Asianet Suvarna News Asianet Suvarna News

Sri Lanka Bankrupt : ಭಾರತದ ಉದಾಹರಣೆ ನೀಡಿ, 3.6 ಟನ್ ಚಿನ್ನ ಮಾರಾಟ ಮಾಡಿದ ಶ್ರೀಲಂಕಾ!

ದಿವಾಳಿಯಿಂದ ಪಾರಾಗಲು ಶ್ರೀಲಂಕಾದ ಕೊನೆಯ ಪ್ರಯತ್ನ
ಮೀಸಲು ಚಿನ್ನವನ್ನು ಮಾರಾಟ ಮಾಡಲು ನಿರ್ಧಾರ
2021ರ ಆರಂಭದಿಂದ ಈವರೆಗೂ 3.6 ಟನ್ ಚಿನ್ನ ಮಾರಾಟ ಮಾಡಿರುವ ಶ್ರೀಲಂಕಾ ಸೆಂಟ್ರಲ್ ಬ್ಯಾಂಕ್

Sri Lanka started selling gold to avoid bankruptcy gave the example of India san
Author
Bengaluru, First Published Jan 19, 2022, 2:14 PM IST

ನವದೆಹಲಿ (ಜ. 19): ಅತಿಯಾದ ಸಾಲ (Debt), ಹಣದುಬ್ಬರದಿಂದಾಗಿ (Inflation) ದಿವಾಳಿಯ (bankruptcy ) ಅಂಚಿನಲ್ಲಿರುವ ಶ್ರೀಲಂಕಾ (Sri Lanka) ಕೊನೆಯ ಪ್ರಯತ್ನವಾಗಿ ದೇಶದಲ್ಲಿರುವ ಚಿನ್ನದ ಮೀಸಲನ್ನು (gold reserves) ಮಾರಾಟ ಮಾಡಿದೆ. ದೇಶದ ವಿದೇಶಿ ವಿನಿಯಮ ಮೀಸಲು (foreign exchange reserves ) ಕೂಡ ಸಂಪೂರ್ಣವಾಗಿ ಖಾಲಿಯಾಗಿದೆ. ಇದರಿಂದಾಗಿ ದೇಶದ ಆಮದು ವ್ಯವಸ್ಥೆ ಹದೆಗೆಟ್ಟಿದೆ. ದೇಶವನ್ನು ಬಚಾವ್ ಮಾಡುವ ಕೊನೆಯ ಪ್ರಯತ್ನವಾಗಿ ಚಿನ್ನವನ್ನು ಮಾರಾಟ ಮಾಡಿ ವಿದೇಶಿ ವಿನಿಮಯಕ್ಕೆ ಹಣ ವ್ಯವಸ್ಥೆ ಮಾಡುತ್ತಿದೆ. ಭಾರತ ಕೂಡ ತನ್ನ ಸಂಕಷ್ಟದ ಸಮಯದಲ್ಲಿ ಚಿನ್ನವನ್ನು ಮಾರಾಟ ಮಾಡುವ ನಿರ್ಧಾರ ಮಾಡುತ್ತು ಎಂದು ಹೇಳುವ ಮೂಲಕ ಶ್ರೀಲಂಕಾದ ಅಗ್ರ ಅರ್ಥಶಾಸ್ತ್ರಜ್ಞ ದೇಶದ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಗವರ್ನರ್ ನಿವಾರ್ಡ್ ಕ್ಯಾಬ್ರಾಲ್ (Sri Lanka's central bank governor Nivard Cabral ) ಅವರು, ವಿದೇಶಿ ವಿನಿಮಯದಲ್ಲಿ ನಗದು ಹಣವನ್ನು ಏರಿಸುವ ನಿಟ್ಟಿನಲ್ಲಿ ಶ್ರೀಲಂಕಾ ತನ್ನ ಚಿನ್ನದ ಮೀಸಲಿನ ಒಂದು ಭಾಗವನ್ನು 2020ರ  ಡಿಸೆಂಬರ್ ನಲ್ಲಿ ಮಾರಾಟ ಮಾಡಿದೆ ಎಂದು ಹೇಳಿದ್ದಾರೆ. ಚೀನಾದೊಂದಿಗೆ ಕರೆನ್ಸಿ ವಿನಿಮಯದ ನಂತರ (ಡಾಲರ್ ಬದಲಿಗೆ ಪರಸ್ಪರರ ಕರೆನ್ಸಿಯಲ್ಲಿ ವ್ಯಾಪಾರ) ವರ್ಷದ ಕೊನೆಯಲ್ಲಿ ಚಿನ್ನದ ಮೀಸಲುಗಳನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಎಕಾನಮಿ ನೆಕ್ಸ್ಟ್‌ ಪತ್ರಿಕೆಯು ಮಾಡಿರುವ ವರದಿಯ ಪ್ರಕಾರ, ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ 2021 ಆರಂಭದ ವೇಳೆ 6.69 ಟನ್ ನಷ್ಟು ಚಿನ್ನದ ಮೀಸಲನ್ನು ತನ್ನಲ್ಲಿ ಹೊಂದಿತ್ತು. ದೇಶದ ಕಠಿಣ ಆರ್ಥಿಕ ಪರಿಸ್ಥಿತಿಯಿಂದಾಗಿ ಅಂದಾಜು 3.6 ಟನ್ ನಷ್ಟು ಚಿನ್ನವನ್ನು ಈ ದೇಶವು ಮಾರಾಟ ಮಾಡಿದೆ. ಪ್ರಸ್ತುತ ಶ್ರೀಲಂಕಾದಲ್ಲಿ 3 ಅಥವಾ 3.1 ಟನ್ ನಷ್ಟು ಮಾತ್ರವೇ ಚಿನ್ನದ ಮೀಸಲಿದೆ ಎಂದು ವರದಿ ಮಾಡಿದೆ.

