Jan Ki Baat Suvarna Survey: ಫಲಿತಾಂಶಕ್ಕೂ ಮುನ್ನವೇ ಜನ್ ಕಿ ಬಾತ್ ಹೇಳುತ್ತೆ ನಿಖರ ನಂಬರ್ಸ್!
ಜನ್ ಕೀ ಬಾತ್ ಸುವರ್ಣ ಸರ್ವೆ ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರು. ಕರ್ನಾಟಕ ಮತ್ತೊಂದು ಮಹಾ ವಿಧಾನಸಭೆ ಚುನಾವಣೆಗೆ ಅಣಿಯಾಗಿರುವ ಹೊತ್ತಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜನ್ ಕೀ ಬಾತ್ ಸುವರ್ಣ ಸರ್ವೆಯ ನಿಖರ ನಂಬರ್‌ಗಳೊಂದಿಗೆ ಜನರ ಮುಂದೆ ಬಂದಿದೆ.
ಬೆಂಗಳೂರು (ಏ.14): ಹಿಂದಿನೆಲ್ಲಾ ಚುನಾವಣೆಗೆ ಹೋಲಿಸಿದರೆ, ಈ ಬಾರಿಯ ಕರ್ನಾಟಕ ವಿಧಾನಸಭೆ ರಣ ರೋಚಕ ಕಣವಾಗಿದೆ. ಬಿರುಬೇಸಿಗೆಯಲ್ಲಿ ಕರ್ನಾಟಕ ರಾಜಕೀಯ ಕೂಡ ಬಿಸಿಕೆಂಡದಂತಾಗಿದೆ. ಇದರ ನಡುವೆ ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರು ಎನ್ನಲಾಗುವ ಜನ್ ಕೀ ಬಾತ್ ಸುವರ್ಣ ಸರ್ವೆ ತನ್ನ ನಿಖರ ಎಲೆಕ್ಷನ್ ನಂಬರ್‌ಗಳೊಂದಿಗೆ ಜನರ ಮುಂದೆ ಬಂದಿದೆ. ಜನ್ ಕೀ ಬಾತ್ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ತನ್ನ ಸಂಖ್ಯೆಗಳಿಗೆ ಹೆಸರುವಾಸಿ. ಎಲೆಕ್ಷನ್ ಸಮೀಕ್ಷೆಗಳ ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರು ಎನ್ನುವ ರೀತಿಯಲ್ಲಿ ಜನ್ ಕೀ ಬಾತ್ ಗುರುತಿಸಿಕೊಂಡಿದೆ. ದೇಶದಲ್ಲಿ ಯಾವುದೇ ಎಲೆಕ್ಷನ್ ನಡೆದರೂ ಇಡೀ ದೇಶ ಜನ್ ಕಿ ಬಾತ್ ಸಮೀಕ್ಷೆಗಾಗಿ ಕಾಯುತ್ತದೆ. ಯಾವ ಸರ್ಕಾರ ಬರುತ್ತದೆ? ಯಾರು ಅಧಿಕಾರ ಹಿಡಿಯುತ್ತಾರೆ ಅನ್ನೋ ಕುತೂಹಲವನ್ನ ನಿಖರ ಅಂಕಿ ಸಂಖ್ಯೆಗಳ ಮೂಲಕ ನೀಡುವ ಸಂಸ್ಥೆಯೇ ಜನ್ ಕಿ ಬಾತ್. ಅತ್ಯುತ್ತಮ ರಾಜಕೀಯ ನಿಪುಣರ ತಂಡ ಹೊಂದಿರೋ ಜನ್ ಕಿ ಬಾತ್ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು ಲೋಕಸಭಾ ಚುನಾವಣೆಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುತ್ತದೆ.
ಜನ್ ಕಿ ಬಾತ್ ಪ್ರಧಾನ ಸಂಪಾದಕ ಪ್ರದೀಪ್ ಭಂಡಾರಿ ದೇಶದ ಅತ್ಯುತ್ತಮ ಚುನಾವಣಾ ತಜ್ಞರಲ್ಲಿ ಒಬ್ಬರು. ದೇಶದ ಚುನಾವಣಾ ಪೂರ್ವ ಸಮೀಕ್ಷೆಗಳಾಗಲಿ, ಮತಗಟ್ಟೆ ಸಮೀಕ್ಷೆಗಳಾಗಲಿ, ವಸ್ತು ನಿಷ್ಠವಾಗಿ ಜನರ ನಾಡಿ ಮಿಡಿತವನ್ನ ಸಮರ್ಥವಾಗಿ ಗ್ರಹಿಸಿ ಫಲಿತಾಂಶಕ್ಕೆ ಹತ್ತಿರದ ಸಂಖ್ಯೆಗಳನ್ನ ಕೊಡುವ ಹೆಗ್ಗಳಿಗೆ ಜನ್ ಕಿ ಬಾತ್ ಸಂಸ್ಥೆಯದ್ದು.
