ಅತ್ಯಂತ ಕಡಿಮೆ ಸಮಯದಲ್ಲಿ ಒಂದು ಅಣುವಿನ ಒಳಗೆ ಎಲೆಕ್ಟ್ರಾನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಸಂಶೋಧನೆ ಮಾಡಿದ ಮೂವರು ವಿಜ್ಞಾನಿಗಳಿಗೆ ಈ ಬಾರಿಯ ಭೌತಶಾಸ್ತ್ರ ನೊಬೆಲ್‌ ಲಭಿಸಿದೆ.

ಸ್ಟಾಕ್‌ಹೋಮ್‌: ಅತ್ಯಂತ ಕಡಿಮೆ ಸಮಯದಲ್ಲಿ ಒಂದು ಅಣುವಿನ ಒಳಗೆ ಎಲೆಕ್ಟ್ರಾನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಸಂಶೋಧನೆ ಮಾಡಿದ ಮೂವರು ವಿಜ್ಞಾನಿಗಳಿಗೆ ಈ ಬಾರಿಯ ಭೌತಶಾಸ್ತ್ರ ನೊಬೆಲ್‌ ಲಭಿಸಿದೆ. ಅಮೆರಿಕದ ಓಹಿಯೋ ವಿಶ್ವವಿದ್ಯಾಲಯದ ಪಿಯರೆ ಅಗೋಸ್ಟಿನಿ, ಜರ್ಮನಿಯ ಮ್ಯೂನಿಕ್‌ನ ಮ್ಯಾಕ್ಸ್‌ ಪ್ಲಾಂಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕ್ವಾಂಟಮ್‌ ಆಪ್ಟಿಕ್ಸ್‌ ಮತ್ತು ಲುಡ್‌ವಿಂಗ್‌ ಮ್ಯಾಕ್ಸಿಮಿಲಿಯನ್‌ ವಿವಿಯ ಫೆರೆಂಖ್‌ ಕ್ರಾಜ್‌ ಹಾಗೂ ಸ್ವೀಡನ್ನಿನ ಲಾಂಡ್‌ ವಿವಿಯ ಆನ್‌ ಎಲ್‌’ಹ್ಯೂಲಿಯರ್‌ (Ann L'Huillier)ಅವರು ಈ ಬಾರಿ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಮೂವರು ವಿಜ್ಞಾನಿಗಳು ಪರಮಾಣ ಮತ್ತು ಅಣುಗಳ (atoms) ಒಳಗಿನ ಎಲೆಕ್ಟ್ರಾನ್‌ಗಳ ಜಗತ್ತನ್ನು ಅನ್ವೇಷಿಸುವ ಹೊಸ ಸಾಧನಗಳನ್ನು ಮನುಕುಲಕ್ಕೆ ನೀಡಿದ್ದಾರೆ. ಅತ್ಯಂತ ಕಿರಿದಾದ ಬೆಳಕಿನ ಕಣಗಳನ್ನು ಸೃಷ್ಟಿಸುವ ಹಾದಿಯನ್ನು ಇವರು ಪರಿಚಯಿಸಿದ್ದಾರೆ. ಇದನ್ನು ಎಲೆಕ್ಟ್ರಾನ್‌ಗಳ ಚಲನೆ ಮತ್ತು ಶಕ್ತಿಯ ಬದಲಾವಣೆ ಕುರಿತ ಶೀಘ್ರ ಮಾಪನಕ್ಕೆ ಬಳಕೆ ಮಾಡಿಕೊಳ್ಳಬಹುದು ಎಂದು ರಾಯಲ್‌ ಸ್ವೀಡಿಶ್‌ ಅಕಾಡೆಮಿ ಆಫ್‌ ಸೈನ್ಸಸ್‌ ಘೋಷಿಸಿದೆ.

ಈ ವರ್ಷದ ಭಾರತದ ಆರ್ಥಿಕತೆ ಪ್ರಗತಿ ದರ ಶೇ. 6.3: ವಿಶ್ವಬ್ಯಾಂಕ್‌

ಈ ಮೂವರು ವಿಜ್ಞಾನಿಗಳು ಅತ್ಯಂತ ಕಡಿಮೆ ಪ್ರಮಾಣದ ಬೆಳಕನ್ನು ಬಳಕೆ ಮಾಡಿಕೊಂಡು ಅದು ಎಲೆಕ್ಟ್ರಾನ್‌ಗಳ ಬದಲಾವಣೆಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಪತ್ತೆ ಮಾಡಿದ್ದರು. ಯಾವುದೇ ಎಲೆಕ್ಟ್ರಾನ್‌ಗಳು ಅತ್ಯಂತ ಕಡಿಮೆ ಶಕ್ತಿಗೂ ಚಲಿಸುತ್ತವೆ ಅಥವಾ ಶಕ್ತಿಯನ್ನು ಮಾರ್ಪಡಿಸುತ್ತವೆ ಎಂಬುದನ್ನು ಇವರು ಪತ್ತೆ ಹಚ್ಚಿದ್ದರು. ಇತ್ತೀಚಿನ ವಿಜ್ಞಾನ ಅನ್ವಯಿಕ ಪ್ರಯೋಗಕ್ಕಿಂತ ಬ್ರಹ್ಮಾಂಡದ ಮೇಲೆ ಹೆಚ್ಚಿನ ಒತ್ತು ನೀಡಿದೆ. ಹಾಗಾಗಿ ಈ ಸಂಶೋಧನೆ ಉತ್ತಮ ಎಲೆಕ್ಟ್ರಾನಿಕ್ಸ್‌ನ ತಯಾರಿಕೆಗೆ ಮತ್ತು ರೋಗಗಳ ಪರೀಕ್ಷೆಗೆ ಸಹಾಯವನ್ನು ಒದಗಿಸಲಿದೆ.

5ನೇ ಮಹಿಳೆ: ಭೌತಶಾಸ್ತ್ರ ವಿಭಾಗದಲ್ಲಿ ಈವರೆಗೆ ಕೇವಲ 4 ಮಂದಿ ಮಹಿಳೆಯರು ಮಾತ್ರ ಪ್ರಶಸ್ತಿಗೆ ಭಾಜನರಾಗಿದ್ದು, ಎಲ್‌’ಹ್ಯೂಲಿಯರ್‌ ಪ್ರಶಸ್ತ್ರ ಪಡೆದ 5ನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಪ್ರಶಸ್ತಿ ಪಡೆದುಕೊಂಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಬಿಹಾರದಲ್ಲಿ ಮೇಲ್ವರ್ಗದ ಬಡವರಿಗೆ ನ್ಯಾಯಾಂಗ ಇಲಾಖೆ, ಕಾಲೇಜಲ್ಲಿ ಶೇ.10ರಷ್ಟು ಮೀಸಲಾತಿ

ಪ್ರಶಸ್ತಿಯು 8 ಕೋಟಿ ರು.ಗಳ ಬಹುಮಾನವನ್ನು ಒಳಗೊಂಡಿದ್ದು ಇದನ್ನು ಆಲ್‌ಫ್ರೆಡ್‌ ನೊಬೆಲ್‌ ಸ್ಥಾಪಿಸಿದ ದತ್ತಿಯಿಂದ ನೀಡಲಾಗುತ್ತದೆ. ಪ್ರಶಸ್ತಿಯನ್ನು ಡಿ.10ರಂದು ಪ್ರದಾನ ಮಾಡಲಾಗುತ್ತದೆ.