ಇನ್ನು 2020ರ ಆರಂಭದಲ್ಲೂ ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಚಿನ್ನವನ್ನು ಮಾರಾಟ ಮಾಡಿತ್ತು.ವರ್ಷದ ಆರಂಭದಲ್ಲಿ ಶ್ರೀಲಂಕಾದಲ್ಲಿ 19.6 ಟನ್ ನಷ್ಟು ಚಿನ್ನವಿತ್ತ.ವರ್ಷದ ಕೊನೆಯ ವೇಳೆಗೆ 12.3 ಟನ್ ನಷ್ಟು ಚಿನ್ನವನ್ನು ಬ್ಯಾಂಕ್ ಮಾರಾಟ ಮಾಡಿದೆ.

ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಿಸುವ ಸಲುವಾಗಿ ಚಿನ್ನದ ಮಾರಾಟ ಮಾಡಲಾಗಿದೆ ಎಂದು ಗವರ್ನರ್ ಕ್ಯಾಬ್ರಾಲ್ ಹೇಳಿದ್ದಾರೆ. “ವಿದೇಶಿ ಮೀಸಲು ಕಡಿಮೆಯಾದಾಗ, ನಾವು ಚಿನ್ನದ ಹೋಲ್ಡಿಂಗ್ ಅನ್ನು ಕಡಿಮೆ ಮಾಡುತ್ತೇವೆ. ವಿದೇಶಿ ಮೀಸಲು ಹೆಚ್ಚಾದಾಗ ನಾವು ಚಿನ್ನವನ್ನು ಖರೀದಿಸಿದ್ದೇವೆ. ಒಮ್ಮೆ ಮೀಸಲು ಮಟ್ಟವು USD 5 ಶತಕೋಟಿಗಿಂತ ಹೆಚ್ಚಾದರೆ, ಕೇಂದ್ರ ಬ್ಯಾಂಕ್ ಚಿನ್ನದ ಹೋಲ್ಡಿಂಗ್  ಹೆಚ್ಚಿಸುವುದನ್ನು ಪರಿಗಣಿಸುತ್ತದೆ ಎಂದಿದ್ದಾರೆ.

