Asianet Suvarna News Asianet Suvarna News

ಹಣ, ಡೀಸೆಲ್ ಇಲ್ಲದೇ ಲಂಕಾ ಚಿಂತಾಜನಕ, ಔಷಧಕ್ಕೂ ಕಾಸಿಲ್ಲ: ಮಾಸಾಂತ್ಯಕ್ಕೆ ಎಲ್ಲವೂ ಖಾಲಿ!

ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಔಷಧ, ಸಲಕರಣೆ ಇಲ್ಲದೇ ಶೀಘ್ರ ತುರ್ತು ಚಿಕಿತ್ಸೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಈಗಾಗಲೇ ಭಾರತ ಕೊಟ್ಟ500 ದಶಲಕ್ಷ ಡಾಲರ್‌ ಸಾಲ ಖಾಲಿಯಾಗಿದ್ದು, ಮಾಸಾಂತ್ಯಕ್ಕೆ ಡೀಸೆಲ್‌ ಮುಗಿಯುವ ಸಾಧ್ಯತೆಗಳಿವೆ. 

Sri Lanka May Have No Fuel By April End Despite India Help pod
Author
Bangalore, First Published Apr 9, 2022, 7:38 AM IST

ಕೊಲಂಬೋ(ಏ.09): ಈಗಾಗಲೇ ತೀವ್ರ ಆರ್ಥಿಕ ಹೊಡೆತದಿಂದ ತತ್ತರಿಸುತ್ತಿರುವ ಶ್ರೀಲಂಕಾ ಮತ್ತೊಂದು ಭಾರೀ ಬಿಕ್ಕಟ್ಟಿನ ಕೂಪಕ್ಕೆ ನೂಕಲ್ಪಡುವ ಅಪಾಯ ಎದುರಿಸುತ್ತಿದೆ. ಭಾರತ ನೀಡಿದ್ದ 500 ದಶಲಕ್ಷ ಡಾಲರ್‌ ಸಾಲದ ಹಣ ಖಾಲಿ ಆಗುತ್ತಿದ್ದು, ಏಪ್ರಿಲ್‌ ಅಂತ್ಯಕ್ಕೆ ದೇಶದಲ್ಲಿನ ಡೀಸೆಲ್‌ ದಾಸ್ತಾನು ಖಾಲಿ ಆಗುವ ಭೀತಿ ಸೃಷ್ಟಿಯಾಗಿದೆ. ಇನ್ನೊಂದೆಡೆ ಔಷಧ ಹಾಗೂ ವೈದ್ಯಕೀಯ ಸಲಕರಣೆಗಳ ಖರೀದಿಗೂ ಹಣವಿಲ್ಲದಂತಾಗಿದ್ದು, ಶೀಘ್ರದಲ್ಲೇ ತುರ್ತು ಚಿಕಿತ್ಸೆ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

41 ಸಂಸದರ ದಂಗೆ, ಲಂಕಾ ಸರ್ಕಾರ ಪತನ? ಹೊಸ ವಿತ್ತ ಮಂತ್ರಿ ಒಂದೇ ದಿನಕ್ಕೆ ರಾಜೀನಾಮೆ!

ಇದರ ನಡುವೆ, ಸರ್ಕಾರದ ವೈಫಲ್ಯದ ವಿರುದ್ಧ ವಿಪಕ್ಷಗಳು ಸಿಡಿದೆದ್ದಿವೆ. ಶೀಘ್ರದಲ್ಲೇ ಬಿಕ್ಕಟ್ಟು ಬಗೆಹರಿಸದೇ ಇದ್ದರೆ ಗೋಟಬಾಯ ರಾಜಪಕ್ಸೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತದೆ ಎಂದು ಪ್ರಮುಖ ವಿಪಕ್ಷ ಎಚ್ಚರಿಸಿದೆ. ಉದ್ದಿಮೆದಾರರು ಹಾಗೂ ವ್ಯಾಪಾರಿಗಳು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಮುಖ ವಸ್ತುಗಳ ರಫ್ತು ಶೇ.30ರಷ್ಟುಕುಸಿಯಲಿದ್ದು, ಮತ್ತಷ್ಟುಆರ್ಥಿಕ ಸಂಕಟ ಎದುರಾಗಲಿದೆ ಎಂದು ಹೇಳಿದ್ದಾರೆ. ಈಗಾಗಲೇ 41 ಸಂಸದರು ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ದಾರೆ. ಆದರೂ ತಮಗೆ ಬಹುಮತ ಇದೆ ಎಂದು ರಾಜಪಕ್ಸೆ ಹೇಳಿಕೊಳ್ಳುತ್ತಿದ್ದಾರೆ.