2018ರ ಕರ್ನಾಟಕ ಚುನಾವಣೆಯಲ್ಲಿ ಫರ್ಫೆಕ್ಟ್ ನಂಬರ್: ಜನ್ ಕಿ ಬಾತ್ ಸಂಸ್ಥೆ ಇದುವರೆಗೆ 36 ಚುನಾವಣಾ ಸಮೀಕ್ಷೆಗಳಲ್ಲಿ ಖಚಿತ ಭವಿಷ್ಯ ನುಡಿದ ಹೆಗ್ಗಳಿಕೆ ಇದೆ. ಯಾವುದೇ ಚುನಾವಣೆ ಇರಲಿ ಊರೂರು ಸುತ್ತಿ, ಜನರನ್ನ ಮಾತಾಡಿಸಿ ಅವರ ನಾಡಿ ಮಿಡಿತ ಅರಿತು ಫಲಿತಾಂಶಕ್ಕೆ ಹತ್ತಿರವಾದ ಸಂಖ್ಯೆಗಳನ್ನ ಜನ್ ಕಿ ಬಾತ್ ನೀಡುತ್ತದೆ. 2018ರ ಕರ್ನಾಟಕ ಚುನಾವಣೆಯಲ್ಲಿ ಜನ್ ಕಿ ಬಾತ್ ಅತ್ಯಂತ ಪರ್ಫೆಕ್ಟ್ ಎನಿಸುವಂಥ ನಂಬರ್ ನೀಡಿತ್ತು.
2018ರ ಚುನಾವಣೆಯಲ್ಲಿ ಜನ್ ಕಿ ಬಾತ್ ಬಿಜೆಪಿ 102 ರಿಂದ 108 ಸೀಟ್‌ಗಳನ್ನು ಗೆಲ್ಲಲಿದೆ ಎಂದು ಹೇಳಿದ್ದರೆ, ಕಾಂಗ್ರೆಸ್ 72-74, ಜೆಡಿಎಸ್ 42-44 ಹಾಗೂ ಇತರೆ 2-4 ಸೀಟ್‌ಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ಪ್ರಕಟಿಸಿತ್ತು. ಅದರಂತೆ ಅಂತಿಮ ಫಲಿತಾಂಶದಲ್ಲಿ ಬಿಜೆಪಿ 104, ಕಾಂಗ್ರೆಸ್ 81, ಜೆಡಿಎಸ್ 37 ಹಾಗೂ ಇತರೆ 2 ಸೀಟ್‌ಗಳನ್ನು ಜಯಿಸಿತ್ತು.
ಇನ್ನು 2018ರ ಮತಗಟ್ಟೆ ಸಮೀಕ್ಷೆಯಲ್ಲೂ ಜನ್ ಕಿ ಬಾತ್ ಹೇಳಿದ್ದ ಸಮೀಕ್ಷೆ ನೂರಕ್ಕೆ ನೂರರಷ್ಟು ಸತ್ಯವಾಗಿತ್ತು. ಸಮೀಕ್ಷೆ ಬಿಜೆಪಿ 95-114 ಸ್ಥಾನ ಎಂದು ಗೆಲ್ಲಲಿದೆ ಎಂದು ಹೇಳಿದ್ದರೆ, ಬಿಜೆಪಿ 104 ಸ್ಥಾನ ಗಳಿಸಿತ್ತು. ಕಾಂಗ್ರೆಸ್ 81 ಸ್ಥಾನ ಗೆದ್ದಿತ್ತು. ಎಕ್ಸಿಟ್ ಪೋಲ್ ನಲ್ಲಿ 75 ರಿಂದ 82 ಸ್ಥಾನ ಸಿಗಲಿದೆ ಎಂದು ಹೇಳಲಾಗಿತ್ತು. ಜೆಡಿಎಸ್ 32 ರಂದ 43 ಸ್ಥಾನ ಸಿಗಲಿದೆ ಎಂದು ಸಮೀಕ್ಷೆ ಹೇಳಿತ್ತು ಜೆಡಿಎಸ್ 37 ಸ್ಥಾನ ಗೆದ್ದಿತ್ತು.
News Hour: ಕಾಂಗ್ರೆಸ್, ಬಿಜೆಪಿ ಬಂಡಾಯ.. ಜೆಡಿಎಸ್ ಬಂಡವಾಳ!
ನಿಖರ ನಂಬರ್‌ಗಳಿಗೆ ಹೆಸರುವಾಸಿಯಾಗಿರುವ ಜನ್ ಕೀ ಬಾತ್, ಈಗ 2023ರ ಚುನಾವಣಾ ಪೂರ್ವ ಸಮೀಕ್ಷೆ ಮಾಡಿದೆ. ಮತ್ತೆ ಅಧಿಕಾರದ ಗದ್ದುಗೆಗೆ ಬಿಜೆಪಿ ಏರುತ್ತಾ? ಕಾಂಗ್ರೆಸ್ ನಾಯಕರ ರಣತಂತ್ರ ವರ್ಕೌಟ್ ಆಗುತ್ತಾ? 2 ರಾಷ್ಟ್ರೀಯ ಪಕ್ಷಗಳ ಮಧ್ಯೆ ಜೆಡಿಎಸ್ ಕಥೆ ಏನು? ಎನ್ನುವುದರ ಬಗ್ಗೆ ಸಮಗ್ರವಾಗಿ ಜನ್ ಕೀ ಬಾತ್ ಸಮೀಕ್ಷೆ ತಿಳಿಸಲಿದೆ.
ಬಳಸೋ ಶಬ್ದದ ಬಗ್ಗೆ ಎಚ್ಚರಿಕೆ ಇರ್ಲಿ, ಸೈಲೆಂಟ್ ಸುನೀಲನಿಗೆ ಅಣ್ಣಾಮಲೈ ವಾರ್ನಿಂಗ್!
ಕರ್ನಾಟಕ ಚುನಾವಣೆಯ ಪ್ರಮುಖ ದಿನಾಂಕಗಳು: ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ನಾಮಪತ್ರ ಸಲ್ಲಿಕೆ ಏಪ್ರಿಲ್ 13 ರಿಂದ ಆರಂಭವಾಗಿದೆ. ಇನ್ನು, ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.