Sri Lanka food prices : ಹಸಿ ಮೆಣಸಿನಕಾಯಿ ಕೆಜಿಗೆ 710 ರೂಪಾಯಿ, ಬಟಾಟೆ ಕೆಜಿಗೆ 200 ರೂಪಾಯಿ!
1991ರಲ್ಲಿ ಭಾರತ ಎದುರಿಸಿದ್ದ ಪರಿಸ್ಥಿತಿಯನ್ನು ಶ್ರೀಲಂಕಾ ಸದಸ್ಯ ಎದುರಿಸುತ್ತಿದೆ. ಅಂದು ಭಾರತ ದಿವಾಳಿಯಾಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ದೇಶದ ಚಿನ್ನವನ್ನು ಅಡಮಾನವಿಟ್ಟಿತ್ತು ಎಂದು ಶ್ರೀಲಂಕಾ ಸೆಂಟ್ರಲ್ ಬ್ಯಾಂಕ್ ನ ಉಪ ಗವರ್ನರ್ ಡಾ. ಡಬ್ಲ್ಯು ಎ ವಿಜೆವರ್ಧನೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. "ದೇಶವೊಂದು ದಿವಾಳಿಯ ಅಂಚಿನಲ್ಲಿರುವಾಗ ಅದರಿಂದ ಪಾರಾಗುವ ಕೊನೆಯ ಅವಕಾಶ ಎಂದರೆ ಮೀಸಲು ಚಿನ್ನವನ್ನು ಮಾರಾಟ ಮಾಡುವುದು. ದೇಶದ ಮುಂದೆ ಬೇರೆ ಯಾವುದೇ ಆಯ್ಕೆಗಳು ಇಲ್ಲದೇ ಇದ್ದಾಗ ಇದನ್ನು ಮಾಡಬೇಕಾಗುತ್ತದೆ. 1991ರಲ್ಲಿ ಭಾರತ (India)ಕೂಡ ಇದನ್ನು ಮಾಡಿತ್ತು' ಎಂದು ಹೇಳಿದ್ದಾರೆ.

Sri Lanka on the verge of Bankrupt : ತರಕಾರಿ ಮಾರ್ಕೆಟ್ ಅಲ್ಲಿ ಗ್ರಾಮ್ ಲೆಕ್ಕದಲ್ಲಿ ಮಾರಾಟ!
ಭಾರತ ಸರ್ಕಾರ ಈ ವಿಚಾರವನ್ನು ದೇಶದ ಜನತೆಯಿಂದ ಮುಚ್ಚಿಟ್ಟಿತ್ತು. ಆದರೆ, ಬಳಿಕ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಇದನ್ನು ಲೋಕಸಭೆಯಲ್ಲಿಯೇ ಒಪ್ಪಿಕೊಂಡಿದ್ದರು. ಚಿನ್ನವನ್ನು ಅಂದು ಅಡವಿಡುವುದಕ್ಕಿಂತ ಬೇರೆ ಆಯ್ಕೆ ಇದ್ದಿರಲಿಲ್ಲ. ಇಂದು ಶ್ರೀಲಂಕಾ ಚಿನ್ನವನ್ನು ಮಾರಾಟ ಮಾಡುತ್ತಿರುವುದು ಕೂಡ, 1991ರಲ್ಲಿ ಭಾರತ ಎದುರಿಸಿದ ರೀತಿಯದ್ದೇ ಪರಿಸ್ಥಿತಿಯಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. 1991ರಲ್ಲಿ ಖಾಸಗೀಕರಣಕ್ಕೂ ಮುನ್ನ ಭಾರತದ ಆರ್ಥಿಕ ಸ್ಥಿತಿ ಕೆಟ್ಟದಾಗಿತ್ತು. ಈ ಹಂತದಲ್ಲಿ ಭಾರತ 20 ಸಾವಿರ ಕೆಜಿ ಚಿನ್ನವನ್ನು ಸ್ವಿಜರ್ಲೆಂಡ್ ನ ಯುಬಿಎಸ್ ಬ್ಯಾಂಕ್ ನಲ್ಲಿ ಗುಪ್ತವಾಗಿ ಅಡಮಾನವಿಟ್ಟು, 200 ಮಿಲಿಯನ್ ಯುಎಸ್ ಡಾಲರ್ ಹಣ ಪಡೆದುಕೊಂಡಿತ್ತು.ಅದಾದ ಬಳಿಕ ಮತ್ತೊಮ್ಮೆ 47 ಟನ್ ಚಿನ್ನವನ್ನು 400 ಮಿಲಿಯನ್ ಯುಎಸ್ ಡಾಲರ್ ಗೆ ಅಡಮಾನ ಇರಿಸಲಾಗಿತ್ತು. ಈ ಹಂತದಲ್ಲಿ ಮನಮೋಹನ್ ಸಿಂಗ್ ದೇಶದ ಹಣಕಾಸು ಸಚಿವರಾಗಿದ್ದರು. ದೇಶದ ಆರ್ಥಿಕ ಸ್ಥಿತಿ ಪ್ರಗತಿಯಾದಾಗ, ಈ ಚಿನ್ನವನ್ನು ಮರಳಿ ಪಡೆಯಲಾಗಿತ್ತು.

Follow Us:
Download App:
  • android
  • ios