ಡೀಸೆಲ್‌ ಖಾಲಿ ಭೀತಿ:

ಶ್ರೀಲಂಕಾದಲ್ಲಿ ಡೀಸೆಲ್‌ ಪ್ರಮುಖ ಇಂಧನವಾಗಿದ್ದು, ತುರ್ತಾಗಿ ತೈಲ ಬೇಕಾದ ಕಾರಣ ಏಪ್ರಿಲ್‌ನಲ್ಲಿ ಪೂರೈಕೆ ಆಗಬೇಕಿದ್ದ ಡೀಸೆಲ್‌ ಅನ್ನು ಮಾಚ್‌ರ್‍ಗೇ ತರಿಸಿಕೊಂಡಿದೆ. ಇನ್ನು ಭಾರತ ಕೊಟ್ಟಸಾಲದಿಂದ ಏ.15, 18 ಹಾಗೂ 23ರಂದೂ ಡೀಸೆಲ್‌ ಸ್ಟಾಕ್‌ ಬರಲಿದೆ. ಆದರೆ ಇದಾದ ನಂತರ, ಭಾರತ ಕೊಟ್ಟಹಣ ಖಾಲಿ ಆಗಲಿದ್ದು, ಡೀಸೆಲ್‌ ತರಿಸಿಕೊಳ್ಳಲೂ ಹಣವಿಲ್ಲ. ಒಂದು ವೇಳೆ ಭಾರತ ಮತ್ತಷ್ಟುಸಾಲ ಕೊಡದೇ ಹೋದರೆ ಮಾಸಾಂತ್ಯಕ್ಕೆ ಡೀಸೆಲ್‌ ಸ್ಟಾಕ್‌ ಖಾಲಿ ಆಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಥರ್ಮಲ್‌ ಘಟಕಗಳು ಕೆಲಸ ನಿಲ್ಲಿಸಿರುವ ಕಾರಣ ದೇಶದಲ್ಲಿ 10 ತಾಸು ನಿತ್ಯ ವಿದ್ಯುತ್‌ ಕಡಿತ ಮಾಡಲಾಗುತ್ತದೆ.

Sri Lanka Crisis ಇಡೀ ದೇಶವನ್ನೇ ಚೀನಾಕ್ಕೆ ಮಾರಿದ್ದೀರಿ, ಶ್ರೀಲಂಕಾ ಪ್ರಧಾನಿ ವಿರುದ್ಧ ವ್ಯಾಪಾರಿಗಳ ಆಕ್ರೋಶ!

ತುರ್ತು ಚಿಕಿತ್ಸೆ ನಿಲ್ಲುವ ಆತಂಕ:

