ಕೋವಿಡ್ ಸಂಕ್ರಾಮಿಕದಿಂದಾಗಿ ನಿಲುಗಡೆಯಾಗಿದ್ದ ಸ್ಪೇನ್‌ನ ಖ್ಯಾತ ಹಬ್ಬ ಟೊಮೆಟೋ ಫೆಸ್ಟಿವಲ್ ಟೊಮೆಟಿನೊ ಎರಡು ವರ್ಷಗಳ ನಂತರ ಮತ್ತೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಟೊಮೆಟಿನೋ ಹಬ್ಬದ ಕಲರ್‌ಫುಲ್ ಫೋಟೋ ವಿಡಿಯೋಗಳು ಮೈಮನ ಸೆಳೆಯುತ್ತಿದ್ದೆ.

ಕೋವಿಡ್ ಸಂಕ್ರಾಮಿಕದಿಂದಾಗಿ ನಿಲುಗಡೆಯಾಗಿದ್ದ ಸ್ಪೇನ್‌ನ ಖ್ಯಾತ ಹಬ್ಬ ಟೊಮೆಟೋ ಫೆಸ್ಟಿವಲ್ ಟೊಮೆಟಿನೊ ಎರಡು ವರ್ಷಗಳ ನಂತರ ಮತ್ತೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಟೊಮೆಟಿನೋ ಹಬ್ಬದ ಕಲರ್‌ಫುಲ್ ಫೋಟೋ ವಿಡಿಯೋಗಳು ಮೈಮನ ಸೆಳೆಯುತ್ತಿದೆ. ಅನೇಕರು ಟೊಮೆಟೋಗಳನ್ನು ಪರಸ್ಪರ ಎರಚಾಡಿಕೊಂಡು, ಟೊಮೆಟೋ ಮೇಲೆ ಬಿದ್ದು ಒದ್ದಾಡಿಕೊಂಡು ಟೊಮೆಟೋ ರೀತಿ ಕಾಣಿಸುತ್ತಿದ್ದಾರೆ. 

ಸ್ಪ್ಯಾನಿಷ್ ಪಟ್ಟಣವಾದ ಬುನೋಲ್‌ನಲ್ಲಿ ಸಾವಿರಾರು ಜನ ಈ ಟೊಮೆಟಿನೋ (tomatino)ಹಬ್ಬದಲ್ಲಿ ಭಾಗಿಯಾಗಿ ಪರಸ್ಪರ ಟೊಮೆಟೊ ಎರಚಾಡುತ್ತಾ ಸಂಭ್ರಮಿಸಿದರು. ಈ ಟೊಮೆಟೋ ಹಬ್ಬಕ್ಕಾಗಿ ಆರು ಟ್ರಕ್‌ಗಳಲ್ಲಿ ಸುಮಾರು 130 ಟನ್ ಮಾಗಿದ ಟೊಮೆಟೊಗಳನ್ನು ತರಲಾಗಿತ್ತು. ಸ್ಪೇನ್‌ನ ಪೂರ್ವ ಪಟ್ಟಣದ ಕಿರಿದಾದ ಬೀದಿಗಳಲ್ಲಿ ಈ ಮೋಜು ನೀಡುವ ಹಬ್ಬವನ್ನು ಆಚರಿಸಲಾಯಿತು. ಟ್ರಕ್‌ನಲ್ಲಿದ್ದ ತಂಡಗಳು ಈ ಒಂದು ಗಂಟೆಗಳ ಕಾಲ ನಡೆಯುವ ಮೋಜಿನ ಹಬ್ಬಕ್ಕೆ ಜನರಿಗೆ ಟೊಮೆಟೋ ವಿತರಿಸಿದರು.

ಈ ಟೊಮೆಟೋ ಹಬ್ಬವನ್ನು ವಿಶ್ವದ ಅತಿದೊಡ್ಡ ಆಹಾರ ಹೋರಾಟ (the world’s biggest food fight) ಎಂದು ಹೇಳಲಾಗುತ್ತದೆ. ಈ ಹಬ್ಬ ವಿಶೇಷವಾಗಿ ಆಸ್ಟ್ರೇಲಿಯಾ, ಬ್ರಿಟನ್, ಜಪಾನ್ (Japan) ಮತ್ತು ಅಮೆರಿಕಾದ (US) ವಿದೇಶಿಯರ ಪಾಲಿಗೆ ಪ್ರಮುಖ ಆಕರ್ಷಣೆಯಾಗಿದೆ.

ಪಾಕಿಸ್ತಾನದಲ್ಲಿ ಟೊಮೇಟೋ ಕೆಜಿಗೆ 500, ಈರುಳ್ಳಿ ಕೆಜಿಗೆ 400 ರೂಪಾಯಿ, ಭಾರತದ ಸಹಾಯ ಬೇಡಿದ ನೆರೆಯ ದೇಶ!

ಆದಾಗ್ಯೂ ಈ ಬಾರಿ 20 ಸಾವಿರ ಟಿಕೆಟ್‌ಗಳ ಪೈಕಿ ಕೇವಲ 15 ಸಾವಿರ ಟಿಕೆಟ್ ಮಾತ್ರ ಖರೀದಿಯಾಗಿದ್ದವು. ಕೋವಿಡ್‌ ನಿಯಮಗಳ ಕಾರಣದಿಂದ ಏಷ್ಯಾದ ದೇಶಗಳಿಂದ (Asian country) ಕಡಿಮೆ ಸಂಖ್ಯೆಯ ಜನ ಆಗಮಿಸಿದ್ದರಿಂದ 5 ಸಾವಿರ ಟಿಕೆಟ್ ಬಾಕಿಯಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಟೊಮೆಟೋ ಜ್ಯೂಸ್ ಕುಡಿದ್ರೆ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚು !

