕಗಳನ್ನು ಅವರು ರಚಿಸಿದ್ದಾರೆ. ಇದರ ಜತೆಗೆ ಕಾದಂಬರಿ, ಸಣ್ಣ ಕತೆಗಳು, ಮಕ್ಕಳ ಪುಸ್ತಕ, ಕವಿತೆ ಹಾಗೂ ಪ್ರಬಂಧಗಳನ್ನೂ ಅವರು ರಚಿಸಿದ್ದಾರೆ. ನಾರ್ವೆಯ ಪರಿಸರ ಹಾಗೂ ಭಾಷೆಯ ಮಿಶ್ರಣದೊಂದಿಗೆ ಸಾಹಿತ್ಯ ಕೃಷಿ ಮಾಡಿರುವ ಅವರು ಸ್ಯಾಮುಯೆಲ್ ಬೆಕೆಟ್‌ರಂತಹ (Samuel Beckett) ಲೇಖಕರಿಂದ ಪ್ರಭಾವಿತರಾಗಿದ್ದಾರೆ ಎಂದು ಸಾಹಿತ್ಯ ನೊಬೆಲ್ ಆಯ್ಕೆ ಸಮಿತಿಯ ಮುಖ್ಯಸ್ಥ ಆ್ಯಂಡರ್ಸ್ ಒಲ್ಸಾನ್ (Anders Olsson) ಅವರು ತಿಳಿಸಿದ್ದಾರೆ.
ಪ್ರಖರ ಬೆಳಕು ಉತ್ಪಾದಿಸುವ ಕ್ವಾಂಟಮ್ ಡಾಟ್ ಶೋಧಿಸಿದ ಮೂವರು ಅಮೆರಿಕಾ ವಿಜ್ಞಾನಿಗಳಿಗೆ ನೊಬೆಲ್
ಫಾಸಿ ಅವರಿಗೆ ನೊಬೆಲ್ ಸಾಹಿತ್ಯ ಅಕಾಡೆಮಿಯ ಕಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲ್ಮ್ ಅವರು ದೂರವಾಣಿ ಕರೆ ಮಾಡಿ ನೊಬೆಲ್ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿರುವ ವಿಷಯವನ್ನು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಫಾಸಿ ಅವರು ವಾಹನ ಚಾಲನೆ ಮಾಡುತ್ತಿದ್ದರು. ಸಾಹಿತ್ಯ ನೊಬೆಲ್‌ಗೆ ಆಯ್ಕೆಯಾದ ನಾರ್ವೆಯ 4ನೇ ವ್ಯಕ್ತಿ, ಈ ಶತಮಾನದಲ್ಲಿ ಸಾಹಿತ್ಯ ನೊಬೆಲ್ ಪಡೆದ ನಾರ್ವೆಯ ಮೊದಲ ವ್ಯಕ್ತಿ ಅವರಾಗಿದ್ದಾರೆ. 1903, 1920, 1928ರಲ್ಲಿ ನಾರ್ವೆ ಲೇಖಕರಿಗೆ ಸಾಹಿತ್ಯ ನೊಬೆಲ್ ಸಿಕ್ಕಿತ್ತು.
ನೊಬೆಲ್ ಪ್ರಶಸ್ತಿಯ (Nobel Prize) 8.3 ಕೋಟಿ ರು. ನಗದು ಬಹುಮಾನ ಹೊಂದಿದೆ. ಇದರ ಜತೆಗೆ 18 ಕ್ಯಾರಟ್‌ನ ಚಿನ್ನದ ಪದಕ ಹಾಗೂ ಡಿಪ್ಲೊಮಾ ಪದವಿಯನ್ನೂ ಪ್ರದಾನ ಮಾಡಲಾಗುತ್ತದೆ. ಡಿಸೆಂಬರ್‌ಗೆ ನೊಬೆಲ್ ಪ್ರಶಸ್ತಿಗಳ ಪ್ರದಾನ ಸಮಾರಂಭ ನಡೆಯಲಿದೆ.
ಮಹಿಳೆ ಸೇರಿ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್