ಈ ನಡುವೆ ಶ್ರೀಲಂಕಾ ವೈದ್ಯಕೀಯ ಮಂಡಳಿಯು ಅಧ್ಯಕ್ಷ ರಾಜಪಕ್ಸೆಗೆ ಪತ್ರ ಬರದಿದ್ದು, ಔಷಧ ಮತ್ತು ಚಿಕಿತ್ಸಾ ಸಲಕರಣೆ ತರಿಸಿಕೊಳ್ಳಲು ಕೂಡ ಹಣವಿಲ್ಲ. ಹೀಗಾಗಿ ಶೀಘ್ರದಲ್ಲೇ ತುರ್ತು ಚಿಕಿತ್ಸಾ ಸೌಲಭ್ಯ ನಿಲ್ಲುವ ಆತಂಕವಿದೆ. ಈಗಾಗಲೇ ಕೆಲವು ತುರ್ತು ಅಗತ್ಯವಲ್ಲದ ವೈದ್ಯಕೀಯ ಸೇವೆಗಳನ್ನು ನಿಲ್ಲಸಲಾಗಿದೆ ಎಂದಿದೆ.

ಔಷಧ ಹಾಗೂ ಸಲಕರಣೆಗಳು ಪೂರೈಕೆ ಆಗದೇ ಹೋದರೆ ಮುಂಬರುವ ವಾರಗಳಲ್ಲಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲಾಗದು. ಆಗ ಭಾರೀ ಪ್ರಮಾಣದ ಸಾವು ನೋವು ಸಂಭವಿಸುವ ಭೀತಿಯಿದೆ ಎಂದು ಪತ್ರದಲ್ಲಿ ಎಚ್ಚರಿಸಿದೆ.

ಶ್ರೀಲಂಕಾ ಪ್ರವಾಸ ಮಾಡದಂತೆ ತನ್ನ ನಾಗರೀಕರಿಗೆ ಎಚ್ಚರಿಕೆ ನೀಡಿದ ಅಮೆರಿಕ!

 

ಕೋವಿಡ್-19 ಮತ್ತು ಇಂಧನ ಮತ್ತು ಔಷಧದ ಕೊರತೆಯಿಂದಾಗಿ ಶ್ರೀಲಂಕಾಕ್ಕೆ ಪ್ರಯಾಣವನ್ನು ಮರುಪರಿಶೀಲನೆ ಮಾಡಿ. ಭಯೋತ್ಪಾದನೆಯಿಂದಾಗಿ ಶ್ರೀಲಂಕಾದಲ್ಲಿ ಹೆಚ್ಚಿನ ಎಚ್ಚರಿಕೆಯಲ್ಲಿ ವ್ಯವಹಾರ ನಡೆಸಿ ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ತನ್ನ ಇತ್ತೀಚಿನ ಪ್ರಯಾಣ ಸಲಹೆಯಲ್ಲಿ ತಿಳಿಸಿದೆ ಅದನ್ನು ಈಗ ಹಂತ 3 ರಲ್ಲಿ ಇರಿಸಲಾಗಿದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು (CDC) ಕೋವಿಡ್-19 ಕಾರಣದಿಂದಾಗಿ ಶ್ರೀಲಂಕಾಕ್ಕೆ 3 ನೇ ಹಂತದ ಪ್ರಯಾಣದ ಆರೋಗ್ಯ ಸೂಚನೆಯನ್ನು ನೀಡಿದೆ, ಇದು ದೇಶದಲ್ಲಿ ಹೆಚ್ಚಿನ ಮಟ್ಟದ ಕೋವಿಡ್-19 ಸೋಂಕು ಇದೆ ಎನ್ನುವುದನ್ನು ಸೂಚಿಸುತ್ತದೆ.

ನೀವು ಎಫ್‌ಡಿಎ-ಅಧಿಕೃತ ಲಸಿಕೆಯೊಂದಿಗೆ ಸಂಪೂರ್ಣವಾಗಿ ಲಸಿಕೆಯನ್ನು ಪಡೆದರೆ ನಿಮ್ಮ ಕೋವಿಡ್-19 ಅನ್ನು ಸಂಕುಚಿತಗೊಳಿಸುವ ಮತ್ತು ತೀವ್ರವಾದ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸುವ ಅಪಾಯವು ಕಡಿಮೆಯಾಗಬಹುದು. ಯಾವುದೇ ಅಂತರರಾಷ್ಟ್ರೀಯ ಪ್ರಯಾಣವನ್ನು ಯೋಜಿಸುವ ಮೊದಲು, ಲಸಿಕೆ ಹಾಕಿದ ಮತ್ತು ಲಸಿಕೆ ಹಾಕದ ಪ್ರಯಾಣಿಕರಿಗೆ ಸಿಡಿಸಿಯ ನಿರ್ದಿಷ್ಟ ಶಿಫಾರಸುಗಳನ್ನು ಪರಿಶೀಲಿಸಿ ಎಂದು ಅಮೆರಿಕ ಹೇಳಿದೆ.