ಮಧ್ಯಾಹ್ನ ಪಟಾಕಿಗಳ ಅಬ್ಬರದೊಂದಿಗೆ ಆರಂಭವಾದ ಈ ಹಬ್ಬ ಸ್ವಲ್ಪದರಲ್ಲೇ ಇಡೀ ಬೀದಿ ಬೀದಿಗಳನ್ನು ಕೆಂಪಗಾಗಿಸಿದವು. 

ಈ ಆಟದಲ್ಲಿ ಭಾಗವಹಿಸಿದ ಕೆಲವರು ತಮ್ಮ ಕಣ್ಣುಗಳ ರಕ್ಷಣೆಗೆ ಕನ್ನಡಕವನ್ನು ಧರಿಸಿದ್ದರು. ಇನ್ನು ಕೆಲವರು ಟೊಮೆಟೋ ಹೆಕ್ಕಲು ಕೆಳಗೆ ಬಾಗಿದವರು ಟೊಮೆಟೋ ಮೇಲೆ ಉರುಳಾಡಿದರು. 

ಈ ಆಟದಲ್ಲಿ ಭಾಗವಹಿಸಿದ ಮೆಕ್ಸಿಕೋದ ಮಹಿಳೆಯೊಬ್ಬರು, ಇದೊಂದು ಬಹಳ ಮೋಜಿನ ವಿಚಾರವಾಗಿರುವುದರಿಂದ ನಾವು ಇಲ್ಲಿಗೆ ಆಗಮಿಸಿದೆವು ಎಂದು ಹೇಳಿದರು. ಸುಮಾರು 9,500 ಜನರಿರುವ ಈ ಪಟ್ಟಣವು 2013 ರಿಂದ ಕೋವಿಡ್ ಸಾಂಕ್ರಾಮಿಕಕ್ಕೂ ಮೊದಲು 2019 ರಲ್ಲಿ ನಡೆದ ಉತ್ಸವಕ್ಕೆ ಹೆಚ್ಚುತ್ತಿರುವ ಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಭಾಗವಹಿಸುವಿಕೆಯ ಶುಲ್ಕವನ್ನು ವಿಧಿಸಲು ಶುರು ಮಾಡಿತ್ತು. 

ನಮ್ಮ ಇಷ್ಟದ ಈ ಹಬ್ಬವನ್ನು ಪುನರಾರಂಭಿಸಲು ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ, ಮತ್ತೊಮ್ಮೆ ಟೊಮೆಟೊಗಳನ್ನು ಪರಸ್ಪರ ಎಸೆಯಲು ಮತ್ತು ಕಳೆದ ಎರಡು ವರ್ಷಗಳಲ್ಲಿ ಅನುಭವಿಸಿದ ಎಲ್ಲಾ ಒತ್ತಡಗಳಿಂದ ಹೊರಗೆ ಬರಲು ನಾವು ಬಹಳ ಉತ್ಸುಕಾಗಿದ್ದೇವೆ ಎಂದು ಬುನೋಲ್‌ನ ಪ್ರವಾಸೋದ್ಯಮ ಇಲಾಖೆಯ ಟೌನ್ ಕೌನ್ಸಿಲರ್ ಮರಿಯಾ ವ್ಯಾಲ್ಸ್ ಹೇಳಿದರು.


ಈ ಟೊಮೆಟೋ ಫೆಸ್ಟ್‌ ನಲ್ಲಿ ಸಂಗೀತ ಕಚೇರಿ ಸೇರಿದಂತೆ ಹಲವು ಸ್ಪರ್ಧೆಗಳಿದ್ದು ರಾತ್ರಿಯವರೆಗೆ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. 

1945ರಲ್ಲಿ ಮೊದಲ ಬಾರಿಗೆ ಟೊಮೆಟೋ ಫೆಸ್ಟ್ Tomatina ನಡೆಯಿತು. ಈ ಜಾನಪದ ಉತ್ಸವದಲ್ಲಿ ಬೀದಿಯಲ್ಲಿ ಜಗಳವಾಡುತ್ತಿದ್ದ ಸ್ಥಳೀಯರು ಕಿರಾಣಿ ಅಂಗಡಿಯಿಂದ ಟೊಮೆಟೊಗಳನ್ನು ಎತ್ತಿಕೊಂಡು ಬಂದು ಪರಸ್ಪರ ಎಸೆಯುವ ಮೂಲಕ ಹಬ್ಬ ಆಚರಿಸುತ್ತಿದ್ದರು. 

ಹಬ್ಬದ ಜನಪ್ರಿಯತೆಯಿಂದಾಗಿ 2002 ರಲ್ಲಿ ಸ್ಪೇನ್‌ನ ಪ್ರವಾಸೋದ್ಯಮ ಕಾರ್ಯದರ್ಶಿ ಈ ಹಬ್ಬಕ್ಕೆ ಅಂತಾರಾಷ್ಟ್ರೀಯ ಪ್ರವಾಸಿ ಆಸಕ್ತಿಯ ಉತ್ಸವ ಎಂದು ಕರೆದರು. ಮುಂದೆ ಈ ಹಬ್ಬ ಇತರ ದೇಶಗಳಿಗೂ ಹಬ್ಬಿತ್ತು. ಕೊಲಂಬಿಯಾ, ಕೋಸ್ಟರಿಕಾ, ಚಿಲಿ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಈ ಹಬ್ಬ ಆಚರಿಸಲು ಸ್ಪೇನ್‌ನ ಟೊಮೆಟಿನೋ ಪ್ರೇರಣೆ ನೀಡಿದೆ.