ಶಭಾಷ್ ಲಿಂಡಾ... ಒಂದು ಗಂಟೆಯಲ್ಲಿ 23 ಬಾರಿ ಬಂಗಿ ಜಂಪ್ ಮಾಡಿದ 50ರ ನಾರಿ

ಬಂಗಿ ಜಂಪ್ ಎನ್ನುವುದು ಸಾಹಸ ಕ್ರೀಡೆ. ಇದನ್ನು ಮಾಡಲು ನೂರುಗುಂಡಿಗೆ ಬೇಕು. ಕೆಳಗೆ ನೋಡಿದರೆ ತರ ತರ ನಡುಗಿ ತಲೆ ತಿರುಗಿ ಬೀಳುವಷ್ಟು ಎತ್ತರದಲ್ಲಿ ನಿಂತು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಕೆಳಗೆ ಹಾರುವ ಈ ಸಾಹಸ ಕ್ರೀಡೆಗೆ ಗಟ್ಟಿ ಗುಂಡಿಗೆ ಬೇಕೇ ಬೇಕು.

South African woman create world record doing 23 bungee jumps in one hour akb

ಬಂಗಿ ಜಂಪ್ ಎನ್ನುವುದು ಸಾಹಸ ಕ್ರೀಡೆ. ಇದನ್ನು ಮಾಡಲು ನೂರುಗುಂಡಿಗೆ ಬೇಕು. ಕೆಳಗೆ ನೋಡಿದರೆ ತರ ತರ ನಡುಗಿ ತಲೆ ತಿರುಗಿ ಬೀಳುವಷ್ಟು ಎತ್ತರದಲ್ಲಿ ನಿಂತು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಕೆಳಗೆ ಹಾರುವ ಈ ಸಾಹಸ ಕ್ರೀಡೆಗೆ ಗಟ್ಟಿ ಗುಂಡಿಗೆ ಬೇಕೇ ಬೇಕು. ಆರೋಗ್ಯವೂ ಅಷ್ಟೇ ಚೆನ್ನಾಗಿರಬೇಕು. ಯೌವ್ವನದಲ್ಲಿ ಅಸಾಧ್ಯವೆಂಬುದು ಯಾವುದು ಇಲ್ಲ ಎಂಬ ಮಾತಿನಂತೆ ಕೆಲ ತರುಣಿಯರು ಯುವ ತರುಣರು ಇಂತಹ ಸಾಹಸ ಕ್ರೀಡೆಗೆ ಮುಂದಾಗಿ ಸೈ ಎನಿಸಿಕೊಂಡಿದ್ದಾರೆ. ಆದರೆ ಈಗ 50 ವರ್ಷ ವಯಸ್ಸಿನ ಮಹಿಳೆಯೊಬ್ಬರು ಇದರಲ್ಲಿ ದೊಡ್ಡ ದಾಖಲೆಯನ್ನೇ ನಿರ್ಮಿಸುವ ಮೂಲಕ ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದ (South Africa) ಲಿಂಡಾ ಪೊಟ್ಗೀಟರ್ (Linda Potgieter) ಎಂಬ 50 ವರ್ಷದ ಮಹಿಳೆಯೇ ಈ ಸಾಧನೆ ಮಾಡಿದ ಸಾಧಕಿ. ಇವರು ಕೇವಲ ಒಂದು ಗಂಟೆಯಲ್ಲಿ ಒಟ್ಟು 23 ಭಾರಿ ಬಂಗಿ ಜಂಪ್ ಮಾಡಿದ್ದಾರೆ. ಈ ಮೂಲಕ ಅವರು ಈ ಸಾಧನೆ ಮಾಡಿದ ಮೊದಲಿಗರು ಎನಿಸಿ ಗಿನ್ನೆಸ್ ಪುಟ ಸೇರಿದ್ದಾರೆ. 20 ಮೀಟರ್‌ಗೂ ಅಧಿಕ ಉದ್ದದ ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಂಡು ಒಂದು ಗಂಟೆಯಲ್ಲಿ 23 ಭಾರಿ ಭಂಗಿ ಜಂಪ್ ಮಾಡಿದ್ದಾರೆ. ಇದಕ್ಕೆ ಅವರು ಆಯ್ದುಕೊಂಡ ಸ್ಥಳ ದಕ್ಷಿಣ ಆಫ್ರಿಕಾದ ಅತೀ ಎತ್ತರದ ಸೇತುವೆ ಎನಿಸಿದ ಬ್ಲೌಕ್ರಾನ್ಸ್ ಸೇತುವೆ (Bloukrans Bridge). ಇದು ಬ್ಲೌಕ್ರಾನ್ಸ್ ನದಿಯಿಂದ 216 ಮೀಟರ್ ಅಂದರೆ ಸುಮಾರು 216 ಅಡಿ ಎತ್ತರದಲ್ಲಿದೆ. 