Sri Lanka Crisis ಕರ್ಫ್ಯೂ, ತುರ್ತುಪರಿಸ್ಥಿತಿ ಬೆನ್ನಲ್ಲೇ ಪರಿಸ್ಥಿತಿ ಗಂಭೀರ, ಶ್ರೀಲಂಕಾದಲ್ಲಿ ಲಾಕ್‌ಡೌನ್ ಘೋಷಣೆ!

ದೇಶದಲ್ಲಿ ನಡೆಯುತ್ತಿರುವ ಕೆಟ್ಟ ಆರ್ಥಿಕ ಪರಿಸ್ಥಿತಿಯಿಂದಾಗಿ ಶ್ರೀಲಂಕಾವು ಇಂಧನ ಮತ್ತು ಅಡುಗೆ ಅನಿಲದ ಜೊತೆಗೆ ಕೆಲವು ಔಷಧಿಗಳು ಮತ್ತು ಅಗತ್ಯ ಆಹಾರ ಪದಾರ್ಥಗಳ ಕೊರತೆಯನ್ನು ಅನುಭವಿಸುತ್ತಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.ದೇಶದ ಹದಗೆಟ್ಟ ಆರ್ಥಿಕ ಪರಿಸ್ಥಿತಿಯಲ್ಲಿ ಗ್ಯಾಸ್ ಸ್ಟೇಷನ್‌ಗಳು, ಕಿರಾಣಿ ಅಂಗಡಿಗಳು ಮತ್ತು ಕೆಲವು ಔಷಧಾಲಯಗಳಲ್ಲಿ ಸರತಿ ಸಾಲಿನಲ್ಲಿ ಪ್ರತಿಭಟನೆಗಳು ನಡೆದಿವೆ. ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದು, ಬಹುತೇಕ ಶಾಂತಿಯುತವಾಗಿವೆ. ಕೆಲವು ಸಂದರ್ಭಗಳಲ್ಲಿ, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯುವನ್ನೂ ಬಳಸಿದ್ದಾರೆ ಎಂದು ಅದು ಹೇಳಿದೆ.

"ಬ್ಯಾಕಪ್ ಜನರೇಟರ್‌ಗಳಿಗೆ ಇಂಧನವು ವಿರಳವಾಗಿರುವುದರಿಂದ ದ್ವೀಪದಾದ್ಯಂತ ದೈನಂದಿನ  ವಿದ್ಯುತ್ ಕಡಿತಗಳು ಮತ್ತು ಕೆಲವು ಯೋಜಿತವಲ್ಲದ ವಿದ್ಯುತ್ ನಿಲುಗಡೆಗಳು ನಡೆದಿವೆ. ಕೆಲವು ಸಂದರ್ಭಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಸೀಮಿತಗೊಳಿಸಲಾಗಿದೆ ಅಥವಾ ಮೊಟಕುಗೊಳಿಸಲಾಗಿದೆ. ಪ್ರಸ್ತುತ ಪರಿಸ್ಥಿತಿಯ ನವೀಕರಣಗಳಿಗಾಗಿ ಪ್ರಯಾಣಿಕರು ಸ್ಥಳೀಯ ಮಾಧ್ಯಮವನ್ನು ಗಮನಿಸಬೇಕು ಎಂದು ಅಮೆರಿಕ ಹೇಳಿದೆ.

Follow Us:
Download App:
  • android
  • ios