ಚೀನಾಕ್ಕೆ 1 ಲಕ್ಷ ಮಂಗಗಳನ್ನು ಮಾರಾಟ ಮಾಡಲಿರುವ ಶ್ರೀಲಂಕಾ, ಕಾರಣವೇನು?

ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ಶ್ರೀಲಂಕಾಕ್ಕೆ ಮಂಗಗಳು ಇನ್ನೊಂದು ರೀತಿಯ ತಾಪತ್ರಯ ತಂದಿಟ್ಟಿದೆ. ಇದರಿಂದಾಗಿ ಶ್ರೀಲಂಕಾ 1 ಲಕ್ಷ ಮಂಗಗಳನ್ನು ಚೀನಾಕ್ಕೆ ಮಾರಾಟ ಮಾಡಲು ನಿರ್ಧಾರ ಮಾಡಿದೆ. ಇತ್ತೀಚೆಗೆ ಪಾಕ್‌ನಿಂದ ಕತ್ತೆಗಳನ್ನು ಸ್ವೀಕರಿಸಿದ್ದ ಚೀನಾ ಈಗ ಶ್ರೀಲಂಕಾದ ಮಂಗಗಳನ್ನು ಖರೀದಿ ಮಾಡಲಿದೆ.
 

Sri Lanka Economic Crisis will sell 1 lakh monkeys to China causing a loss of 157 crores every year san

ಕೊಲಂಬೊ (ಏ.14): ತೀವ್ರ ಅರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಶ್ರೀಲಂಕಾ, ತನ್ನ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಲು ವಿವಿಧ ಮಾರ್ಗಗಳನ್ನು ಹುಡುಕುತ್ತಿದೆ. ಈಗ ಅಲ್ಲಿನ ಸರ್ಕಾರವು ತನ್ನ ಟೋಕ್ ಮಕಾಕ್ ಮಂಗಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡಲು ಚೀನಾದಿಂದ ಸಹಾಯವನ್ನು ಪಡೆಯಲಿದೆ. ಶ್ರೀಲಂಕಾದ ಕೃಷಿ ಸಚಿವ ಮಹೀಂದ್ರ ಅಮರವೀರ ಈ ಮಾಹಿತಿ ನೀಡಿದ್ದಾರೆ. ಏಪ್ರಿಲ್ 12 ರಂದು ನೀಡಿದ ಹೇಳಿಕೆಯಲ್ಲಿ, ಚೀನಾವು ತನ್ನ 1 ಸಾವಿರ ಮೃಗಾಲಯಗಳಿಗೆ ಮಂಗಳಗಳು ಬೇಕು ಎಂದು ಶ್ರೀಲಂಕಾವನ್ನು ಕೇಳಿದೆ. ಅದಕ್ಕಾಗಿ ಶ್ರೀಲಂಕಾ ತನ್ನ ಟೋಕ್‌ ಮಕಾಕ್‌ ಮಂಗಗಳನ್ನು ಚೀನಾಕ್ಕೆ ರವಾನಿಸುವ ನಿಟ್ಟಿನಲ್ಲಿ ಹಾಗೂ ಚೀನಾದ ಮನವಿಯನ್ನು ಪರಿಗಣಿಸಲು ಸಮಿತಿಯನ್ನು ರಚನೆ ಮಾಡಿದೆ. ಒಂದು ಅಂದಾಜಿನ ಪ್ರಕಾರ ಚೀನಾಕ್ಕೆ ಒಂದು ಲಕ್ಷ ಮಂಗಗಳನ್ನು ರವಾನೆ ಮಾಡುವ ಸಂಪೂರ್ಣ ಯೋಜನೆ ಶ್ರೀಲಂಕಾದಲ್ಲಿ ಸಿದ್ಧವಾಗುತ್ತಿದೆ. ಈ ನಡುವೆ ಶ್ರೀಲಂಕಾದಲ್ಲಿನ ಪರಿಸರವಾದಿಗಳು ಸ್ಥಳೀಯ ಸರ್ಕಾರ ಯಾವುದೇ ಕಾರಣಕ್ಕೂ ಈ ಮನವಿಯನ್ನು ಪರಿಗಣಿಸಬಾರದು. ತನ್ನ ಮೃಗಾಲಯಗಳಿಗೆ ಕೋತಿಗಳು ಬೇಕು ಎಂದು ಚೀನಾ ಹೇಳಿದ್ದರೂ, ಅದರ ಹಿಂದಿನ ಉದ್ದೇಶ ಬೇರೆಯದೇ ಆಗಿದೆ. ಚೀನಾ ಮಾಂಸಕ್ಕಾಗಿ ಈ ಮಂಗಗಳನ್ನು ಖರೀದಿ ಮಾಡುತ್ತಿದೆ ಎಂದು ಹೇಳಲಾಗಿದೆ. 