Paragliding : ಅಧ್ಬುತ ಅನುಭವ ಪಡೆಯಲು travel tips

ಗಿನ್ನೆಸ್ ಸಂಸ್ಥೆಯ ವರದಿಯ ಪ್ರಕಾರ ಲಿಂಡಾ ಅವರು ತಮ್ಮ 10ನೇ ಜಿಗಿತವನ್ನು 23 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಆದರೆ ಬಲು ಎತ್ತರದಿಂದ ನಿರಂತರ ಜಿಗಿತದಿಂದಾಗಿ ಅವರಿಗೆ ಸುಸ್ತಾಗಲು ಆರಂಭವಾಯಿತು. ಆದಾಗ್ಯೂ ಅವರು ಸಾಧನೆ ಮಾಡಿಯೇ ತಿರಬೇಕು ಎಂದು ಹಠಕ್ಕೆ ಬಿದ್ದು, ಒಂದು ಗಂಟೆಯಲ್ಲಿ 23 ಬಂಗಿ ಜಂಪ್ ಮಾಡಿದ್ದಾರೆ. ಆ ಮೂಲಕ ಅವರು  ಹಿಂದಿನ ಸಾಧನೆಯಾಗಿದ್ದ 19 ಭಂಗಿ ಜಂಪ್ ಬ್ರೇಕ್ ಮಾಡಿ ಹೊಸ ವಿಶ್ವದಾಖಲೆ ನಿರ್ಮಿಸಿದರು. ಅವರ 23ನೇ ಬಂಗಿ ಜಂಪ್ ಆದಾಗ ಒಂದು ಗಂಟೆಯಾಗಲು ಒಂದು ನಿಮಿಷವಷ್ಟೇ ಉಳಿದಿತ್ತು. 

95 ವರ್ಷದ ವಿಶ್ವದ ಅತ್ಯಂತ ಹಿರಿಯ ವಿಂಗ್ ವಾಕರ್‌: ವಿಡಿಯೋ ವೈರಲ್‌

ಈ ಹಿಂದೆ 19 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ದಕ್ಷಿಣ ಆಫ್ರಿಕಾದ ಮತ್ತೊಬ್ಬ ಮಹಿಳೆ ವೆರೋನಿಕಾ ಡೀನ್ (Veronica Dean) ಎಂಬುವವರು 19 ಬಾರಿ ಬಂಗಿ ಜಂಪ್ ಮಾಡುವ ಮೂಲಕ ಸಾಧನೆ ಮಾಡಿದ್ದರು. ಇವರ ಈ ದಾಖಲೆಯನ್ನು ಲಿಂಡಾ ತಮ್ಮ 50ರ ಹರೆಯದಲ್ಲಿ ಬ್ರೇಕ್ ಮಾಡಿದ್ದಾರೆ. ಈ ಹೊಸ ಸಾಧನೆಯ ಬಳಿಕ ಮಾತನಾಡಿದ ಲಿಂಡಾ, 'ತನ್ನ ಈ ಸಾಧನೆಯ ಹಿಂದಿನ ಎಲ್ಲಾ ಕೀರ್ತಿಯನ್ನು ಭಗವಂತನಿಗೆ ಆರ್ಪಿಸಿದ್ದಾರೆ, ಆತನಿಂದಾಗಿ ಇದು ಸಾಧ್ಯವಾಯಿತು ಎಂದಿದ್ದಾರೆ. ನನ್ನ ಪತಿ ಹಾಗೂ ನನ್ನ ಮಕ್ಕಳಿಗೆ ಧನ್ಯವಾದಗಳು, ನಾನು ಕೇವಲ ಕೃತಜ್ಞಳಾಗಿದ್ದೇನೆ ಎಂದು ಲಿಂಡಾ ತನಗೆ ನಿರಂತರ ಬೆಂಬಲ ನೀಡಿದ ತಮ್ಮ ತಂಡಕ್ಕೆ ಧನ್ಯವಾದ ಸಲ್ಲಿಸಿದರು.  ಜಿಗಿದ ನಂತರ ತನ್ನನ್ನು ಅಷ್ಟೇ ವೇಗದಲ್ಲಿ ಸೇತುವೆಯ ಮೇಲೆ ಎಳೆದಿದ್ದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಇದು ತನ್ನ ಜೀವನದಲ್ಲಿ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. 
 

Latest Videos
Follow Us:
Download App:
  • android
  • ios