ಚೀನಾಕ್ಕೆ ಮಕಾಕ್ ಮಂಗಗಳನ್ನು ನೀಡುವ ಮುನ್ನವೇ ಶ್ರೀಲಂಕಾದ ಪರಿಸರವಾದಿಗಳು ಇದನ್ನು ವಿರೋಧಿಸಲು ಆರಂಭಿಸಿದ್ದಾರೆ. ವರದಿಗಳ ಪ್ರಕಾರ, ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಸರ್ಕಾರವು ದೇಶದಲ್ಲಿ ಮಂಗಗಳ ಗಣತಿಯನ್ನು ಮಾಡಬೇಕು ಎಂದು ಆಗ್ರಹಪಡಿಸಿದ್ದಾರೆ. ಅದಲ್ಲದೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಮಂಗಗಳನ್ನು ಚೀನಾ ಖರೀದಿ ಮಾಡುವ ಹಿಂದಿನ ಮೂಲ ಕಾರಣವೇನು ಎಂದೂ ಪ್ರಶ್ನೆ ಮಾಡಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಪರಿಸರವಾದಿ ಜಗತ್‌ ಗುಣವರ್ಧನ, 'ಚೀನಾ ಯಾಕಾಗಿ ಇಷ್ಟು ಪ್ರಮಾಣದ ಕೋತಿಗಳನ್ನು ಶ್ರೀಲಂಕಾದಿಂದ ಬಯಸುತ್ತಿದೆ ಎನ್ನುವುದು ಮೊದಲು ಗೊತ್ತಾಗಬೇಕಿದೆ. ಅವುಗಳನ್ನು ಸಂಶೋಧನೆಯ ಕಾರಣಕ್ಕಾಗಿ ಬಳಸಿಕೊಳ್ಳಲಿದೆಯೇ ಅಥವಾ ಕೋತಿಯ ಮಾಂಸವನ್ನು ತಿನ್ನುವ ಉದ್ದೇಶದಿಂದ ಖರೀದಿ ಮಾಡುತ್ತಿದೆಯೇ ಎನ್ನುವುದು ಗೊತ್ತಾಗಬೇಕು' ಎಂದಿದ್ದಾರೆ. ಹಾಗಂತ ಶ್ರೀಲಂಕಾದಲ್ಲಿ ಮಂಗಗಳು ಸಂರಕ್ಷಿತ ಪ್ರಾಣಿಗಳ ಪಟ್ಟಿಯಲ್ಲಿಲ್ಲ. ಆದರೆ ಅವುಗಳನ್ನು ಅಂತರರಾಷ್ಟ್ರೀಯ ಕೆಂಪು ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

Jan Ki Baat Suvarna Survey: ಫಲಿತಾಂಶಕ್ಕೂ ಮುನ್ನವೇ ಜನ್ ಕಿ ಬಾತ್ ಹೇಳುತ್ತೆ ನಿಖರ ನಂಬರ್ಸ್‌!

ಮಂಗಗಳಿದ 157 ಕೋಟಿ ನಷ್ಟ: ಶ್ರೀಲಂಕಾದಲ್ಲಿ ಮೂರು ಜಾತಿಯ ಕೋತಿಗಳಿವೆ. ಇವುಗಳಲ್ಲಿ, ಟೋಕ್ ಮಕಾಕ್ ಮಂಗಗಳ ಜನಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ. ವರದಿಯ ಪ್ರಕಾರ, ಶ್ರೀಲಂಕಾದಲ್ಲಿ ಟೋಕ್ ಮಕಾಕ್ ಮಂಗಗಳ ಸಂಖ್ಯೆ 20 ರಿಂದ 30 ಲಕ್ಷಗಳ ನಡುವೆ ಇದೆ. ಇದು ಶ್ರೀಲಂಕಾದಲ್ಲಿ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ಕಾರಣದಿಂದಾಗಿ, ಇತ್ತೀಚಿನ ದಿನಗಳಲ್ಲಿ, ಶ್ರೀಲಂಕಾ ಕೆಲವು ಪ್ರಾಣಿಗಳನ್ನು ಸಂರಕ್ಷಿತ ಪ್ರಾಣಿಗಳ ಪಟ್ಟಿಯಿಂದ ಹೊರಗಿಟ್ಟಿದೆ. ಇದರಿಂದ ಅಲ್ಲಿನ ರೈತರು ಅವರನ್ನು ಕೊಲ್ಲಲು ಪರವಾನಿಗೆ ಪಡೆದಿದ್ದಾರೆ. ಪ್ರಸ್ತುತ ಶ್ರೀಲಂಕಾದಲ್ಲಿ ಮಂಗಗಳು, ನವಿಲು ಹಾಗೂ ಹಂದಿಯನ್ನು ಸಂರಕ್ಷಿತ ಪ್ರಾಣಿಗಳ ಪಟ್ಟಿಯಿಂದ ಹೊರಗಡೆ ಇಡಲಾಗಿದೆ.

ಏಕಕಾಲದಲ್ಲಿ 11 ಸಾವಿರ ಕಲಾವಿದರಿಂದ ಬಿಹು ನೃತ್ಯ, ಗಿನ್ನೆಸ್‌ ವಿಶ್ವದಾಖಲೆ!

ಕೃಷಿ ಸಚಿವ ನೀಡಿರುವ ಮಾಹಿತಿಗಳ ಪ್ರಕಾರ, ಶ್ರೀಲಂಕಾದಲ್ಲಿ ಮಂಗಗಳು ಹಾಗೂ ಅಳಿಲುಗಳ ಉಪಟಳ ಎಷ್ಟಾಗಿದೆಯೆಂದರೆ, 1 ಕೋಟಿ ತೆಂಗಿನಕಾಯಿಗಳನ್ನು ಇವುಗಳು ಹಾಳು ಮಾಡುತ್ತವೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ದೇಶಕ್ಕೆ ಸುಮಾರು 157 ಕೋಟಿ ನಷ್ಟ ಉಂಟಾಗಿದೆ. ಇಷ್ಟು ಮಾತ್ರವಲ್ಲದೆ, ರೈತರು ಬೆಳೆದ ಬೆಳೆಗಳು ಹಾಗು ಧಾನ್ಯಗಳನ್ನೂ ಸಹ ಮಂಗಗಳು ಹಾಳು ಮಾಡುತ್ತಿದೆ.

Latest Videos
Follow Us:
Download App:
  • android
  • ios